ಕುಷ್ಟಗಿ: ವಿಷ ಕುಡಿದು ರಂಗಾಪುರ ಗ್ರಾಮದ ರೈತ ಆತ್ಮಹತ್ಯೆ

Spread the love

ಕುಷ್ಟಗಿ ಅಕ್ಟೋಬರ್ 21
ಸಾಲಬಾಧೆ ತಾಳಲಾರದೇ ವಿಷ ಕುಡಿದು ತಾಲೂಕಿನ ರಂಗಾಪುರ ಗ್ರಾಮದ ರೈತ ಶ್ರೀಕಾಂತ ತಳವಾರ (26), ಅಕ್ಟೋಬರ್‌ 1, 2024ರಂದು ಮೃತಪಟ್ಟಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಮೃತನ ಹೆಂಡತಿ ರೇಣುಕಾ ಶ್ರೀಕಾಂತ ನೀಡಿದ ದೂರಿನ ಮೇಲೆ ಹನುಮಸಾಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಖಾಸಗಿ ಬ್ಯಾಂಕ್, ಲೇವಾದೇವಿದಾರರ ಬಳಿ ಕೃಷಿಗಾಗಿ ಸಾಲ ಮಾಡಿದ್ದರು, ಸಾಲ ತೀರಿಸಲಾಗದೇ ಮನನೊಂದು ಜಮೀನಿನಲ್ಲಿ ವಿಷ ಕುಡಿದಿದ್ದಾರೆ, ವಿಷ ಕುಡಿದು ಬಳಲಿದ ಅವರನ್ನು ಸಂಬಂಧಿಕರು ಕುಷ್ಟಗಿ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ಮಾರ್ಗಮಧ್ಯದಲ್ಲಿ ಮೃತಪಟ್ಟಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.


Spread the love

Leave a Reply

Your email address will not be published. Required fields are marked *