ಲೋಕಲ್ ನ್ಯೂಸ್: ಬಸವರಾಜ ಹಳ್ಳಿ
ನಮ್ಮ ಸಿಂಧನೂರು, ಏಪ್ರಿಲ್ 26
ನಗರದ ಸರ್ಕಾರಿ ಪದವಿ ಮಹಾವಿದ್ಯಾಲಯದ ಎಜ್ಯುಸ್ಯಾಟ್ ಹಾಲ್‌ನಲ್ಲಿ ಏಪ್ರಿಲ್ 27ರಂದು ಭಾನುವಾರ ಬೆಳಿಗ್ಗೆ 10 ಗಂಟೆಗೆ, ನಿಸರ್ಗ ಪ್ರಕಾಶನ ಹೊರ ತಂದಿರುವ ಕತೆಗಾರ ಅಮರೇಶ ಗಿಣಿವಾರ ಅವರು ರಚಿಸಿದ ‘ಬೀಜದ ಮನುಷ್ಯ’ ಕಥಾ ಸಂಕಲನ ಲೋಕಾರ್ಪಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.
ಕೃತಿಯ ಕುರಿತು ಉಪನ್ಯಾಸಕ ದೊಡ್ಡ ಹನುಮಂತ ಅಭಿಪ್ರಾಯ ಹಂಚಿಕೊಳ್ಳಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕವಿ ಆರಿಫ್ ರಾಜಾ ಪಾಲ್ಗೊಳ್ಳುವರು. ಸರ್ಕಾರಿ ಪದವಿ ಮಹಾವಿದ್ಯಾಲಯದ ಕನ್ನಡ ಅಧ್ಯಯನ ವಿಭಾಗದ ಮುಖ್ಯಸ್ಥ ಡಾ.ಜಾಜಿ ದೇವೇಂದ್ರಪ್ಪ, ಅಕ್ಷರ ಸಂಗಾತ ಪತ್ರಿಕೆಯ ಸಂಪಾದಕ ಡಾ.ಟಿ.ಎಸ್ ಗೊರವರ, ಉಪನ್ಯಾಸಕ ಚಂದ್ರಶೇಖರ ಗೊರಬಾಳ, ವಿಜಯ ಪಬ್ಲಿಕ್ ಸ್ಕೂಲ್‌ನ ಆಡಳಿತಾಧಿಕಾರಿ ಹನುಮೇಶ ಗುಡದೂರು, ಬರಹಗಾರ ಅಮರೇಶ ಗಿಣಿವಾರ ಉಪಸ್ಥಿತರಿರುವರು. ಅಧ್ಯಕ್ಷತೆಯನ್ನು ಮಹಾವಿದ್ಯಾಲಯದ ಪ್ರಾಂಶುಪಾಲ ಪ್ರೊ ಶಿವಯ್ಯ ಎಂ ಅವರು ವಹಿಸುವರು. ಉಪನ್ಯಾಸಕ ಡಾ.ಬಸವರಾಜ ಬಳಿಗಾರ ಕಾರ್ಯಕ್ರಮ ನಿರ್ವಹಿಸುವರು. ಬಸವರಾಜ ಬಾದರ್ಲಿ, ಸ್ವಾಗತಗೀತೆ ಪ್ರಸ್ತುತಪಡಿಸುವರು. ಉಪನ್ಯಾಸಕ ಡಾ.ಬಸವರಾಜ ಪಿ ನಾಯಕ ಪ್ರಾಸ್ತಾವಿಕವಾಗಿ ಮಾತನಾಡುವರು. ಉಪನ್ಯಾಸಕ ಡಾ.ಹುಸೇನಪ್ಪ ಅಮರಾಪುರ ವಂದನಾರ್ಪಣೆಯನ್ನು ನಿರ್ವಹಿಸುವರು.