ಮಸಾರಿ ಪ್ರತಿಭೆ ಉತ್ಸವ ಗೋನವಾರ ನಿರ್ದೇಶನ: ಪ್ರಭುತ್ವದ ಹೃದಯಹೀನ ಲಾಕ್‌ಡೌನ್ ಕತೆ ಹೇಳುವ ‘ಫೋಟೋ’

Spread the love

ನಮ್ಮ ಸಿಂಧನೂರು, ಮಾರ್ಚ್ 14
ರಾಯಚೂರು ಜಿಲ್ಲೆಯ ಸದ್ಯ ಮಸ್ಕಿ ತಾಲೂಕಿನ ಗೋನವಾರ ಗ್ರಾಮದ ಮಸಾರಿ ನೆಲದ ಯುವ ಪ್ರತಿಭೆ ಉತ್ಸವ್ ಗೋನವಾರ ಅವರ ‘ಫೋಟೋ’ ಚಲನಚಿತ್ರ ರಾಜ್ಯಾದ್ಯಂತ ದಿನಾಂಕ: 15-03-2024ರಂದು ತೆರೆ ಕಾಣುತ್ತಿದೆ. ರಂಗ ಕಲಾವಿದ, ಸೃಜನಶೀಲ ಬರಹಗಾರರಾದ ಉತ್ಸವ್ ಗೋನವಾರ ಮತ್ತು ಅವರ ತಂಡ ಫೋಟೋ ಚಲನಚಿತ್ರದ ಮೂಲಕ ರಾಜ್ಯ ಮತ್ತು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲಿ ಪ್ರಶಂಸೆ ಮತ್ತು ಬಹುಮಾನವನ್ನು ಗಳಿಸಿದೆ.

ಲಾಕ್‌ಡೌನ್ ಸಂದರ್ಭದಲ್ಲಿ ಬಳಲಿ ಬೆಂಡಾದ ಬಡವರ ಬದುಕುಗಳು, ಕಮರಿದ ಕನಸುಗಳು, ಲಾಠಿ ಏಟಿಗೆ ಎದ್ದ ಬಾಸುಂಡೆಗಳು, ಹಸಿದ ಹೊಟ್ಟೆ, ನಡೆದು ನಡೆದೂ ಬೊಬ್ಬೆಯೆದ್ದ ಕಾಲು, ಎಲೆಗಳಂತೆ ಉದುರಿ ಬಡ ಜೀವಗಳ ಮನಕಲಕುವ ಸಂಕಟಗಳ ಬುತ್ತಿಯೇ ಈ “ಫೋಟೋ”. ಕೊಡಗಿನಲ್ಲಿದ್ದಾಗ ದಿನಪತ್ರಿಕೆಯಲ್ಲಿ ಓದಿದ ವರದಿಗೆ ಜೀವತುಂಬಿ ಹಲವು ಘಟನಾವಳಿಗಳನ್ನು ಪೋಣಿಸಿದ್ದಾರೆ ಉತ್ಸವ್ ಗೋನವಾರ.

ಈ ಚಲನಚಿತ್ರವು ಹಲವು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲಿ ಪ್ರದರ್ಶನ ಕಂಡು ತೀರ್ಪುಗಾರರು ಸೇರಿದಂತೆ ಪ್ರೇಕ್ಷಕರ ಮನಗೆದ್ದಿದೆ.
ಈ ಚಲನಚಿತ್ರ ನಾಡಿನಾದ್ಯಂತ ಸಿನಿ ಮಂದಿರಗಳಲ್ಲಿ ಪ್ರದರ್ಶನಕ್ಕೆ ಖ್ಯಾತ ಚಿತ್ರನಟ ಹಾಗೂ ನಿರ್ದಿಂಗತದ ಪ್ರಕಾಶ್ ರಾಜ್ ಅವರು ಬೆಂಬಲವಾಗಿ ನಿಂತಿದ್ದಾರೆ. ಮಸಾರಿ ಟಾಕೀಸ್‌ನ, ಪ್ರಕಾಶ್ ರಾಜ್ ಅವರು ಅರ್ಪಿಸುವ ಈ ಚಲನಚಿತ್ರ ಜಹಾಂಗೀರ್, ಡಿಂಗ್ರಿ ನರೇಶ್, ಮಹಾದೇವ ಹಡಪದ ಸೇರಿದಂತೆ ಹಲವು ಸ್ಥಳೀಯ ಪ್ರತಿಭೆಗಳಿಂದ ಕೂಡಿದೆ.


Spread the love

Leave a Reply

Your email address will not be published. Required fields are marked *