ಸಿಂಧನೂರು: ಎಂಎಸ್‌ಪಿ ಕಾನೂನುಬದ್ಧಗೊಳಿಸಲು ಆಗ್ರಹಿಸಿ ಎಐಯುಕೆಎಸ್‌ನಿಂದ ರಾಷ್ಟ್ರಪತಿಗೆ ಮನವಿ

Spread the love

ಲೋಕಲ್ ನ್ಯೂಸ್: ಬಸವರಾಜ ಹಳ್ಳಿ
ನಮ್ಮ ಸಿಂಧನೂರು, ಜನವರಿ 9

ಕೃಷಿ ಉತ್ಪನ್ನಗಳಿಗೆ ಎಂಎಸ್‌ಪಿ (ಕನಿಷ್ಠ ಬೆಂಬಲ ಬೆಲೆ) ಕಾನೂನು ಖಾತರಿ ಒದಗಿಸಬೇಕು ಹಾಗೂ 45 ದಿನಗಳಿಂದ ಪಂಜಾಬ್ ಶಂಭು ಗಡಿಯಲ್ಲಿ ಅಮರಣಾಂತ ಸತ್ಯಾಗ್ರಹ ಕುಳಿತಿರುವ ಜಗತ್‌ಸಿಂಗ್ ದಲೈವಾಲ ಅವರ ಆರೋಗ್ಯ ಕ್ಷೀಣಿಸುತ್ತಿದ್ದು, ಇವರ ಹೋರಾಟವನ್ನು ಗಂಭೀರವಾಗಿ ಪರಿಗಣಿಸುವುದು ಸೇರಿ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಆಲ್ ಇಂಡಿಯಾ ಯೂನಿಟೆಡ್ ಕಿಸಾನ್ ಸಭಾ ಹಾಗೂ ಕರ್ನಾಟಕ ರೈತ ಸಂಘದಿಂದ ತಹಸೀಲ್ದಾರ್ ಮೂಲಕ ರಾಷ್ಟçಪತಿಗಳಿಗೆ ಗುರುವಾರ ಮನವಿ ರವಾನಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಸಿಪಿಐ(ಎಂಎಲ್) ಮಾಸ್‌ಲೈನ್ ಜಿಲ್ಲಾಕಾರ್ಯದರ್ಶಿ ಬಿ.ಎನ್.ಯರದಿಹಾಳ, ಕೇಂದ್ರ ಸರ್ಕಾರದ ಕೃಷಿ ಸಚಿವಾಲಯವು ಡಿಸೆಂಬರ್ 23, 2024ರಂದು ರೈತರ ದಿನದ ಪ್ರಯುಕ್ತ ಭಾರತದ ಹಲವು ರಾಷ್ಟ್ರೀಯ ಪತ್ರಿಕೆಗಳಿಗೆ ಪೂರ್ಣಪುಟದ ಜಾಹೀರಾತು ನೀಡಿ, ದೇಶದ ರೈತರಿಗಾಗಿ ಬೀಜದಿಂದ-ಮಾರುಕಟ್ಟೆಯವರೆಗೆ ತಮ್ಮ ಸರ್ಕಾರವು ಸಂಪೂರ್ಣ ಸಮರ್ಪಿಸಿಕೊಂಡಿದ್ದು, ಕೃಷಿ ಸಚಿವಾಲಯವು 2014-2015 ರಿಂದ 2024-2025ರವರೆಗೆ 5 ಬಾರಿ ಬಜೆಟ್ ಅನುದಾನವನ್ನು ಹೆಚ್ಚಿಸಿದೆ. ಇದರಿಂದ ರೈತರು ಸಮೃದ್ಧರಾಗಿದ್ದಾರೆ ಎಂದು ಆತ್ಮರತಿ ಮಾಡಿಕೊಳ್ಳುವ ಮೂಲಕ ಈ ದೇಶದ ರೈತರನ್ನು ತನ್ನ ಬಣ್ಣ ಬಣ್ಣದ ಮಾತುಗಳಿಂದ ಮತ್ತೊಮ್ಮೆ ವಂಚಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕರ್ನಾಟಕ ರೈತ ಸಂಘದ ತಾಲೂಕು ಘಟಕದ ಅಧ್ಯಕ್ಷ ರಮೇಶ ಪಾಟೀಲ್ ಬೇರಿಗಿ ಮಾತನಾಡಿ, ಎಂಎಸ್‌ಪಿ (ಕನಿಷ್ಠ ಬೆಂಬಲ ಬೆಲೆ)ಗೆ ಕಾನೂನು ಖಾತರಿ ಒದಗಿಸಬೇಕು, ನರೇಗಾದ ಅಡಿ ವಾರ್ಷಿಕವಾಗಿ 200 ದಿನ ಕೆಲಸ ಹಾಗೂ 600 ರೂಪಾಯಿ ಕೂಲಿ ನಿಗದಿಪಡಿಸಬೇಕು, ಕೃಷಿ ಕಾರ್ಮಿಕರು, ಸಣ್ಣ, ಅತಿ ಸಣ್ಣ ಮತ್ತು ಮಧ್ಯಮ ರೈತರ ಸಂಪೂರ್ಣ ಸಾಲ ಮನ್ನಾ ಮಾಡಬೇಕು, ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ರಂಗದಲ್ಲಿ ನ್ಯಾಯ ಒದಗಿಸಬೇಕು, ಅರಣ್ಯ ಹಕ್ಕು ಕಾಯ್ದೆ 2006ರನ್ನು ಸಮಗ್ರವಾಗಿ ಅನುಷ್ಠಾನಗೊಳಿಸಬೇಕು, ಭೂರಹಿತರಿಗೆ ಭೂಮಿ, ಹಸಿದವರಿಗೆ ಆಹಾರ, ಮನೆ ಇಲ್ಲದವರಿಗೆ ಮನೆ ಮತ್ತು ಉದ್ಯೋಗವಿಲ್ಲದವರಿಗೆ ಉದ್ಯೋಗ ನೀಡಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ತಾಲೂಕು ಕಾರ್ಯದರ್ಶಿ ಯಲ್ಲಪ್ಪ ಭಜಂತ್ರಿ, ತಾಲೂಕು ಸಮಿತಿ ಸದಸ್ಯರಾದ ವೆಂಕಟೇಶ ಉದ್ಬಾಳ ಇ.ಜೆ, ಎಂ.ಗಂಗರಾಜ್ ಶಾಂತಿನಗರ, ಪ್ರಸಾದ ಸುಕಾಲಪೇಟೆ, ನಿಂಗಪ್ಪ ಭೇರಿಗಿ, ಶಾಮಿದ್‌ಸಾಬ್ ಗುಂಜಳ್ಳಿಕ್ಯಾಂಪ್ ಇನ್ನಿತರರಿದ್ದರು.


Spread the love
ಟ್ಯಾಗ್‌ಗಳು: ,

Leave a Reply

Your email address will not be published. Required fields are marked *