ನಮ್ಮ ಸಿಂಧನೂರು, ಏಪ್ರಿಲ್ 21
ಜಗತ್ತಿಗೆ ಅಹಿಂಸೋ ಪರಮಧರ್ಮ ಎಂಬ ಸಾರ್ವಕಾಲಿಕ ಸಂದೇಶ ಸಾರಿದ ಶ್ರೇಷ್ಠ ದಾರ್ಶನಿಕ ಮಹಾವೀರ ಜಯಂತಿಯ ಪ್ರಯುಕ್ತ ಭಾನುವಾರ ಕೊಪ್ಪಳ ನಗರದ ಜೈನ ಬಸದಿಗೆ ಲೋಕಸಭಾ ಕ್ಷೇತ್ರದ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ತೆರಳಿ ಸಮುದಾಯದ ಮುಖಂಡರಿಗೆ ಶುಭಕೋರಿದರು. ಬಿಜೆಪಿ ಅಭ್ಯರ್ಥಿ ಡಾ.ಬಸವರಾಜ ಕ್ಯಾವಟರ್ ಹಾಗೂ ಕಾಂಗ್ರೆಸ್‌ನ ರಾಜಶೇಖರ ಹಿಟ್ನಾಳ್ ಅವರು ತಮ್ಮ ಬೆಂಬಲಿಗರು, ಕಾರ್ಯಕರ್ತರು ಹಾಗೂ ಅಭಿಮಾನಿಗಳೊಂದಿಗೆ ಜೈನ ಬಸದಿಗೆ ತೆರಳಿ ಜೈನ ಸಮುದಾಯದ ಕಾರ್ಯಕ್ರಮದಲ್ಲಿ ಭಾಗವಹಿಸುವ ಮೂಲಕ ಸಮುದಾಯದ ಮುಖಂಡರಿಗೆ ಶುಭಾಶಯಗಳನ್ನು ತಿಳಿಸಿದರು.