ಲೋಕಲ್ ನ್ಯೂಸ್ : ಬಸವರಾಜ ಹಳ್ಳಿ
ನಮ್ಮ ಸಿಂಧನೂರು, ಆಗಸ್ಟ್ 30
ನಗರದ ಸರ್ಕಾರಿ ಪದವಿ ಮಹಾವಿದ್ಯಾಲಯದಲ್ಲಿ ಹೆಚ್ಚುವರಿ ಕಾರ್ಯಭಾರಕ್ಕನುಗುಣವಾಗಿ ನಿಯಮಾನು ಸಾರ ಅತಿಥಿ ಉಪನ್ಯಾಸಕರ ನೇಮಕದಲ್ಲಿ ಜ್ಯೇಷ್ಠತೆ ಕಡೆಗಣಿಸಿ ನಿಯಮ ಉಲ್ಲಂಘಿಸಲಾಗಿದೆ ಎಂಬ ಆರೋಪಗಳು ಕೇಳಿಬಂದಿವೆ. ಇಲಾಖೆಯ ಆಯುಕ್ತರ ಕಚೇರಿಯ ಆದೇಶದಂತೆ ಪದವಿ ಮಹಾವಿದ್ಯಾಲಯದ ಪ್ರಾಂಶುಪಾಲರು, ಪಿಜಿ ವಿಭಾಗದಲ್ಲಿ ಹೆಚ್ಚುವರಿ ಕಾರ್ಯಭಾರಕ್ಕನುಗುಣವಾಗಿ ದಿನಾಂಕ: 08-08-2024 ರಂದು ತಾತ್ಕಾಲಿಕವಾಗಿ ಅತಿಥಿ ಉಪನ್ಯಾಸಕರನ್ನು ನೇಮಿಸಿದ್ದರು. ಆದರೆ ದಿನಾಂಕ: 23-08-2024ರಂದು ಪ್ರಾಂಶುಪಾಲರು, ಹೆಚ್ಚುವರಿ ಕಾರ್ಯಭಾರಕ್ಕೆ ಅನುಗುಣವಾಗಿ ಅತಿಥಿ ಉಪನ್ಯಾಸಕರ ನೇಮಕದಲ್ಲಿ ಯುಜಿ ವಿದ್ಯಾರ್ಥಿಗಳಿಗೆ ಸಮಾಜಶಾಸ್ತç ಬೋಧನೆ ಮಾಡುತ್ತಿದ್ದ ಅತಿಥಿ ಉಪನ್ಯಾಸಕರೊಬ್ಬರನ್ನು ಏಕಾಏಕಿ ಕೈಬಿಟ್ಟು, ನೇಮಕ ಮಾಡಿಕೊಂಡಿರುವುದು ಅನುಮಾನಕ್ಕೆ ದಾರಿಮಾಡಿಕೊಟ್ಟಿದೆ.
ಪ್ರಾಂಶುಪಾಲರು ಎಮ್ಮೆಲ್ಸಿ ಪ್ರಭಾವಕ್ಕೆ ಮಣಿದರೇ ?
“ದಿನಾಂಕ: 23-08-2024ರಂದು ಬೆಳಿಗ್ಗೆ 9.45ಕ್ಕೆ ವಿಧಾನ ಪರಿಷತ್ ಸದಸ್ಯ ಬಸನಗೌಡ ಬಾದರ್ಲಿ ಅವರು ಕಾಲೇಜಿಗೆ ಭೇಟಿ ನೀಡಿ ಅತಿಥಿ ಉಪನ್ಯಾಸಕರಿಂದ ಮೌಖಿಕ ಮನವಿಯನ್ನು ಆಲಿಸಿ ಸ್ನಾತಕೋತ್ತರ ತರಗತಿಗಳ ಕಾರ್ಯಭಾರವನ್ನು ಅತಿಥಿ ಉಪನ್ಯಾಸಕರಿಗೆ ಹಂಚುವ ವಿಷಯಕ್ಕೆ ಸಂಬಂಧಿಸಿದಂತೆ ಜಂಟಿ ನಿರ್ದೇಶಕರು ಕಲಬುರಗಿ ಇವರಿಗೆ ಫೋನ್ ಮೂಲಕ ಮಾತನಾಡಿರುತ್ತಾರೆ. ಜಂಟಿ ನಿರ್ದೇಶಕರು, ಜ್ಯೇಷ್ಠತೆಯನ್ನು ಪರಿಗಣಿಸದೇ ಈ ಹಿಂದೆ ಸ್ನಾತಕೋತ್ತರ ಕೋರ್ಸ್‌ಗಳ ಶೈಕ್ಷಣಿಕ ವೇಳಾಪಟ್ಟಿಯಂತೆ ಕಾರ್ಯಭಾರ ಹಂಚಿಕೆ ಮಾಡಿದ ಅತಿಥಿ ಉಪನ್ಯಾಸಕರನ್ನು ಕರ್ತವ್ಯದಲ್ಲಿ ಮುಂದುವರೆಸಿ, ಅವರಿಂದ ಬೋಧನಾ ಕಾರ್ಯಭಾರವನ್ನು ಸ್ನಾತಕೋತ್ತರ ಕೋರ್ಸುಗಳ ಶೈಕ್ಷಣಿಕ ಅವಧಿಯು ಮುಕ್ತಾಯ ಅಥವಾ 2024-25ನೇ ಸಾಲಿನ ಅತಿಥಿ ಉಪನ್ಯಾಸಕರ ನೇಮಕಾತಿ ಕೌನ್ಸೆಲಿಂಗ್ ಯಾವುದು ಮೊದಲೋ ಅಲ್ಲಿಯವರೆಗೆ ಕರ್ತವ್ಯದಲ್ಲಿ ಮುಂದುವರಿಸಬೇಕೆಂದು ಮೌಖಿಕವಾಗಿ ಸೂಚಿಸಿರುತ್ತಾರೆ. ಜಂಟಿ ನಿರ್ದೇಶಕರ ನಿರ್ದೇಶನವನ್ನು ಪರಿಪಾಲಿಸಬೇಕೆಂದು ಎಮ್ಮಲ್ಸಿಯವರು ತಮಗೆ ಸೂಚಿಸಿರುತ್ತಾರೆ. ಪ್ರಯುಕ್ತ ಕಾಲೇಜಿನ ಸ್ನಾತಕೋತ್ತರ ವಿಭಾಗ ಮುಖ್ಯಸ್ಥರಿಂದ ಅತಿಥಿ ಉಪನ್ಯಾಸಕರಿಗೆ ವಹಿಸಿದ ಕಾರ್ಯಭಾರ ವೇಳಾಪಟ್ಟಿಯಂತೆ ಅತಿಥಿ ಉಪನ್ಯಾಸಕರನ್ನು ತಾತ್ಕಾಲಿಕವಾಗಿ ಮುಂದುವರಿಸಲಾಗಿದೆ” ಎಂದು ಪ್ರಾಂಶುಪಾಲರು ಕಚೇರಿ ಸುತ್ತೋಲೆ ಹೊರಡಿಸಿದ್ದಾರೆ. ಈ ಸುತ್ತೋಲೆಯನ್ನು ಗಮನಿಸಿದರೆ ಪ್ರಾಂಶುಪಾಲರು ಎಮ್ಮೆಲ್ಸಿ ಅವರ ಪ್ರಭಾವಕ್ಕೆ ಮಣಿದರೆ ? ಎಂಬ ಅನುಮಾನ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗಿದೆ.
ಇಲಾಖೆ ಆಯುಕ್ತರ ಆದೇಶ, ಜಂಟಿ ನಿರ್ದೇಶಕರಿಂದ ಉಲ್ಲಂಘನೆ ಆರೋಪ ?
“ಆಯುಕ್ತರ ಆದೇಶ ಸಂಖ್ಯೆ ಕಾಶಿಇ/ನೇವಿ-೧/ಅಉಆ/೯೦/೨೦೨-೨೪/ಬೆಂಗಳೂರು ದಿನಾಂಕ: ೦೫/೦೮/೨೦೨೪ ಹಾಗೂ ಈ ಕಚೇರಿ ಪತ್ರ ಸಂಖ್ಯೆ: ಸ.ಪ.ಮ.ಸಿಂ/ಹೆ.ಕಾ/ಅ.ಉ.ನೇ/೨೦೨೩-೨೪ ದಿನಾಂಕ:೦೭-೦೯-೨೦೨೪ರನ್ವಯ ೨೦೨೩-೨೪ನೇ ಸಾಲಿನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಅತಿಥಿ ಉಪನ್ಯಾಸಕರಿಗೆ 10 ತಿಂಗಳ ಶೈಕ್ಷಣಿಕ ಅವಧಿಯು ಮುಕ್ತಾಯ ಹೊಂದಿದ ದಿನಾಂಕ: 06/08/2024ರಂದು ಬಿಡುಗಡೆ ಮಾಡಿ ಬಾಕಿ ಉಳಿದ ಸ್ನಾತಕೋತ್ತರ ತರಗತಿಗಳ ಹೆಚ್ಚುವರಿ ಕಾರ್ಯಭಾರಕ್ಕೆ ತಕ್ಕಂತೆ ಜ್ಯೇಷ್ಠತೆಯನುಸಾರ ಮತ್ತು ನಿಯಮಾನುಸಾರ ಅತಿಥಿ ಉಪನ್ಯಾಸಕರನ್ನು ನೇಮಿಸಲು ಸೂಚಿಸಿದ್ದಾರೆ” ಎಂದು ಒಂದೆಡೆ ಪ್ರಾಂಶುಪಾಲರು ಕಚೇರಿ ಸುತ್ತೋಲೆಯಲ್ಲಿ ತಿಳಿಸಿದರೆ, ಮತ್ತೊಂದೆಡೆ, “ಜ್ಯೇಷ್ಠತೆಯನ್ನು ಪರಿಗಣಿಸದೇ ಅತಿಥಿ ಉಪನ್ಯಾಸಕರನ್ನು ಕರ್ತವ್ಯದಲ್ಲಿ ಮುಂದುವರಿಸಿ ಎಂದು ಜಂಟಿ ನಿರ್ದೇಶಕರು ಮೌಖಿಕ ಆದೇಶ ನೀಡಿದ್ದಾರೆ” ಎಂದು ಇನ್ನೊಂದು ಸುತ್ತೋಲೆಯಲ್ಲಿ ಪ್ರಸ್ತಾಪಿಸಿದ್ದಾರೆ. ಹಾಗಾದರೆ ಪ್ರಾಂಶುಪಾಲರು ಇಲಾಖೆಯ ಆಯುಕ್ತರ ಆದೇಶ ಪರಿಗಣಿಸಬೇಕೋ ಇಲ್ಲವೇ ಜಂಟಿ ನಿರ್ದೇಶಕರ ಮೌಖಿಕ ಹೇಳಿಕೆ ಪರಿಗಣಿಸಬೇಕೋ ಎಂಬುದು ಗೊಂದಲಕ್ಕೆ ಈಡು ಮಾಡಿದೆ.
ಸಿಡಿಸಿ ಅಧ್ಯಕ್ಷರ ಗಮನಕ್ಕಿಲ್ಲ ?
ಶಾಸಕ ಹಂಪನಗೌಡ ಬಾದರ್ಲಿ ಅವರು ಸರ್ಕಾರಿ ಪದವಿ ಮಹಾವಿದ್ಯಾಲಯದ ಸಿಡಿಸಿ ಅಧ್ಯಕ್ಷರಾಗಿದ್ದು, ಹೆಚ್ಚುವರಿ ಕಾರ್ಯಭಾರದ ಅತಿಥಿ ಉಪನ್ಯಾಸಕರ ತಾತ್ಕಾಲಿಕ ನೇಮಕದ ಕುರಿತಂತೆ ಅವರ ಗಮನಕ್ಕಿಲ್ಲ ಎಂದು ಹೇಳಲಾಗುತ್ತಿದೆ. ಹಾಗಾಗಿ ಇಲಾಖೆಯ ನಿಯಮಾವಳಿಗಳ ಪ್ರಕಾರ, ಜ್ಯೇಷ್ಠತೆಯ ನಿಯಮಾನುಸಾರ ಯಾರನ್ನೂ ಕಡೆಗಣಿಸದೇ ಈ ಹಿಂದೆ ಕರ್ತವ್ಯದಲ್ಲಿದ್ದ ಎಲ್ಲ ಉಪನ್ಯಾಸಕರನ್ನೂ ಮುಂದುವರಿಸುವAತೆ ಕ್ರಮ ಕೈಗೊಳ್ಳಲು ಪ್ರಾಂಶುಪಾಲರಿಗೆ ಶಾಸಕರು ಸೂಚಿಸಿದ್ದಾರೆಂದು ಹೇಳಲಾಗುತ್ತಿದೆ.