ಸಿಂಧನೂರು: ನಾಡಗೌಡರ ಹೆಚ್ಚುವರಿ ಭೂಮಿ ಭೂರಹಿತರಿಗೆ ಹಂಚಲು ಆಗ್ರಹಿಸಿ ನ.11ರಂದು ಮಹಾಧರಣಿ : ಆರ್.ಮಾನಸಯ್ಯ

Spread the love

ನಮ್ಮ ಸಿಂಧನೂರು, ನವೆಂಬರ್ 4
ಜವಳಗೇರಾ ನಾಡಗೌಡರ ಸರಕಾರಿ ಹೆಚ್ಚುವರಿ ಭೂಮಿ 1064 ಎಕರೆ ಭೂರಹಿತರಿಗೆ ಹಂಚಲು ಆಗ್ರಹಿಸಿ ಸಿಪಿಐ(ಎಂಎಲ್) ರೆಡ್‌ಸ್ಟಾರ್, ಕರ್ನಾಟಕ ರೈತ ಸಂಘ (ಎಐಕೆಕೆಎಸ್) ತಾಲೂಕು ಸಮಿತಿ ವತಿಯಿಂದ ನವೆಂಬರ್ 11ರಂದು ಸಿಂಧನೂರು ತಹಸೀಲ್ ಕಾರ್ಯಾಲಯದ ಮುಂದೆ ಮಹಾಧರಣಿ ಹಮ್ಮಿಕೊಳ್ಳಲಾಗಿದೆ ಎಂದು ಪಕ್ಷದ ಪಾಲಿಟ್ ಬ್ಯೂರೋ ಸದಸ್ಯ ಆರ್.ಮಾನಸಯ್ಯ ಹೇಳಿದರು.
ನಗರದ ಪ್ರವಾಸಿ ಮಂದಿರದಲ್ಲಿ ಕರ್ನಾಟಕ ರೈತ ಸಂಘ (ಎಐಕೆಕೆಎಸ್) ಹಾಗೂ ಸಿಪಿಐಎಂಎಲ್ ರೆಡ್‌ಸ್ಟಾರ್ ಜಿಲ್ಲಾ ಸಮಿತಿ ನೇತೃತ್ವದಲ್ಲಿ ಹಾಗೂ ಮಲ್ಲಯ್ಯ ಕಟ್ಟಿಮನಿ ಇವರ ಅಧ್ಯಕ್ಷತೆಯಲ್ಲಿ ಭಾನುವಾರ ಜರುಗಿದ ಸಭೆಯಲ್ಲಿ ಅವರು ಮಾತನಾಡಿದರು. “ಸಿಂಧನೂರು ಸಿಡಿದೆದ್ದ ಭೂ ಸಂಘರ್ಷ ಕಳೆದ 6 ತಿಂಗಳು ಹಗಲು ರಾತ್ರಿ ಸರಣಿ ಧರಣಿ ನಡೆಸುವ ಮೂಲಕ ಗಮನ ಸೆಳೆದಿದೆ. ಇದರಿಂದ ಎಚ್ಚೆತ್ತ ಆಡಳಿತ ಸಿಂಧನೂರು ಭೂ ನ್ಯಾಯ ಮಂಡಳಿ ರಚನೆಮಾಡಿದೆ. ಭೂ ನ್ಯಾಯ ಮಂಡಳಿ ಮುಂದೆ ನಮ್ಮ ಹಕ್ಕೊತ್ತಾಯಗಳನ್ನು ನ್ಯಾಯಯುತ ಬೇಡಿಕೆಗಳನ್ನು ಮಂಡಿಸಿ, ಅನ್ಯರ ಪಾಲಾಗಿರುವ ತಾಲೂಕಿನ ಸಾವಿರಾರು ಎಕರೆ ಹೆಚ್ಚುವರಿ ಭೂಮಿಯನ್ನು, ಭೂಹೀನರಿಗೆ ಹಂಚಬೇಕೆAದು ಆಗ್ರಹಿಸಿ ನವೆಂಬರ್ 11, 2024 ಸೋಮವಾರದಂದು ಸಿಂಧನೂರು ತಹಸೀಲ್ದಾರ್ ಕಛೇರಿ ಮುಂದೆ ಮಹಾ ಧರಣಿ ಹೋರಾಟ ನಡೆಸಲು ಸಭೆಯಲ್ಲಿ ಒಮ್ಮತದಿಂದ ತೀರ್ಮಾನಿಸಲಾಗಿದೆ” ಎಂದು ವಿವರಿಸಿದರು.

Namma Sindhanuru Click For Breaking & Local News

ಸಿಂಧನೂರು ತಾಲೂಕಿನಲ್ಲಿ ಸರಕಾರಿ ಹೆಚ್ಚುವರಿ ಭೂಮಿ ಇರುವ ಗ್ರಾಮಗಳಲ್ಲಿ ರೈತ ಸಂಘದ ಸಮಿತಿಗಳನ್ನು ರಚಿಸಿ, ಭೂಹೀನ ಬಡವರಿಗೆ ಭೂಮಿ ಹಂಚುವ ಹೋರಾಟವನ್ನು ಇನ್ನೂ ವಿಸ್ತಾರಗೊಳಿಸಲು ಸಭೆಯಲ್ಲಿ ಆರ್.ಮಾನಸಯ್ಯ ಕರೆ ನೀಡಿದರು. ಈ ಸಂದರ್ಭದಲ್ಲಿ ರಾಜ್ಯ ಸಮಿತಿ ದಸ್ಯ ಎಂ.ಗಂಗಾಧರ, ಸಂತೋಷ ಹಿರೇದಿನ್ನಿ, ಮಾರುತಿ ಜಿನ್ನಾಪೂರ, ಡಿ.ಕೆ.ಲಿಂಗಸುಗೂರು, ಶೇಖರಪ್ಪ ಮಾನವಿ, ರಾಮಕೃಷ್ಣ, ಹನುಮಂತ ಗೋಡ್ಯಾಳ, ರುಕ್ಮಿಣಿ, ಹೆಚ್.ಆರ್.ಬಾಲಪ್ಪ ಬಸಾಪೂರ, ಹೆಚ್.ಆರ್. ಹೊಸಮನಿ, ಮುದಿಯಪ್ಪ, ರೇಣುಕಮ್ಮ, ಲಕ್ಷ್ಮಿ, ತುಳಸಮ್ಮ, ಹಂಪಮ್ಮ, ಈರಮ್ಮ ಸೇರಿದಂತೆ ಸಿಂಧನೂರು ತಾಲೂಕ ಸಮಿತಿ ಸಂಗಾತಿಗಳು ಭಾಗವಹಿಸಿದ್ದರು.


Spread the love

Leave a Reply

Your email address will not be published. Required fields are marked *