ಲೋಕಲ್ ನ್ಯೂಸ್: ಬಸವರಾಜ ಹಳ್ಳಿ
ನಮ್ಮ ಸಿಂಧನೂರು, ಅಕ್ಟೋಬರ್ 18
ಶೆಡ್ಗಳಿಗೆ ಮಳೆನೀರು ನುಗ್ಗಿ ಸಂಕಷ್ಟಕ್ಕೆ ಸಿಲುಕಿದ ಕುಟುಂಬಗಳಿಗೆ ವಾರ್ಡ್ ನಂ.17ರ ಕೌನ್ಸಲರ್ ದಾಸರಿ ಸತ್ಯನಾರಾಯಣ ಅವರು ಮಿಡಿಯುವ ಮೂಲಕ ನೆರವಿಗೆ ಬಂದಿದ್ದಾರೆ. ಜೋರು ಮಳೆಗೆ ಗಂಗಾನಗರ ವ್ಯಾಪ್ತಿಯಲ್ಲಿನ ಕಾಲುವೆಯ ನೀರು ಶೆಡ್ಗಳಿಗೆ ನುಗ್ಗಿದೆ. ಇದರಿಂದ ಹತ್ತಾರು ಬಡ ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿ ಯಾತನೆ ಅನುಭವಿಸಿದ್ದವು. ಇದನ್ನು ಕಂಡ ಸತ್ಯನಾರಾಯಣ ಅವರು ತಮ್ಮ ಸ್ವಂತ ಖರ್ಚಿನಲ್ಲಿ ಹಿಟಾಚಿ ಮೂಲಕ ಶುಕ್ರವಾರ ರಾತ್ರಿ ಕಾಲುವೆಯ ಹೂಳು ತೆಗೆಸಿ, ತ್ಯಾಜ್ಯ ವಿಲೇವಾರಿಗೊಳಿಸಿದ್ದರಿಂದ ಈ ಕುಟುಂಬಗಳು ನಿಟ್ಟುಸಿರುಬಿಟ್ಟವು.
ರಾತ್ರಿಯೇ ಹೂಳು, ತ್ಯಾಜ್ಯ ವಿಲೇವಾರಿ
ಶೆಡ್ ನಿವಾಸಿಗಳು ಮಳೆಯಿಂದ ಯಾತನೆ ಅನುಭವಿಸುತ್ತಿರುವುದನ್ನು ಮನಗಂಡ ದಾಸರಿ ಸತ್ಯನಾರಾಯಣ ಅವರು ಹೂಳು ಹಾಗೂ ತ್ಯಾಜ್ಯ ವಿಲೇವಾರಿ ನಗರಸಭೆಗೆ ಮನವಿ ಮಾಡಿದ್ದರು. ಆದರೆ ಹಿಟಾಚಿ ಬರುವುದು ವಿಳಂಬವಾದ ಹಿನ್ನೆಲೆಯಲ್ಲಿ ತಾವೇ ತಮ್ಮ ಸ್ವಂತ ಖರ್ಚಿನಲ್ಲಿ ಶುಕ್ರವಾರ ರಾತ್ರಿ ಕೆಲವೊತ್ತು ಕಾಲುವೆಯ ಹೂಳು ತೆಗೆಸುವ ಮೂಲಕ ನಿಂತ ನೀರನ್ನು ಮುಂದೆ ಹೋಗಲು ದಾರಿ ಮಾಡಿದರು. ಹೂಳು ತೆಗೆದು, ತ್ಯಾಜ್ಯ ವಿಲೇವಾರಿ ಮಾಡುತ್ತಿದ್ದಂತೆ ಶೆಡ್ಗೆ ನುಗ್ಗಿದ್ದ ನೀರು ಕಾಲುವೆಯ ಮೂಲಕ ಹರಿದು ಹೋಯಿತು.
ನಗರಸಭೆ ವಿರುದ್ಧ ವಾರ್ಡ್ ನಿವಾಸಿಗಳ ಆಕ್ರೋಶ
“ಗಂಗಾನಗರದ ರೋಡು ಮನಿಸೇರು ನಡಿಲಾರದಂಗ ಆಗೇತಿ ಅಂತ ಐವತ್ತು ಅರವತ್ತು ಸಲ ನಗರಸಭೆಯವರಿಗೇ ಹೇಳೀವಿ. ಎಷ್ಟು ಹೇಳಿದ್ರೂ ಒಬ್ರನ ಗಮನಕ್ಕ ತಗವಲ್ರು. ಇನ್ನೂ ಶಾಸಕರಿಗೆ ಹೇಳಿದ್ರೂ ಅಷ್ಟೆ, ಸಂಸದರಿಗೆ ಹೇಳಿದ್ರೂ ಅಷ್ಟೆ. ಇನ್ನ ದೊಡ್ಡ ಮಳಿ ರ್ಲಿ ಸಣ್ಣ ಮಳಿ ಬಂದ್ರ ಕಾಲೇವು ನೀರು ಮನ್ಯಾಕ ರ್ತಾವ.” ಎಂದು ವಾರ್ಡ್ ನಿವಾಸಿಯೊಬ್ಬರು ಆಕ್ರೋಶ ವ್ಯಕ್ತಪಡಿಸಿದ್ದಾರೆ.