ನಮ್ಮ ಸಿಂಧನೂರು, ಮಾರ್ಚ್ 15
ಕೊಪ್ಪಳ ಸಂಸದ ಕರಡಿ ಸಂಗಣ್ಣ ಹಾಗೂ ಸಿಂಧನೂರು ಶಾಸಕ ಹಂಪನಗೌಡ ಬಾದರ್ಲಿ ಅವರು ನಗರದ ರೈಲ್ವೆ ನಿಲ್ದಾಣದಲ್ಲಿ ಎಸ್‌ಸಿಆರ್ ವ್ಯಾಪ್ತಿಗೊಳಪಡುವ ಯಶವಂತಪುರ-ಕಾರಟಗಿ ಎಕ್ಸ್‌ಪ್ರೆಸ್ ರೈಲು ಸಂಚಾರ ಸಿಂಧನೂರಿಗೆ ವಿಸ್ತರಣೆಯಾಗಿರುವುದಕ್ಕೆ ಶುಕ್ರವಾರ ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿದರು. 26 ವರ್ಷಗಳ ನಂತರ ಸಿಂಧನೂರು ನಗರಕ್ಕೆ ರೈಲ್ವೆ ಸಂಚಾರ ಆರಂಭವಾಗಿರುವುದು ಸಾರ್ವಜನಿಕರು ಹಾಗೂ ಪ್ರಯಾಣಿಕರಲ್ಲಿ ಹರ್ಷ ಮೂಡಿಸಿದೆ. ಕಳೆದ 2 ವರ್ಷಗಳಿಂದ ರೈಲ್ವೆ ಸ್ಟೇಶನ್ ಉದ್ಘಾಟನೆ ಹಾಗೂ ರೈಲು ಸಂಚಾರಕ್ಕೆ ಸಂಬಂಧಿಸಿದಂತೆ ತೀವ್ರ ಕುತೂಹಲವಿತ್ತು. ಇವತ್ತು ನಾಳೆ ಉದ್ಘಾಟನೆಯಾಗುತ್ತದೆ ಎನ್ನುತ್ತಲೇ ಕೊನೆಗೆ 2024ರ ಲೋಕಸಭಾ ಚುನಾವಣೆಗೆ ಮುನ್ನವೇ ಮಾರ್ಚ್ ೧೫ರಂದು ರೈಲ್ವೆ ಸಂಚಾರಕ್ಕೆ ಹಸಿರು ನಿಶಾನೆ ದೊರೆತಿದೆ. ಚಾಲನೆ ಸಂದರ್ಭದಲ್ಲಿ ವಿವಿಧ ಪಕ್ಷಗಳ ಮುಖಂಡರು, ಅಧಿಕಾರಿಗಳು ಸೇರಿದಂತೆ ಗಣ್ಯರು ಇದ್ದರು.
ಸಿಂಧನೂರಿನಿಂದ ಹೊರಡುವ ರೈಲುಗಳ ವೇಳಾಪಟ್ಟಿ
17304 ಸಿಂಧನೂರು-ಹುಬ್ಬಳ್ಳಿ, ಬೆಳಿಗ್ಗೆ 5
07382 ಸಿಂಧನೂರು-ಹುಬ್ಬಳ್ಳಿ, ಮಧ್ಯಾಹ್ನ 2.20
16546 ಸಿಂಧನೂರು-ಬೆಂಗಳೂರು ಸಂಜೆ 5.30
ಸಿಂಧನೂರಿಗೆ ಆಗಮಿಸುವ ರೈಲುಗಳು:
16545 ಬೆಂಗಳೂರು-ಸಿಂಧನೂರು, ಬೆಳಿಗ್ಗೆ 11.20
07381 ಹುಬ್ಬಳ್ಳಿ- ಸಿಂಧನೂರು, ಮಧ್ಯಾಹ್ನ 2
17303 ಹುಬ್ಬಳ್ಳಿ – ಸಿಂಧನೂರು, ರಾತ್ರಿ 10.40