ಸಿಂಧನೂರು: ಹಾರಾಪುರ ಬಳಿ ಸಾರಿಗೆ ಬಸ್, ಖಾಸಗಿ ಬಸ್ ನಡುವೆ ಅಪಘಾತ, ಒಬ್ಬ ಸಾವು ಹಲವರಿಗೆ ಗಾಯ

Spread the love

ನಮ್ಮ ಸಿಂಧನೂರು, ಸೆಪ್ಟೆಂಬರ್ 08
ತಾಲೂಕಿನ ಹಾರಾಪುರ ಗ್ರಾಮದ ಹೆದ್ದಾರಿಯಲ್ಲಿ ಭಾನುವಾರ ನಸುಕಿನಲ್ಲಿ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಯಾದಗಿರಿ ಡಿಪೋದ ಬೆಂಗಳೂರು-ಯಾದಗಿರಿ ಬಸ್ ಹಾಗೂ ಸುಗಮ ಟ್ರಾವೆಲ್ಸ್ ಬಸ್ ನಡುವೆ ಅಪಘಾತ ಸಂಭವಿಸಿ, ಒಬ್ಬ ಮೃತಪಟ್ಟು, ಹಲವರಿಗೆ ಗಾಯಗಳಾಗಿವೆ. ಬೆಂಗಳೂರಿನಿಂದ ಯಾದಗಿರಿಗೆ ಹೊರಟಿದ್ದ ಸಾರಿಗೆ ಬಸ್ ಪ್ರಯಾಣಿಕರೊಬ್ಬರನ್ನು ಇಳಿಸಲು ಚಾಲಕ ಹಾರಾಪುರದಲ್ಲಿ ನಿಲ್ಲಿಸಿದ್ದಾನೆ. ಇದೇ ಸಮಯದಲ್ಲಿ ಕಲಬುರಗಿ ಕಡೆ ಹೊರಟಿದ್ದ ಖಾಸಗಿ ಟ್ರಾವೆಲ್ಸ್‌ನ ಬಸ್ ಸಾರಿಗೆ ಬಸ್‌ಗೆ ಹಿಂಬದಿ ಡಿಕ್ಕಿ ಹೊಡೆದಿದೆ ಎಂದು ತಿಳಿದುಬಂದಿದೆ. ಅಪಘಾತದ ರಭಸಕ್ಕೆ ಸಾರಿಗೆ ಬಸ್ ರಸ್ತೆ ಬದಿ ಉರುಳಿದ್ದು ಹಿಂಬದಿ ಜಖಂಗೊಂಡಿದೆ. ಸುಗಮ ಟ್ರಾವೆಲ್ಸ್ ಬಸ್ ಮುಂಬದಿ ನಜ್ಜುಗುಜ್ಜಾಗಿದೆ.

Namma Sindhanuru Click For Breaking & Local News

Spread the love

Leave a Reply

Your email address will not be published. Required fields are marked *