ಸಿಂದನೂರು: ತುಂಗಭದ್ರಾ ನೀರಾವರಿ ಕಾರ್ಮಿಕರ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಮನವಿ

Spread the love

ಲೋಕಲ್ ನ್ಯೂಸ್: ಬಸವರಾಜ ಹಳ್ಳಿ
ನಮ್ಮ ಸಿಂಧನೂರು, ಡಿಸೆಂಬರ್ 4

ತುಂಗಭದ್ರಾ ಅಚ್ಚುಕಟ್ಟು ಪ್ರದೇಶದಲ್ಲಿ ಕೆಲಸ ಮಾಡುತ್ತಿರುವ ನೀರಾವರಿ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ, ಸಿಂಧನೂರು ಉಪ ವಿಭಾಗ ಎಇಇ ಸತ್ಯನಾರಾಯಣ ಅವರಿಗೆ, ತುಂಗಭದ್ರಾ ನೀರಾವರಿ ಕಾರ್ಮಿಕರ ಸಂಘ (ಎಐಸಿಸಿಟಿಯು)ದ ವತಿಯಿಂದ ಗುರುವಾರ ಮನವಿ ಸಲ್ಲಿಸಲಾಯಿತು.
ತುಂಗಭದ್ರಾ ಜಲಾಶಯದ ವ್ಯಾಪ್ತಿಯ ಕಾಲುವೆಗಳ ಮೇಲೆ ಕೆಲಸ ಮಾಡುವ ಕಾರ್ಮಿಕರಿಗೆ ನೀರು ನಿಂತ ನಂತರ, ಕರ್ನಾಟಕ ನೀರಾವರಿ ನಿಗಮದ ನಿರ್ದೇಶಕರ ಅಂತಿಮ ಅನುಮೋದನೆಯಂತೆ ಕೆಲಸದಲ್ಲಿ ಮುಂದುವರಿಸುವುದು, ಯರಮರಸ್ ವೃತ್ತ, ಸಿಂಧನೂರು, ಸಿರವಾರ ಮತ್ತು ಯರಮರಸ್ ವಿಭಾಗದ ಎಲ್ಲಾ ಉಪ ವಿಭಾಗದಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಜೂನ್‌ನಿಂದ ಇಲ್ಲಿಯವರೆಗೂ ಬಾಕಿ ವೇತನ, ಪಿಎಫ್, ಇಎಸ್‌ಐ ಪಾವತಿ ಮಾಡಬೇಕು, ಏಪ್ರಿಲ್ ತಿಂಗಳಿನಿAದ ಕಾರ್ಮಿಕರ ತುಟ್ಟಿಭತ್ಯೆ ಕಾರ್ಮಿಕರ ಖಾತೆಗೆ ಜಮಾ ಮಾಡಬೇಕು, ಪ್ರತಿ ತಿಂಗಳು ವೇತನ, ಪಿಎಫ್, ಇಎಸ್‌ಐ ಪಾವತಿಸದ ಗುತ್ತಿಗೆದಾರರ ಗುತ್ತಿಗೆ ಒಪ್ಪಂದ ರದ್ದುಪಡಿಸಿ, ಕಪ್ಪುಪಟ್ಟಿಗೆ ಸೇರಿಸಬೇಕು, ಗುತ್ತಿಗೆ ಪದ್ಧತಿಯನ್ನು ರದ್ದುಪಡಿಸಿ ನೇರ ಪಾವತಿಗೆ ಶಿಫಾರಸು ಮಾಡಬೇಕು, ಕಾಲುವೆ ಮೇಲೆ ಕೆಲಸ ಮಾಡುವ ಕಾರ್ಮಿಕರಿಗೆ ಸಮವಸ್ತç, ಐಡಿಕಾರ್ಡ್ ಸೇರಿದಂತೆ ಮೂಲಸೌಕರ್ಯ ನೀಡಬೇಕು, ಕಚೇರಿ ಮತ್ತು ಕ್ಯಾಂಪ್‌ನಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ತಿಂಗಳಪೂರ್ತಿ ವೇತನ ಪಾವತಿ ಮಾಡಬೇಕು, 26 ದಿನಗಳಿಗೆ ವೇತನ ಪಾವತಿ ಮಾಡುತ್ತಿರುವುದನ್ನು ಕೂಡಲೇ ನಿಲ್ಲಿಸಿ ಮೊದಲಿನಂತೆ ವೇತನ ಪಾವತಿಸಬೇಕು, ಕಾರ್ಮಿಕರಿಗೆ ಉದ್ಯೋಗದ ಭದ್ರತೆ ಒದಗಿಸಬೇಕು ಸೇರಿ ಇತರೆ ಬೇಡಿಕೆಗಳ ಮನವಿಪತ್ರವನ್ನು ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಕೇಂದ್ರ ಸಮಿತಿ ಅಧ್ಯಕ್ಷ ಕೆ. ನಾಗಲಿಂಗಸ್ವಾಮಿ, ಪ್ರಧಾನ ಕಾರ್ಯದರ್ಶಿ ಎಂ.ಬಸವರಾಜ, ಸಿಂಧನೂರು ವಿಭಾಗದ ಅಧ್ಯಕ್ಷ ವಾದಿರಾಜ ಕುಲಕರ್ಣಿ, ತುರುವಿಹಾಳ ಉಪ ವಿಭಾಗದ ಅಧ್ಯಕ್ಷ ಶರಣಪ್ಪ ಉದ್ಬಾಳ ಇದ್ದರು.


Spread the love

Leave a Reply

Your email address will not be published. Required fields are marked *