ಸಿಂಧನೂರು: ಟ್ರಯಲ್ ಮುಗಿಸಿದ ನಮ್ಮೂರಿನ ಚುಕುಬುಕು..

Spread the love

ನಮ್ಮ ಸಿಂಧನೂರು, ಫೆಬ್ರವರಿ 6
ಕೊಪ್ಪಳ ಜಿಲ್ಲೆಯ ಕಾರಟಗಿ ರೈಲ್ವೆ ನಿಲ್ದಾಣದಿಂದ ಸಿಂಧನೂರು ನಗರದ ರೈಲ್ವೆ ನಿಲ್ದಾಣದವರೆಗೆ ಪರೀಕ್ಷಾರ್ಥ ರೈಲ್ವೆ ಸಂಚಾರ ಯಶಸ್ವಿಯಾಗಿದ್ದು, ಜನರ ಬಹು ದಿನದ ಕನಸು ನನಸಾಗುವುದಕ್ಕೆ ದಿನಗಣನೆ ಶುರುವಾಗಿದೆ.
ಕಾರಟಗಿಯಿಂದ ಪರೀಕ್ಷಾರ್ಥ ರೈಲು ಸಂಚಾರ ಆರಂಭಿಸಲಾಗಿತ್ತು. ಅಂದಾಜು 120 ಕಿ.ಮೀ ವೇಗದಲ್ಲಿ ೩ ಬೋಗಿಗಳನ್ನು ಹೊಂದಿದ್ದ ರೈಲ್ವೆ ಇಂಜಿನ್‌ನ್ನು ಎರಡು ಬಾರಿ ಪರೀಕ್ಷಾರ್ಥ ಸಂಚಾರ ನಡೆಸಲಾಯಿತು. ಈ ವೇಳೆ ಗರಿಷ್ಠ ವೇಗಮಿತಿಯೊಂದಿಗೆ ರೈಲು ಸಂಚಾರ ನಡೆಸಿದ ಅಧಿಕಾರಿಗಳು ರೈಲ್ವೆ ಟ್ರ್ಯಾಕ್ ಸೇರಿದಂತೆ ಇನ್ನಿತರ ಕಾಮಗಾರಿಗಳ ಭದ್ರತೆಯನ್ನು ಪರಿಶೀಲಿಸಿದರು. ಈ ವೇಳೆ ಕಾರಟಗಿ- ಸಿಂಧನೂರು ಮಾರ್ಗ ವ್ಯಾಪ್ತಿಯ ಕಾಮಗಾರಿಗಳನ್ನು ಪರೀಕ್ಷಿಸಲಾಯಿತು. ಅಂದಾಜು 14 ಕಿ.ಮೀ ರೈಲು ಸಂಚಾರ ನಡೆಸಿ ಸಣ್ಣಪುಟ್ಟ ಲೋಪದೋಷಗಳನ್ನು ಕಂಡುಕೊಳ್ಳಲಾಯಿತು. ಉಳಿದಂತೆ ಸೇತುವೆ ಮೇಲಿನ ಸಂಚಾರ ಇನ್ನಿತರ ಅಂಶಗಳನ್ನು ಅಧಿಕಾರಿಗಳು ಈ ಸಂದರ್ಭದಲ್ಲಿ ಪರಿಶೀಲಿಸಿದರು.


Spread the love

Leave a Reply

Your email address will not be published. Required fields are marked *