ಸಿಂಧನೂರು: ಹೋಮಿಯೋಪತಿ ವೈದ್ಯರ ದಿನಾಚರಣೆ, ಸನ್‌ರೈಸ್ ಕಾಲೇಜು ವಿದ್ಯಾರ್ಥಿಗಳಿಂದ ಹೋಮಿಯೋಪತಿ ವೈದ್ಯರಿಗೆ ಸನ್ಮಾನ

Spread the love

ನಮ್ಮ ಸಿಂಧನೂರು, ಏಪ್ರಿಲ್ 11
ನಗರದ ಸನ್‌ರೈಸ್ ಗ್ರೂಪ್ ಆಫ್ ಇನ್ಸ್ಟಿಟ್ಯೂಶನ್‌ (ಡಿ ಫಾರ್ಮಸಿ, ನರ್ಸಿಂಗ್, ಪ್ಯಾರಾ ಮೆಡಿಕಲ್ ಕಾಲೇಜ್) ವತಿಯಿಂದ ಹೋಮಿಯೋಪತಿ ವೈದ್ಯರ ದಿನಾಚರಣೆ ನಿಮಿತ್ತ ಬುಧವಾರ ನಗರದ ಹೋಮಿಯೋಪತಿ ಕ್ಲಿನಿಕ್‌ಗಳಿಗೆ ತೆರಳಿ ವೈದ್ಯರನ್ನು ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಲಾಯಿತು. ಸುವರ್ಣ ಕ್ಲಿನಿಕ್‌ನ ಡಾ.ಮಲ್ಲಯ್ಯ, ಶ್ರೀಕೃಷ್ಣ ಹೋಮಿಯೋಪತಿ ಕ್ಲಿನಿಕ್‌ನ ಡಾ.ಸಂಜೋತ್ ಹಾಗೂ ಸದಾಶಿವ ಹೋಮಿಯೋಪತಿ ಕ್ಲಿನಿಕ್‌ನ ಡಾ.ಧರ್ಮತೇಜ್ ಅವರನ್ನು ಅವರನ್ನು ಸನ್‌ರೈಸ್ ಕಾಲೇಜಿನ ಪ್ಯಾರಾಮೆಡಿಕಲ್ ಕಾಲೇಜಿನ ಆಡಳಿತ ಮಂಡಳಿಯವರು ಹಾಗೂ ವಿದ್ಯಾರ್ಥಿಗಳು ಸನ್ಮಾನಿಸಿದರು. ಈ ಸಂದರ್ಭದಲ್ಲಿ ಉಪನ್ಯಾಸಕರಾದ ಬಸವಲಿಂಗ ಹಸಮಕಲ್, ಆಶುಪಾಷಾ, ಸಂಸ್ಥೆಯ ಸದಸ್ಯರಾದ ಇಸಾಕ್.ಕೆ, ನರ್ಸಿಂಗ್ ಪ್ರಾಚಾರ್ಯರಾದ ಸಿರಿಲ್, ಪ್ಯಾರಾಮೆಡಿಕಲ್ ಪ್ರಾಚಾರ್ಯ ಚಕ್ರವರ್ತಿ ಸೇರಿದಂತೆ ಉಪನ್ಯಾಸಕರು, ಸಿಬ್ಬಂದಿಯವರು ಇದ್ದರು.

Namma Sindhanuru Click For Breaking & Local News
Namma Sindhanuru Click For Breaking & Local News

Spread the love

Leave a Reply

Your email address will not be published. Required fields are marked *