ನಮ್ಮ ಸಿಂಧನೂರು, ಜುಲೈ 23
ತುಂಗಭದ್ರಾ ಜಲಾಶಯಕ್ಕೆ ದಿನಾಂಕ:23-07-2024 ಮಂಗಳವಾರದಂದು 92,636 ಕ್ಯೂಸೆಕ್ ನೀರು ಒಳಹರಿವು ದಾಖಲಾಗಿದ್ದು, ಒಂದೇ ದಿನ 8 ಟಿಎಂಸಿಗೂ ಹೆಚ್ಚು ನೀರು ಜಲಾಶಯಕ್ಕೆ ಹರಿದು ಬರುತ್ತಿದೆ. ಜಲಾಶಯದಲ್ಲಿ ದಿನಾಂಕ 23-7-2024 ರಂದು 90.94 ಟಿಎಂಸಿ ನೀರು ಸಂಗ್ರಹವಿದೆ. 11,657 ಕ್ಯೂಸೆಕ್ ನೀರು ಹೊರಬಿಡಲಾಗುತ್ತಿದೆ. ಕಳೆದ ವರ್ಷ ಇದೇ ದಿನ ಜಲಾಶಯದಲ್ಲಿ 21.36 ಟಿಎಂಸಿ ನೀರು ಸಂಗ್ರಹವಿದ್ದರೆ, 54,656 ಕ್ಯೂಸೆಕ್ ನೀರು ಒಳಹರಿವಿತ್ತು, 125 ಕ್ಯೂಸೆಕ್ ನೀರು ಹೊರಗೆ ಹರಿಬಿಡಲಾಗಿತ್ತು. ಕಳೆದ ಹತ್ತು ವರ್ಷದ ಹಿಂದೆ ಇದೇ ದಿನ ಜಲಾಶಯದಲ್ಲಿ 55.44 ಟಿಎಂಸಿ ನೀರು ಸಂಗ್ರಹವಿದ್ದುದನ್ನು ದಾಖಲೆಗಳ ಮೂಲಕ ತಿಳಿಯಬಹುದಾಗಿದೆ. ಮಂಗಳವಾರ 8 ಟಿಎಂಸಿ ಗೂ ಹೆಚ್ಚು ನೀರು ಹರಿದು ಬರುತ್ತಿರುವುದರಿಂದ 24 ಗಂಟೆಯಲ್ಲಿ ಅಂದರೆ ನಾಳೆ ಬುಧವಾರ ಜಲಾಶಯದ ನೀರಿನ ಮಟ್ಟ 98 ಟಿಎಂಸಿ ದಾಟಲಿದೆ.