ಲೋಕಲ್ ನ್ಯೂಸ್: ಬಸವರಾಜ ಹಳ್ಳಿ
ನಮ್ಮ ಸಿಂಧನೂರು, ಜನವರಿ 12
ಸರ್ವೋದಯದ ಆಶಯ ಹೊಂದಿದ ಕೃತಿಯು ಜನಮನ ಗೆಲ್ಲುತ್ತದೆ. ಕನ್ನಡ ಸಾಹಿತ್ಯ ಪರಂಪರೆಯಲ್ಲಿ ಪಂಪನ ಆದಿಯಾಗಿಟ್ಟುಕೊಂಡು ಈವರೆಗಿನ ಲೇಖಕರ ಕೃತಿಗಳಲ್ಲಿ ಅಂತಹ ಆಶಯಗಳಿದ್ದ ಕಾರಣಕ್ಕೆ ಕನ್ನಡ ಸಾಹಿತ್ಯ ಪರಿಂಪರೆ ಮುಂಚೂಣಿಯಲ್ಲಿದೆ ಎಂದು ಸಾಹಿತಿ ಹಾಗೂ ಗಜಲ್ ಕವಿ ಡಾ. ಶರೀಫ್ ಹಸಮಕಲ್ ಅಭಿಪ್ರಾಯಪಟ್ಟರು.
ನಗರದ ಎಲ್ಬಿಕೆ & ನೊಬಲ್ ಪದವಿ ಮಹಾವಿದ್ಯಾಲಯದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಡಾ. ಮಲ್ಲಿಕಾರ್ಜುನ ಕಮತಗಿ ಅವರ ಕೃತಿ ‘ಜವಾರಿ ಜರ್ನಿ’ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. “ಪ್ರಸ್ತುತ ದಿನಮಾನಗಳಲ್ಲಿ ದೇವರು, ಧರ್ಮ, ಜಾತಿ, ವರ್ಗ, ವರ್ಣ, ಆಹಾರ ಸಂಸ್ಕೃತಿಯನ್ನು ವ್ಯಾಖ್ಯಾನಿಸಿ ನಿರೂಪಿಸುವಲ್ಲಿಯೂ ಕೋಮು ಸಂಘರ್ಷವನ್ನು ಬಿತ್ತುವ ಮನಸ್ಸುಗಳು ಎದ್ದು ಕಾಣುತ್ತಿವೆ. ಇಂತಹ ಸಂದರ್ಭದಲ್ಲಿ ಕವಿ ಕಮತಗಿ ಯವರು ಪಾಕಿಸ್ತಾನದ ಕಾಗೆ ಭಾರತಕ್ಕೆ ಬಂತು ಎಂಬ ಕಥನದಲ್ಲಿ ಮನುಷ್ಯರು ಗಡಿಗಳನ್ನು ಮೀರಿ ಬದುಕುವ ಅಗತ್ಯತೆಯ ಕುರಿತು ಅಭಿವ್ಯಕ್ತಿಸುತ್ತಾರೆ. ಅಲ್ಲದೆ ಇಂದಿನ ದೇಶ ಪ್ರೇಮ ಕಲಕಬೇಕೆ ವಿನಹ ಕೆರಳಿಸಬಾರದು ಕವಿ ತಮ್ಮ ಜವಾರಿ ಜರ್ನಿ ಅನುಭವದ ಬುತ್ತಿಯಲ್ಲಿ ಒಂದಿಷ್ಟು ನಗೆ ಒಂದಿಷ್ಟು ನಗ್ನ ಎಂಬ ಅಡಿಬರಹ ಇಟ್ಟಿದ್ದಾರೆ. ಇಲ್ಲಿ ನಗ್ನ ಎಂದರೆ ಕೇವಲ ಬಟ್ಟೆ ಬಿಚ್ಚೋದು ಮಾತ್ರವಲ್ಲ ಪ್ರತಿಯೊಬ್ಬನ ಮನಸ್ಸಿನ ಮೋಹವನ್ನ ಕಳೆದುಕೊಳ್ಳುವುದು. ಆ ಮೂಲಕ ಸಂಬAಧಗಳನ್ನ ಗಟ್ಟಿಗೊಳಿಸುವಿಕೆಯ ಕುರಿತು ಓದುಗರನ್ನು ಗೆಲ್ಲುತ್ತಾರೆ” ಎಂದು ಶರೀಫ್ ಹಸಮಕಲ್ ಹೇಳಿದರು.

“ಒಬ್ಬ ತಾಯಿ ಮಗುವನ್ನ ಪೋಷಿಸುವುದು ಲೋಕದ ರೂಢಿ, ಆದರೆ ಮಗುವೇ ತಾಯಿಯನ್ನು ಪೋಷಿಸುವ ಜವಾಬ್ದಾರಿ ಹಿಂದಿರುವ ಹಸಿವಿನ ಸಂವೇದನೆಯನ್ನು ಕವಿ ಮಾನವೀಯತೆ ನೆಲೆಯಲ್ಲಿ ಚಿತ್ರಿಸಿದ್ದಾರೆ. ಮತ್ತೊಂದು ಕಥನದಲ್ಲಿ ಕೆಳಜಾತಿ ಹುಡುಗಿಯನ್ನು ಹೊರ ನಿಲ್ಲಿಸಿದ್ದು ಇಲ್ಲಿ ಬಸವಣ್ಣನವರ ತತ್ವ ಸಿದ್ಧಾಂತಗಳನ್ನ ಗಾಳಿಗೆ ತೂರಿ ಕೆಳಜಾತಿ ಎಂಬ ಕಾರಣಕ್ಕಾಗಿ ಹೊರಗಡೆ ನಿಲ್ಲಿಸಿ ತಾವು ಜಾತ್ಯಾತೀತರು ಎಂದು ಬೀಗುವ ಬಸವಾನು ಯಾಯಿಗಳ ಕುರಿತು ಸಂಕಟದ ವಿಚಾರಗಳನ್ನು ಸಮಾಜಮುಖಿಯಾಗಿ ಕಟ್ಟಿಕೊಡುವ ಕೆಲಸ ಸಾಹಿತಿ ಕಮತಗಿ ಯವರು ನಿರೂಪಿಸುತ್ತಾರೆ. ಇಲ್ಲಿರುವ 21 ಅನುಭವ ಕಥನಗಳಲ್ಲಿ ಬದುಕಿನ ಹತಾಸೆ, ನೋವು, ನಲಿವು, ಹಾಸ್ಯ, ಕಾರುಣ್ಯ ಎಲ್ಲವನ್ನೂ ಒಂದು ದಲಿತ ಪ್ರಬಂಧವೂ ಹೌದು ಎಂದು ಓದುಗÀರು ಅಪ್ಪಿಕೊಳ್ಳುತ್ತಾರೆ’ ಎಂದರು.
ಕಾರ್ಯಕ್ರಮವನ್ನು ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸದಸ್ಯ ಪ್ರೊ.ಸಿ.ಬಿ ಚಿಲ್ಕರಾಗಿ ಉದ್ಘಾಟಿಸಿದರು. ಜವಾರಿ ಜರ್ನಿ ಕೃತಿಯನ್ನು ಮಾಡಿ ಡಾ. ಸಿದ್ದಯ್ಯ ಪುರಾಣಿ ಟ್ರಸ್ಟಿನ ಅಧ್ಯಕ್ಷರು ಮತ್ತು ಪಠ್ಯಪುಸ್ತಕ ಸಂಸ್ಥೆಯ ರಚನಾ ಸಭೆಯ ಸದಸ್ಯರು ಆದ ಅಜ್ಮೀರ್ ನಂದಾಪುರ ಕೃತಿ ಲೋಕಾರ್ಪಣೆ ನೆರವೇರಿಸಿದರು. ದಲಿತ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ಹುಸೇನಪ್ಪ ಅಮರಾಪುರ ಮಾತನಾಡಿದರು. ಲೇಖಕರ ತಂದೆ ಹೊಳೆಯಪ್ಪ ಕಮತಗಿ, ಸುರಪುರ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಶರಣಬಸಪ್ಪ ಯಾಳವಾರ, ಜಾಲಹಳ್ಳಿಯ ಕೋಲಕಾರ ಫ್ಯಾಮಿಲಿ ಟ್ರಸ್ಟ್ ಪ್ರಕಾಶಕ, ರಾಘವೇಂದ್ರ ಕೋಲಕಾರ ಉಪಸ್ಥಿತರಿದ್ದರು.
ಡಾ. ಅರುಣ ಕುಮಾರ್ ಬೇರ್ಗಿ ಪ್ರಾಸ್ತಾವಿಕ ಮಾತನಾಡಿದರು. ಕವಿ ಡಾ. ಮಲ್ಲಿಕಾರ್ಜುನ ಕಮತಗಿ ಅನಿಸಿಕೆ ವ್ಯಕ್ತಪಡಿಸಿದರು. ಡಾ. ಬಸವರಾಜ ಪಿ ನಾಯಕ, ವೀರೇಶ್ ಕನ್ನಾರಿ, ಎರಿಯಪ್ಪ ಬೆಳಗುರ್ಕಿ, ಡಾ. ಖಾದರ್ ಭಾಷಾ, ಆಂಜನೇಯ ರಾಮತ್ನಾಳ, ಹುಲಿಗೇಶ ಬಾದರ್ಲಿ, ಅಮರೇಶ್ ಅಲಬನೂರು, ಕನಕಪ್ಪ ವಾಗಣಗೇರಿ, ನಾಗರಾಜ ಕೋರಿ, ಹನುಮಂತಪ್ಪ ಚಂದಾಲಾಪುರ, ಆದಿಶೇಷ ನೀಲಗಾರ, ಸಿದ್ದಯ್ಯ ಸ್ಥಾವರ ಮಠ, ದೊಡ್ಡಬಸಪ್ಪ ನಗನೂರು, ಸಿದ್ದಪ್ಪ ಜೀನೂರ, ಶಿವಗ್ಯಾನಪ್ಪ ಬೂದಿವಾಳ, ನವೀನ್ ಕುಮಾರ್ ಗಡಾದ್ ಕಿರಣ ಕುಮಾರ್ ಬಾದರ್ಲಿ ಪಾಲ್ಗೊಂಡಿದ್ದರು. ವಿದ್ಯಾರ್ಥಿನಿ ಅಕ್ಕಮಹಾದೇವಿ ಪ್ರಾರ್ಥಿಸಿದರು. ಉಪನ್ಯಾಸಕ ರಾಮಣ್ಣ ಹಿರೇಬೇರ್ಗಿ ಸ್ವಾಗತಿಸಿದರು. ಉಪನ್ಯಾಸಕ ಬಸವರಾಜ್ ಚಿಗರಿ ವಂದಿಸಿದರು. ಉಪನ್ಯಾಸಕರಾದ ಈಶ್ವರ ಹಲಗಿ ನಿರೂಪಿಸಿದರು.
