(ವರದಿ: ಬಸವರಾಜ ಹಳ್ಳಿ)
ನಮ್ಮ ಸಿಂಧನೂರು, ಏಪ್ರಿಲ್ 3
ನಗರದಲ್ಲಿ ಬುಧವಾರ ಮಧ್ಯಾಹ್ನ 2 ಗಂಟೆಯ ಸುಮಾರು 40 ಡಿಗ್ರಿ ಸೆಲ್ಷಿಯಸ್ ತಾಪಮಾನ ದಾಖಲಾದ ಹಿನ್ನೆಲೆಯಲ್ಲಿ ಬಿಸಿಲಿನ ಧಗೆಗೆ ಜನರು ತತ್ತರಿಸಿದರು. ನಗರದ ಗಂಗಾವತಿ ರಸ್ತೆ, ರಾಯಚೂರು ಮಾರ್ಗದ ರಸ್ತೆ, ಕುಷ್ಟಗಿ ರಸ್ತೆ ಮಾರ್ಗದ ಕಡೆಗಳಲ್ಲಿ ಜನರು ಗಿಡ ಇಲ್ಲವೇ ನೆರಳಿದ್ದ ಕಡೆಗೆ ಧಾವಿಸುತ್ತಿದ್ದಾರೆ.
ಸಿಸಿ ರಸ್ತೆಗಳು ಕಾದ ಹಂಚಿನಂತಾದರೆ, ಡಾಂಬರ್ ರಸ್ತೆಗಳಲ್ಲೂ ಧಗೆಯ ಪ್ರಮಾಣ ಹೆಚ್ಚಿದೆ. ಇನ್ನೂ ಅಲ್ಲಲ್ಲಿ ಖಾಸಗಿ ಸೇವಾ ಸಂಸ್ಥೆಗಳು, ಸಂಘಟನೆಗಳವರು ತೆರೆದಿರುವ ಅರವಟಿಗೆಗಳಲ್ಲಿ ಜನರು ಕುಡಿವ ನೀರಿಗೆ ಮುಗಿಬೀಳುವಂತಾಗಿದೆ. ಇನ್ನೂ ಕೆಲವು ವಾರ್ಡ್ಗ ಗಳಲ್ಲಿ ಜನರ ಮಧ್ಯಾಹ್ನ 12 ಗಂಟೆಯಿಂದ 4 ಗಂಟೆಯವರೆಗೂ ಮನೆಯಿಂದ ಹೊರಬರಲು ಹಿಂದೇಟು ಹಾಕುತ್ತಿದ್ದಾರೆ. ಇನ್ನೂ ವೃದ್ಧರು, ಮಕ್ಕಳು ಹೊರಗಡೆ ಸಂಚರಿಸುವುದು ವಿರಳವಾಗಿದೆ.
ಅನಿವಾರ್ಯ ಕೆಲಸ ಕಾರ್ಯಗಳಿಗೆ ನಗರಕ್ಕೆ ಬಂದ ಪರ ಊರಿನವರು ಪ್ರಮುಖ ರಸ್ತೆಗಳಲ್ಲಿ ಬಿಸಿಲ ತಾಪಕ್ಕೆ ಹೈರಾಣಾಗುತ್ತಿದ್ದಾರೆ. ಇನ್ನೂ ಜಿಲ್ಲಾಡಳಿತ, ತಾಲೂಕು ಆಡಳಿತ ಬಿಸಿಲಿನ ಜನರು ಬೇಗೆಯಿಂದ ಸಮಸ್ಯೆ ಅನುಭವಿಸುತ್ತಿರುವವರಿಗೆ ಕುಡಿವ ನೀರಿನ ಅರವಟಿಗೆ ಸೇರಿದಂತೆ ಅಲ್ಲಲ್ಲಿ ನೆರಳಿನ ವ್ಯವಸ್ಥೆ ಮಾಡುವಲ್ಲಿ ವಿಫಲವಾಗಿದೆ ಎಂದು ಸಾರ್ವಜನಿಕರು ದೂರಿದ್ದಾರೆ.