ಲೋಕಲ್ ನ್ಯೂಸ್: ಬಸವರಾಜ ಹಳ್ಳಿ
ನಮ್ಮ ಸಿಂಧನೂರು, ಜನವರಿ 19
ತಾಲೂಕಿನ ವಲ್ಕಂದಿನ್ನಿ ಹೋಬಳಿ ವ್ಯಾಪ್ತಿಯ ಗೋನವಾರ ಗ್ರಾಮದಲ್ಲಿ ದ್ರಾಕ್ಷಾಯಿಣಿ ಗಂ ವಿಶ್ವನಾಥ ಎಂಬುವವರಿಗೆ ಸೇರಿದ ಹೊಲದಲ್ಲಿ, ಕಟಾವು ಮಾಡಿದ್ದ ಜೋಳದ ಬೆಳೆಯ ಮೆದೆಗೆ ಆಕಸ್ಮಿಕ ಬೆಂಕಿ ತಗುಲಿ ಒಂದೂವರೆ ಎಕರೆ ಬೆಳೆ ನಾಶವಾದ ಘಟನೆ ಸೋಮವಾರ ನಡೆದಿದೆ.
“ಎಕರೆ 40 ಕ್ವಿಂಟಲ್ನಂತೆ ಒಂದೂವರೆ ಎಕರೆ ಅಂದಾಜು 60 ಕ್ವಿಂಟಲ್ನಷ್ಟು ಜೋಳದ ಬೆಳೆ ಸಂಪೂರ್ಣ ಸುಟ್ಟುಹೋಗಿದೆ. ಅಂದಾಜು 2 ಲಕ್ಷ ರೂಪಾಯಿಗೂ ಅಧಿಕ ಮೊತ್ತದ ಫಸಲು ನಾಶವಾಗಿದೆ. ಗ್ರಾಮ ಆಡಳಿತಾಧಿಕಾರಿ, ಕಂದಾಯ ನಿರೀಕ್ಷಕರು ಹಾಗೂ ಉಪ ತಹಸೀಲ್ದಾರ್ ಅವರು ಸಂತ್ರಸ್ತ ರೈತರ ಜಮೀನಿಗೆ ಭೇಟಿನೀಡಿ. ಹಾನಿಗೊಳಗಾದ ರೈತ ಮಹಿಳೆಗೆ ಪರಿಹಾರ ಒದಗಿಸಬೇಕು” ಎಂದು ಕರ್ನಾಟಕ ಪ್ರಾಂತ ರೈತ ಸಂಘದ ಮುಖಂಡ ಬಸವಂತರಾಯಗೌಡ ಕಲ್ಲೂರು ತಾಲೂಕು ಆಡಳಿತಕ್ಕೆ ಮನವಿ ಮಾಡಿದ್ದಾರೆ.

