ಲೋಕಲ್ ನ್ಯೂಸ್ : ಬಸವರಾಜ ಹಳ್ಳಿ
ನಮ್ಮ ಸಿಂಧನೂರು, ಜನವರಿ 01
ನಗರದ ಟೌನ್ಹಾಲ್ನಲ್ಲಿ ಗುರುವಾರ ಆಯೋಜಿಸಲಾಗಿದ್ದ ಶಾಸಕ ಹಂಪನಗೌಡರ ಜನ್ಮ ದಿನದ ಸಮಾರಂಭದಲ್ಲಿ ಅಭಿಮಾನಿಗಳು, ಹಿತೈಷಿಗಳು ಹಾಗೂ ಮುಖಂಡರ ದಂಡೇ ಕಂಡುಬಂತು. 75ನೇ ಜನ್ಮ ದಿನದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಹಲವು ಮುಖಂಡರು ಶಾಸಕರಿಗೆ ಶುಭಾರೈಸಿದರು.
ಪ್ರಮುಖರು ಭಾಗಿ
ಮೂರಮೈಲ್ಕ್ಯಾಂಪ್ನ ರಂಭಾಪುರಿ ಖಾಸಾಶಾಖಾ ಮಠದ ಸೋಮನಾಥ ಶಿವಾಚಾರ್ಯರು, ವೀರಶೈವ ಲಿಂಗಾಯತ ಮಹಾಸಭಾ ರಾಜ್ಯ ಘಟಕದ ಅಧ್ಯಕ್ಷ ಶಂಕರ ಬಿದರಿ, ಮಾಜಿ ಸಚಿವ ಅಮರೇಗೌಡ ಪಾಟೀಲ್ ಬಯ್ಯಾಪುರ, ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ, ಮಸ್ಕಿ ಶಾಸಕ ಆರ್.ಬಸನಗೌಡ ತುರ್ವಿಹಾಳ, ಮಾಜಿ ಶಾಸಕ ಪ್ರತಾಪಗೌಡ ಪಾಟೀಲ್, ಆರ್.ತಿಮ್ಮಯ್ಯ ನಾಯಕ, ಎಸ್.ಬಿ.ಅಶೋಕ ಭೂಪಾಲ್, ಡಾ.ಬಿ.ಎನ್.ಪಾಟೀಲ್, ವಿಕಾಸ ಬ್ಯಾಂಕ್ನ ವಿಶ್ವನಾಥ.ಚ.ಹಿರೇಮಠ, ಎಂ.ಕಾಳಿಂಗಪ್ಪ ವಕೀಲರು, ಬಸವಂತರಾಯ ಕುರಿ ಸೇರಿದಂತೆ ಇನ್ನಿತರರು ಇದ್ದರು.

ಕಾಲೇಜು ಆಡಳಿತ ಮಂಡಳಿಗಳಿಂದ ಸನ್ಮಾನ
ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಅನುಕೂಲಕ್ಕಾಗಿ 15 ವಿಶೇಷ ಬಸ್ ಸೌಲಭ್ಯವನ್ನು ಒದಗಿಸಿದ ಹಿನ್ನೆಲೆಯಲ್ಲಿ ಶಾಸಕ ಹಂಪಗೌಡ ಬಾದರ್ಲಿ ಅವರನ್ನು ಕಾಲೇಜು ಆಡಳಿತ ಮಂಡಳಿಗಳ ವತಿಯಿಂದ ಈ ಸಂದರ್ಭದಲ್ಲಿ ಗೌರವಿಸಲಾಯಿತು.

