ಸಿಂಧನೂರು: ಹೊಸ ವರ್ಷದ ಹೆಸರಲ್ಲಿ ಹದ್ದು ಮೀರಿದರೆ ಕ್ರಮ : ಪೊಲೀಸ್ ಇಲಾಖೆ ಎಚ್ಚರಿಕೆ

Spread the love

ಸ್ಪಷಲ್ ನ್ಯೂಸ್: ಬಸವರಾಜ ಹಳ್ಳಿ
ನಮ್ಮ ಸಿಂಧನೂರು, ಡಿಸೆಂಬರ್ 30

ಹೊಸ ವರ್ಷಕ್ಕೆ ಕ್ಷಣಗಣನೆ ಆರಂಭವಾಗಿದ್ದು, ವರ್ಷಾಚರಣೆಯ ಹೆಸರಲ್ಲಿ ಹದ್ದು ಮೀರಿ ವರ್ತಿಸುವವರಿಗೆ ಚಾಟಿ ಬೀಸಲು ಪೊಲೀಸ್ ಇಲಾಖೆ ಮುಂದಾಗಿದೆ. ಮದ್ಯ ಕುಡಿದು ಸಾರ್ವಜನಿಕ ಪ್ರದೇಶದಲ್ಲಿ ಅನುಚಿತವಾಗಿ ವರ್ತಿಸುವವರಿಗೆ, ಅತಿವೇಗ ಮತ್ತು ಅಜಾಗರೂಕತೆಯಿಂದ ಮೋಟರ್ ಸೈಕಲ್ ಇನ್ನಿತರೆ ವಾಹನ ಚಲಾಯಿಸುವವರಿಗೆ, ಡ್ರಂಕ್ ಅ್ಯಂಡ್ ಡ್ರೆöÊವ್ ಮಾಡುವವರು, ಸೈಲೆನ್ಸರ್ ತೆಗೆದು ಗಾಡಿ ಓಡಿಸುವವರ ಮೇಲೆ ಹದ್ದಿನ ಕಣ್ಣಿಡಲು ಪೊಲೀಸ್ ಸಿಬ್ಬಂದಿಯನ್ನು ನೇಮಿಸಲಾಗಿದೆ.
ರಾತ್ರಿ ಹೊತ್ತು ವಿನಾಃಕಾರಣ ಸಂಚರಿಸಿದರೆ ಕ್ರಮ
ಡಿ.31ರಂದು ರಾತ್ರಿ 11 ಗಂಟೆಯ ನಂತರ ವಿನಾಃಕಾರಣ ರಸ್ತೆಯಲ್ಲಿ ಓಡಾಡುವವರನ್ನು ವಿಚಾರಿಸ ಲಾಗುವುದು, ಮಧ್ಯರಾತ್ರಿ 12 ಗಂಟೆಯ ನಂತರ ಆಸ್ಪತ್ರೆ ಹೊರತುಪಡಿಸಿ ಸಂಚರಿಸಿದರೆ ಕಾನೂನು ಕ್ರಮಕ್ಕೆ ಮುಂದಾಗಲಾಗುವುದು. ಮದ್ಯ ಸೇವನೆ ಕುರಿತಂತೆ ಪರಿಶೀಲಿಸಲಾಗುವುದು ಎಂದು ಪೊಲೀಸ್ ಮೂಲಗಳಿಂದ ತಿಳಿದುಬಂದಿದೆ.
ವೀಲಿಂಗ್ ಮಾಡಿದ್ರೆ, ಅತಿವೇಗವಾಗಿ ಗಾಡಿ ಓಡಿಸಿದ್ರೆ ಸೀಜ್
ಹೊಸ ವರ್ಷದ ಹೆಸರಲ್ಲಿ ಯಾರೇ ಆಗಲಿ ಮೋಟರ್ ಸೈಕಲ್ ವೀಲಿಂಗ್ ಮಾಡುವುದು, ರಸ್ತೆಗಳಲ್ಲಿ ಅತಿವೇಗ ಇಲ್ಲವೇ ಸೈಲೆನ್ಸರ್ ಬಿಚ್ಚಿ ಗಾಡಿ ಓಡಿಸಿದ್ದೇ ಆದಲ್ಲಿ, ಅಂತಹ ಕಿಡಿಗೇಡಿತನ ತೋರುವವರ ವಾಹನಗಳನ್ನು ನಿರ್ದಾಕ್ಷಿಣ್ಯವಾಗಿ ಸೀಜ್ ಮಾಡಲಾಗುವುದು ಎಂದು ಪೊಲೀಸ್ ಇಲಾಖೆ ಎಚ್ಚರಿಸಿದೆ.
ಸಿಟಿಯಲ್ಲಿ 40 ಸಿಬ್ಬಂದಿ ನಿಯೋಜನೆ
ನಗರದಲ್ಲಿ ಹೊಸ ವರ್ಷದ ಸಂದರ್ಭದಲ್ಲಿ ಶಾಂತಿ, ಸುವ್ಯವಸ್ಥೆ ಕಾಪಾಡಲು ಹಾಗೂ ಸೂಕ್ತ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲು ಶಹರ ಪೊಲೀಸ್ ಠಾಣೆಯ 30 ಸೇರಿ ಟ್ರಾಫಿಕ್ 10 ಠಾಣೆಯ 40 ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದು ತಿಳಿದುಬಂದಿದೆ. ಗಂಗಾವತಿ, ಕುಷ್ಟಗಿ ಹಾಗೂ ರಾಯಚೂರು ಮಾರ್ಗದ ರಸ್ತೆಗಳು ಸೇರಿದಂತೆ ವಾರ್ಡ್‌ಗಳ ಪ್ರಮುಖ ರಸ್ತೆಗಳಲ್ಲಿ ಪೊಲೀಸರು ನಿಗಾಯಿಡಲು ಯೋಜಿಸಲಾಗಿದೆ.
ಗ್ರಾಮೀಣ ಭಾಗದಲ್ಲಿ 80 ಪೊಲೀಸ್ ಸಿಬ್ಬಂದಿ
ತಾಲೂಕಿನ ತುರ್ವಿಹಾಳ, ಬಳಗಾನೂರು ಠಾಣೆ ವ್ಯಾಪ್ತಿ ಸೇರಿದಂತೆ ಶ್ರೀಪುರಂಜಂಕ್ಷನ್ ಹಾಗೂ ಸೂಕ್ಷö್ಮ ಪ್ರದೇಶ ವ್ಯಾಪ್ತಿಗಳಲ್ಲಿ 80 ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಸಾರ್ವಜನಿಕ ಪ್ರದೇಶದಲ್ಲಿ ಯಾವುದೇ ರೀತಿಯ ದುರ್ವರ್ತನೆ ತೋರಿದರೆ ಅಂತವರ ಮೇಲೆ ಕಾನೂನು ಕ್ರಮ ಜರುಗಿಸುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
***************************
ಸಾರ್ವಜನಿಕ ಪ್ರದೇಶದಲ್ಲಿ ದುರ್ವರ್ತನೆ ತೋರಿದ್ದಲ್ಲಿ ಕಾನೂನು ಕ್ರಮ
ಹೊಸ ವರ್ಷಾಚರಣೆಯ ನೆಪದಲ್ಲಿ ಮದ್ಯಪಾನ ಮಾಡಿ ಸಾರ್ವಜನಿಕರಿಗೆ ತೊಂದರೆ ಕೊಡುವುದು, ಸಾರ್ವಜನಿಕ ಪ್ರದೇಶದಲ್ಲಿ ಕೂಗಾಡುವುದು, ಚೀರಾಡುವುದು ಇಲ್ಲವೇ ಅನುಚಿತವಾಗಿ ವರ್ತಿಸುವುದು ಕಂಡುಬಂದಲ್ಲಿ ನಿರ್ದಾಕ್ಷಿಣ್ಯವಾಗಿ ಕಾನೂನು ಕ್ರಮ ಜರುಗಿಸಲಾಗುವುದು. ಈ ನಿಟ್ಟಿನಲ್ಲಿ ನಗರ ಸೇರಿದಂತೆ ಗ್ರಾಮೀಣ ಪ್ರದೇಶ ವ್ಯಾಪ್ತಿಗೆ ಈಗಾಗಲೇ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಯುವಕರಾದಿಯಾಗಿ ಯಾರೇ ಆಗಲಿ ಹೊಸ ವರ್ಷಾಚರಣೆಯನ್ನು ಮೌಲ್ಯಯುತವಾಗಿ ಆಚರಿಸುವ ಪ್ರವೃತ್ತಿ ಬೆಳೆಸಿಕೊಳ್ಳಬೇಕು. ಯಾವುದೇ ರೀತಿಯ ದುರ್ವರ್ತನೆಗೆ ಮುಂದಾಗಬಾರದು.
-ಚಂದ್ರಶೇಖರ.ಜಿ, ಡಿವೈಎಸ್‌ಪಿ, ಸಿಂಧನೂರು

Namma Sindhanuru Click For Breaking & Local News

Spread the love

Leave a Reply

Your email address will not be published. Required fields are marked *