ಹಸಮಕಲ್, ಗುಡದೂರು, ರಂಗಾಪುರ, ಗೋನಾಳ, ಮೇರನಾಳ ಸೇರಿ ವಿವಿಧ ಗ್ರಾಮಗಳಲ್ಲಿ ತಂಪೆರದ ಮಳೆ: ರೈತರಲ್ಲಿ ಹರ್ಷ

Spread the love

ನಮ್ಮ ಸಿಂಧನೂರು, ಮಾರ್ಚ್ 19
ಮಸ್ಕಿ ತಾಲೂಕಿನ ಹಸಮಕಲ್, ಗುಡದೂರು, ರಂಗಾಪುರ, ಗೋನಾಳ, ಮೇರನಾಳ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಸೋಮವಾರ ರಾತ್ರಿ ೭ ಗಂಟೆ ಸುಮಾರು ಬಿರುಸಿನ ಮಳೆ ಸುರಿದಿದೆ. ಮಧ್ಯಾಹ್ನ ಮೋಡ ಕವಿದ ವಾತಾವರಣವಿತ್ತು. ಸಂಜೆ ೬ ಗಂಟೆಯ ಸುಮಾರು ಜಿನಿ ಜಿನಿಯಿಂದ ಶುರುವಾದ ಮಳೆ 7 ಗಂಟೆ ಸುಮಾರು ಜೋರಾಯಿತು. ಮಳೆಯೊಂದಿಗೆ ಜೋರು ಗಾಳಿ ಬೀಸಿದೆ. ಕಳೆದ ಹಲವು ದಿನಗಳಿಂದ ಬೇಸಿಗೆಯ ಕಾರಣ ಬಿಸಿಲಿನ ಬೇಗೆ ಮುಂದುವರಿದಿದ್ದು, ಮಧ್ಯಾಹ್ನ 12 ಗಂಟೆಯಿAದ ಸಂಜೆ 4 ಗಂಟೆಯವರೆಗೂ ಉರಿಬಿಸಿಲು ಜನ-ಜಾನುವಾರಗಳನ್ನು ಹೈರಾಣಾಗಿಸಿದೆ. ಕೃಷಿ ಚಟುವಟಿಕೆಗಳನ್ನು ಕೈಗೊಳ್ಳಲೂ ರೈತರು ಹಿಂದೇಟು ಹಾಕುತ್ತಿದ್ದಾರೆ. ಇನ್ನು ಮಧ್ಯಾಹ್ನ ಹೊರಗೆ ಬರುವುದೇ ಕಷ್ಟಕರ ಎನ್ನುವಂತಾಗಿದೆ. ಇನ್ನು ಜಾನುವಾರುಗಳ ನೀರ ದಾಹವನ್ನು ತಣಿಸಲು ಜನರು ಪರದಾಡುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಕನಿಷ್ಠ ೧ ತಾಸು ಬಿರುಸಿನ ಮಳೆ ಸುರಿದಿರುವುದು ವಾತಾವರಣದಲ್ಲಿ ಒಂದಿಷ್ಟು ತಂಪಿನ ವಾತಾವರಣಕ್ಕೆ ಕಾರಣವಾಗಿದೆ.


Spread the love

Leave a Reply

Your email address will not be published. Required fields are marked *