ನಮ್ಮ ಸಿಂಧನೂರು, ಡಿಸೆಂಬರ್ 23
ನಗರದ ಟೌನ್ಹಾಲ್ನಲ್ಲಿ ಶಾಸಕ ಹಂಪನಗೌಡ ಬಾದರ್ಲಿಯವರ ನೇತೃತ್ವದಲ್ಲಿ ನಡೆಯಬೇಕಿದ್ದ ಸಿಂಧನೂರು ಜಿಲ್ಲಾ ಘೋಷಣೆ ಪ್ರಸ್ತಾವನೆ ಕುರಿತ ಸರ್ವಪಕ್ಷದ ಮುಖಂಡರ ಸಭೆ, ನಾನಾ ಕಾರಣಗಳ ಕಾರಣ ಮಂಗಳವಾರ ನಡೆಯಲಿಲ್ಲ. ನಿರ್ಮಲ ತುಂಗಭದ್ರಾ ಅಭಿಯಾನ ಕುರಿತ ಜನಜಾಗೃತಿ ಸಭೆಯ ನಂತರ ಸರ್ವ ಪಕ್ಷದ ಸಭೆ ನಡೆಯಬಹುದೆಂದು ನಿರೀಕ್ಷಿಸಲಾಗಿತ್ತು. ಆದರೆ ವಿವಿಧ ಪಕ್ಷಗಳ ಪ್ರಮುಖರು ಸೇರಿದಂತೆ ಬಹಳಷ್ಟು ಮುಖಂಡರು ಗೈರಾದ ಕಾರಣ ಹಾಗೂ ಸಾಕಷ್ಟು ಸಂಖ್ಯೆಯಲ್ಲಿ ವಿವಿಧ ವಲಯಗಳ ಜನರು ಆಗಮಿಸದಿರುವುದರಿಂದ ಮತ್ತೊಂದು ದಿನಾಂಕದAದು ಈ ಕುರಿತು ವಿಸ್ತೃತ ಸಭೆ ನಡೆಸಲು ತೀರ್ಮಾನಿಸಲಾಗಿದೆ ಎಂದು ತಿಳಿದುಬಂದಿದೆ.
