ಮಸ್ಕಿ: ಹೂವಿನಬಾವಿ ಸೀಮಾಂತರದಲ್ಲಿ ತ್ಯಾಜ್ಯ ಸಂಗ್ರಹ ಘಟಕ ಸ್ಥಾಪನೆಗೆ ವಿರೋಧಿಸಿ ತಹಸೀಲ್ದಾರ್‌ಗೆ ಮನವಿ ಸಲ್ಲಿಕೆ

Spread the love

ನಮ್ಮ ಸಿಂಧನೂರು, ಜುಲೈ 15
ಮಸ್ಕಿ ತಾಲೂಕಿನ ಬುದ್ದಿನ್ನಿ.ಎಸ್ ಗ್ರಾಮದಲ್ಲಿ ಯಾವುದೇ ಕಾರಣಕ್ಕೂ ಪುರಸಭೆಯ ನಿಯೋಜಿತ ತ್ಯಾಜ್ಯ ಸಂಗ್ರಹ ಘಟಕ ನಿರ್ಮಿಸಬಾರದು ಎಂದು ಆಗ್ರಹಿಸಿ, ಅಂಕುಶದೊಡ್ಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಿವಿಧ ಗ್ರಾಮಗಳ ಗ್ರಾಮಸ್ಥರು ತಹಸೀಲ್ದಾರ್ ಸುಧಾ ಅರಮನೆ ಅವರಿಗೆ ಸೋಮವಾರ ಮನವಿಪತ್ರ ಸಲ್ಲಿದರು.
ಹೂವಿನಬಾವಿ ಸೀಮಾಂತರದಲ್ಲಿರುವ ಭೂಮಿಯಲ್ಲಿ ಪರಿಸರ ಮಾಲಿನ್ಯ ಹಾಗೂ ರೋಗಕಾರಕ ತ್ಯಾಜ್ಯ ಸಂಗ್ರಹದ ವಿಲೇವಾರಿ ಘಟಕ ಸ್ಥಾಪನೆಗೆ ಹೂವಿನಭಾವಿ, ಬುದ್ದಿನ್ನಿ ಎಸ್, ಬಸಾಪುರ, ಮುದಬಾಳ, ಬೆಂಚಮರಡಿ, ಇಲಾಲಪುರ, ಹರ್ವಾಪುರ, ತುಪ್ಪದೂರು ಗ್ರಾಮಗಳ ಸಮಸ್ತ ಜನರ ವಿರೋಧ ಇರುತ್ತದೆ. ಹಾಗಾಗಿ ಈ ತೀರ್ಮಾನವನ್ನು ಕೂಡಲೇ ಕೈಬಿಡಬೇಕು ಎಂದು ಪ್ರತಿಭಟನಾಕಾರರು ತಹಸೀಲ್ದಾರ್ ಅವರ ಗಮನ ಸೆಳೆದರು.
ಬುದ್ದಿನ್ನಿ.ಎಸ್ ಗ್ರಾಮದ ಮುಖಂಡ ನಾಗರಡ್ಡೆಪ್ಪ ದೇವರಮನಿ ಮಾತನಾಡಿ, ತ್ಯಾಜ್ಯ ಸಂಗ್ರಹದ ವಿಲೇವಾರಿ ಘಟಕ ಸ್ಥಾಪನೆಗೆ ಗುರುತಿಸಿರುವ ಪ್ರದೇಶದಲ್ಲಿ ಸರ್ಕಾರಿ ಪ್ರೌಢಶಾಲೆ ಇದ್ದು, ಇಲ್ಲಿ ಮಕ್ಕಳು ಶಾಲೆ ಕಲಿಯುತ್ತಾರೆ. ಶಾಲೆ ಇರುವ ಪ್ರದೇಶದಲ್ಲಿ ತ್ಯಾಜ್ಯ ಸಂಗ್ರಹ ವಿಲೇವಾರಿ ಘಟಕ ಸ್ಥಾಪಿಸುವುದು ಅವೈಜ್ಞಾನಿಕ ಹಾಗೂ ಪರಿಸರ ಮತ್ತು ಜೀವಶಾಸ್ತ್ರ ಇಲಾಖೆಯ ನಿಯಮಗಳಿಗೆ ವಿರೋಧವಾಗಿದ್ದು, ಮಕ್ಕಳ ಹಕ್ಕುಗಳ ಸ್ಪಷ್ಟ ಉಲ್ಲಂಘನೆಯಾಗುತ್ತದೆ. ತ್ಯಾಜ್ಯ ಸಂಗ್ರಹ ಘಟಕದಿಂದ ಸುತ್ತಲೂ ದುರ್ನಾತ ಹರಡುವುದರಿಂದ ಅಭ್ಯಾಸ ಮಾಡಲು ತೊಂದರೆಯಾಗುತ್ತದೆ. ಇದರಿಂದ ಮಕ್ಕಳ ಶೈಕ್ಷಣಿಕ ಭವಿಷ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವುದಲ್ಲದೇ, ಆನಾರೋಗ್ಯ ಸಮಸ್ಯೆಗೂ ಕಾರಣವಾಗುತ್ತದೆ. ಹಾಗಾಗಿ ಹೂವಿನಬಾವಿ ಗ್ರಾಮ ಸೀಮಾಂತರದ ಭೂಮಿಯಲ್ಲಿ ಯಾವ ಕಾರಣಕ್ಕೂ ತ್ಯಾಜ್ಯ ಸಂಗ್ರಹದ ವಿಲೇವಾರಿ ಘಟಕ ಸ್ಥಾಪನೆ ಮುಂದಾಗಬಾರದು ಎಂದು ಆಗ್ರಹಿಸಿದರು.

Namma Sindhanuru Click For Breaking & Local News

ಗ್ರಾಮೀಣ ಪ್ರದೇಶದಲ್ಲಿ ಹೆಚ್ಚಿನ ಜನರು ಅನಕ್ಷರಸ್ಥರು ಇರುವುದರಿಂದ ತ್ಯಾಜ್ಯ ಸಂಗ್ರಹ ಘಟಕದಲ್ಲಿ ಸಂಗ್ರಹಿಸುವ ಹತ್ತಾರು ನಮೂನೆಯ ತ್ಯಾಜ್ಯ ಹಾಗೂ ವೈದ್ಯಕೀಯ ತ್ಯಾಜ್ಯದಿಂದ ಗ್ರಾಮಸ್ಥರು ಭವಿಷ್ಯದಲ್ಲಿ ತೊಂದರೆಗೀಡಾಗುವ ಸಂಭವವಿದೆ. ತ್ಯಾಜ್ಯ ಸಂಗ್ರಹಿಸಲು ಗುರುತಿಸಿದ ಪ್ರದೇಶವು ಮಸ್ಕಿಯಿಂದ ಅಂದಾಜು 12 ಕಿ.ಮೀ.ಗೂ ಹೆಚ್ಚು ಅಂತರವಿದ್ದು, ಅಲ್ಲಿಂದ ಟ್ರಾಕ್ಟರ್ ಇಲ್ಲವೇ, ಇನ್ನಿತರೆ ವಾಹನಗಳಲ್ಲಿ ತ್ಯಾಜ್ಯ ಸಂಗ್ರಹಿಸಿಕೊAಡು ಸಾಗಿಸುವುದು ಅವೈಜ್ಞಾನಿಕವಾಗಿದ್ದು ಹೆಚ್ಚು ಖರ್ಚುದಾಯಕ ವಾಗಿದೆ. ಹಾಗಾಗಿ ಈ ನಿರ್ಧಾರವನ್ನು ಕೂಡಲೇ ವಾಪಸ್ ಪಡೆಯಬೇಕು. ಮಸ್ಕಿ ತಾಲೂಕಾಗಿ ಅಭಿವೃದ್ಧಿ ಹೊಂದುತ್ತಿದ್ದು, ಕೆಲ ರಿಯಲ್ ಎಸ್ಟೇಟ್‌ನ ಪ್ರಭಾವಿಗಳ ಚಿತಾವಣೆ ಒಂದೆಡೆಯಾದರೆ, ಪುರಸಭೆ ಅಧಿಕಾರಿಗಳಿಗೆ ಕೆಲವರು ಅವೈಜ್ಞಾನಿಕ ಸಲಹೆ ನೀಡುವ ಮೂಲಕ ದಿಕ್ಕು ತಪ್ಪಿಸುತ್ತಿರುವ ಪರಿಣಾಮ ಗ್ರಾಮೀಣ ಪ್ರದೇಶವನ್ನು ತ್ಯಾಜ್ಯದ ತಾಣವನ್ನಾಗಿ ಮಾಡಲು ಹೊರಟಿರುವುದು ಸರಿಯಲ್ಲ ಎಂದು ಪ್ರತಿಭಟನಾ ನಿರತರು ತಹಸೀಲ್ದಾರ್ ಅವರ ಗಮನಕ್ಕೆ ತಂದರು.
ಒಂದು ವೇಳೆ ಗ್ರಾಮಸ್ಥರ ವಿರೋಧದ ನಡೆವೆಯೂ ತ್ಯಾಜ್ಯ ವಿಲೇವಾರಿ ಘಟಕ ನಿರ್ಮಿಸುವ ತೀರ್ಮಾನಕ್ಕೆ ಬಂದದ್ದಾದರೆ ತಹಸೀಲ್ ಕಾರ್ಯಾಲಯದ ಮುಂದೆ ಅನರ್ಧಿಷ್ಟಾವಧಿ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು. ಈ ಸಂದರ್ಭದಲ್ಲಿ ಬಸವರಾಜ ಗುತ್ತೇದಾರ, ಮಾಳಪ್ಪ ಹಟ್ಟಿ ಹೂವಿನಬಾವಿ, ಶ್ರೀನಿವಾಸ ಹೂವಿನಬಾವಿ, ದೇವೇಂದ್ರಪ್ಪ ಬುದ್ದಿನ್ನಿ.ಎಸ್, ದುರುಗಪ್ಪ ಲಿಂಗಸುಗೂರು ಬಸಾಪುರ, ಮೌನೇಶ ಹೂವಿನಬಾವಿ, ಅಶೋಕ ಬಡಿಗೇರ ಹೂವಿನಬಾವಿ, ಬಸವರಾಜ ಚಿಲ್ಕರಾಗಿ, ನಿಂಗಪ್ಪ ಚಿಲ್ಕರಾಗಿ, ವೀರಭದ್ರಪ್ಪ ಪೂಜಾರಿ, ಯಮನಪ್ಪ ಮುದಬಾಳ, ರಮೇಶ ಆಮದಿಹಾಳ, ದೇವಪ್ಪ ಮೇರನಾಳ, ಗೋವಿಂದಪ್ಪ, ಶರಣಪ್ಪಗೌಡ ಮಾಲಿ ಪಾಟೀಲ್, ಭೀಮಣ್ಣ ವಗ್ಗರ, ಅಮರಯ್ಯಸ್ವಾಮಿ, ನಿಂಗಯ್ಯ ಪಾಳೇದ, ಸಿದ್ದನಗೌಡ ಬುದ್ದಿನ್ನಿ, ಸಿದ್ದೇಶ ಮರಕಲದಿನ್ನಿ, ಹಂಪನಗೌಡ ಬುದ್ದಿನ್ನಿ, ನಿಂಗಪ್ಪ ಪಾಳೇದ, ಅನಿಲಕುಮಾರ, ಶಿವಾನಂದ, ರಮೇಶ ಭಜಂತ್ರಿ, ಮೌನೇಶ ದೇವರಮನಿ ಸೇರಿದಂತೆ ಇನ್ನಿತರರಿದ್ದರು.


Spread the love

Leave a Reply

Your email address will not be published. Required fields are marked *