ಜವಳಗೇರಾ: ದಲಿತ ಮುಖಂಡ ಚೌರಪ್ಪ ಜವಳಗೇರಾ ನಿಧನ

Spread the love

ನಮ್ಮ ಸಿಂಧನೂರು, ಮೇ 12
ಕರ್ನಾಟಕ ದಲಿತ ಸಂಘರ್ಷ ಸಮಿತಿ (ಪ್ರೊ.ಬಿ.ಕೆ.ಸ್ಥಾಪಿತ) ಸಿಂಧನೂರು ತಾಲೂಕು ಸಮಿತಿ ಮಾಜಿ ಸಂಚಾಲಕ, ಜವಳಗೇರಾ ಮಂಡಲ ಪಂಚಾಯಿತಿ ಮಾಜಿ ಉಪ ಪ್ರಧಾನ ಹಾಗೂ ದಲಿತ ಮುಖಂಡರಾಗಿದ್ದ ಚೌರಪ್ಪ ಜವಳಗೇರಾ (65) ಅವರು ಭಾನುವಾರ ಹೃದಯಾಘಾತದಿಂದ ನಿಧನರಾಗಿದ್ದಾರೆ. ತಾಲೂಕು ಮತ್ತು ಜಿಲ್ಲಾಮಟ್ಟದ ಹಲವು ಹೋರಾಟಗಳಲ್ಲಿ ತೊಡಗಿಸಿಕೊಂಡಿದ್ದ ಅವರು ಚಳವಳಿಗಳಲ್ಲಿ ಸಕ್ರಿಯರಾಗಿದ್ದರು. ಚೌರಪ್ಪ ಅವರ ನಿಧನಕ್ಕೆ ದಲಿತ ಸಂಘಟನೆಗಳ ಮುಖಂಡರು, ಪದಾಧಿಕಾರಿಗಳು ಸಂತಾಪ ವ್ಯಕ್ತಪಡಿಸಿದ್ದಾರೆ


Spread the love

Leave a Reply

Your email address will not be published. Required fields are marked *