ಎನ್‌ಆರ್‌ಬಿಸಿ 5ಎ ಕಾಲುವೆ ಯೋಜನೆ ಪೂರ್ವ ಕಾರ್ಯಸಾಧ್ಯತಾ ವರದಿಗೆ ಅನುಮೋದನೆ

Spread the love

ನಮ್ಮ ಮಸ್ಕಿ, ಜನವರಿ 26
ನಾರಾಯಣಪುರ ಬಲದಂಡೆ ಕಾಲುವೆ ಜಾಲದಡಿ ೫ಎ ವಿತರಣಾ ಕಾಲುವೆ ಯೋಜನೆ ಕುರಿತಂತೆ ಕಾರ್ಯಸಾಧ್ಯತಾ ವರದಿ (ಪ್ರಿ ಪಿಸಿಬಿಲಿಟಿ) ಸಿದ್ಧಪಡಿಸಲು ಕೃಷ್ಣ ಭಾಗ್ಯ ಜಲ ನಿಗಮ ನಿಯಮಿತ ವ್ಯವಸ್ಥಾಪಕ ನಿರ್ದೇಶಕರು ಆಡಳಿತಾತ್ಮಕ ಅನುಮೋದನೆ ನೀಡಿ ದಿನಾಂಕ: 20-01-2024 ರಂದು ಆದೇಶಿಸಿದ್ದಾರೆ.
ಈ ಆದೇಶದ ಪ್ರತಿ ‘ನಮ್ಮ ಸಿಂಧನೂರು’ ಗೆ ಲಭ್ಯವಾಗಿದ್ದು, ಉಪಮುಖ್ಯಮಂತ್ರಿಗಳೂ ಹಾಗೂ ಜಲಸಂಪನ್ಮೂಲ ಸಚಿವರಾದ ಡಿ.ಕೆ.ಶಿವಕುಮಾರ ಅವರು ಟಿಪ್ಪಣೀಕರಿಸಿದಂತೆ ಪ್ರಸ್ತಾಪಿತ ಯೋಜನೆಯ ಕುರಿತಂತೆ ಪೂರ್ವಕಾರ್ಯ ಸಾಧ್ಯತಾ ವರದಿಯನ್ನು (ಪ್ರಿ ಪಿಸಿಬಿಲಿಟಿ) ತಯಾರಿಸಲು ಸಮಾಲೋಚಕರನ್ನು ನೇಮಕ ಮಾಡುವ ಕಾಮಗಾರಿಯನ್ನು 15 ಲಕ್ಷ ರೂಪಾಯಿ ಅಂದಾಜು ವೆಚ್ಚದಲ್ಲಿ ಕೈಗೆತ್ತಿಕೊಳ್ಳಲು ಷರತ್ತುಗೊಳಪಟ್ಟು ನಿಯಮಾನುಸಾರ ಕ್ರಮ ಜರುಗಿಸಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ’ ಎಂದು ಆದೇಶದಲ್ಲಿ ತಿಳಿಸಿದ್ದಾರೆ.

Namma Sindhanuru Click For Breaking & Local News

Namma Sindhanuru Click For Breaking & Local News


“ಸದರಿ ಕಾಮಗಾರಿಯನ್ನು 2023-24ನೇ ಸಾಲಿನ ಕಾರ್ಯಕ್ರಮ ಪಟ್ಟಿಯಲ್ಲಿ ತಪ್ಪದೇ ನಿಯಮಾನುಸಾರ ಅಳವಡಿಸಿಕೊಳ್ಳುವುದು, ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ ಅಧಿನಿಯಮ 1999 ಮತ್ತು ನಿಯಮಗಳು 2000 ರನ್ವಯ ಪರಿಶೀಲಿಸಿ, ಇ-ಪ್ರೋಕ್ಯೂರ್‌ಮೆಂಟ್‌ನಲ್ಲಿ ನಿಯಮಾನುಸಾರ ಟೆಂಡರ್ ಕರೆದು ಕಾಮಗಾರಿಯನ್ನು ಅನುಷ್ಠಾನಗೊಳಿಸುವುದು, ಚಾಲ್ತಿಯಲ್ಲಿರುವ ನಿಯಮಾವಳಿಗಳನ್ವಯ ಅಂದಾಜು ಪತ್ರಿಕೆಗೆ ಸಕ್ಷಮ ಪ್ರಾಧಿಕಾರದಿಂದ ಅನುಮೋದನೆ ಪಡೆದು ತಾಂತ್ರಿಕ ಮಂಜೂರಾತಿಯನ್ನು ನೀಡಲು ಕ್ರಮ ಕೈಗೊಳ್ಳುವುದು” ಈ ಕುರಿತು ಆದೇಶದಲ್ಲಿ ವಿವರಿಸಿದ್ದಾರೆ.

Namma Sindhanuru Click For Breaking & Local News


ಕರ್ನಾಟಕ ನೀರಾವರಿ ಸಂಘ (ರಿ) ಹಾಗೂ ಎನ್‌ಆರ್‌ಬಿಸಿ 5ಎ ಕಾಲುವೆ ಹೋರಾಟ ಸಮಿತಿ ನೇತೃತ್ವದಲ್ಲಿ ಸೇರಿದಂತೆ ಯೋಜನೆ ವ್ಯಾಪ್ತಿಯ ಗ್ರಾಮಗಳ ಹಲವು ಮುಖಂಡರು ಹಾಗೂ ಗ್ರಾಮಸ್ಥರು ಈ ಯೋಜನೆ ಜಾರಿಗೆ ಒತ್ತಾಯಿಸಿ ಎರಡು ವರ್ಷಗಳಿಗೂ ಹೆಚ್ಚು ಕಾಲ ಧರಣಿ ಸತ್ಯಾಗ್ರಹ ನಡೆಸಿದ್ದನ್ನು ಸ್ಮರಿಸಬಹುದು. ಮಸ್ಕಿ ತಾಲೂಕಿನ ಪಾಮನಕಲ್ಲೂರಿನ ಆದಿ ಬಸವೇಶ್ವರ ದೇವಸ್ಥಾನದ ಮುಂಭಾಗದಲ್ಲಿ 20-11-2020 ರಂದು ಆರಂಭವಾದ ಹೋರಾಟ ನಂತರ ಎಸ್.ಬುದ್ದಿನ್ನಿ ಗ್ರಾಮದಲ್ಲಿ ಮುಂದುವರಿದು ನಂತರ ಚಿಲ್ಕರಾಗಿ ಗ್ರಾಮದಲ್ಲಿ ಕೊನೆಗೊಂಡಿತ್ತು.
ಈ ಯೋಜನೆ ಜಾರಿಯಾಗುವವರೆಗೂ ಹೋರಾಟ ಮುಂದುವರಿಯಲಿದೆ ಎಂದು ಮಸ್ಕಿ ತಾಲೂಕು ಘಟಕದ ಗೌರವ ಅಧ್ಯಕ್ಷರಾದ ತಿಮ್ಮನಗೌಡ ಚಿಲ್ಕರಾಗಿ, ಅಧ್ಯಕ್ಷರಾದ ಬಸವರಾಜಪ್ಪಗೌಡ ಹರ್ವಾಪುರ, ಪ್ರಧಾನ ಕಾರ್ಯದರ್ಶಿಗಳಾದ ನಾಗರಡ್ಡೆಪ್ಪ ದೇವರಮನಿ ಬುದ್ದಿನ್ನಿ, ಖಜಾಂಚಿಗಳಾದ ಶಿವನಗೌಡ ನಾಡಗೌಡ್ರು ವಟಗಲ್ ಹಾಗೂ ಮುಖಂಡರಾದ ಮಲ್ಲಾರಡ್ಡೆಪ್ಪ ಚಿಲ್ಕರಾಗಿ ತಿಳಿಸಿದ್ದಾರೆ.

Namma Sindhanuru Click For Breaking & Local News

Spread the love

Leave a Reply

Your email address will not be published. Required fields are marked *