ನಮ್ಮ ಸಿಂಧನೂರು, ಜನವರಿ 25
ಆಲ್ ಇಂಡಿಯಾ ಮುನ್ಸಿಪಲ್ ವರ್ಕರ್ಸ್ ಫೆಡರೇಶನ್ (ಎಐಸಿಸಿಟಿಯು) 3ನೇ ರಾಜ್ಯ ಸಮ್ಮೇಳನ ಫೆ.3 ಮತ್ತು 4ರಂದು ಬೆಂಗಳೂರಿನ ಐ.ಎ.ಟಿ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದು, ಈ ಹಿನ್ನೆಲೆಯಲ್ಲಿ ಕರ್ನಾಟಕ ಪ್ರಗತಿಪರ ತ್ಯಾಜ್ಯ ಸಾಗಿಸುವ ವಾಹನ ಚಾಲಕರ ಹಾಗೂ ಸಹಾಯಕರ ಸಂಘದಿAದ ನಗರದ ಪ್ರವಾಸಿ ಮಂದಿರದಲ್ಲಿ ಗುರುವಾರ ಪೋಸ್ಟರ್ ಬಿಡುಗಡೆಗೊಳಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ರಾಜ್ಯ ಸಂಚಾಲಕ ನಾಗರಾಜ ಪೂಜಾರ್, ಗುತ್ತಿಗೆ ಪದ್ಧತಿಯನ್ನು ರದ್ದುಗೊಳಿಸಿ, ಎಲ್ಲಾ ಪೌರ ಕಾರ್ಮಿಕರು, ಘನತ್ಯಾಜ್ಯ ವಿಲೇವಾರಿ ಮಾಡುವ ವಾಹನ ಚಾಲಕರು, ಲೋಡರ್ಸ್ಗಳು ಮತ್ತು ಕ್ಲೀನರ್‌ಗಳು, ಡಾಟಾ ಆಪರೇಟರ್, ಸೆಕ್ಯೂರಿಟ್ ಗಾರ್ಡ್, ಆಫೀಸ್ ಸ್ಟಾಫ್ ಕಾರ್ಮಿಕರನ್ನು ಖಾಯಂಗೊಳಿಸಬೇಕು, ಎಲ್ಲಾ ಸ್ವಚ್ಛತಾ ಕಾರ್ಮಿಕರಿಗೆ ಮಾಸಿಕ ವೇತನ 35,000 ರೂ. ನಿಗದಿಗೊಳಿಸಿ, ಕಾರ್ಮಿಕ ವಿರೋಧಿ ಕಾರ್ಮಿಕ ಸಂಹಿತೆಗಳನ್ನು ರದ್ದುಗೊಳಿಸಬೇಕು ಎನ್ನುವ ಪ್ರಮುಖ ಬೇಡಿಕೆಗಳು ಸೇರಿದಂತೆ ಇನ್ನಿತರೆ ಬೇಡಿಕೆಗಳ ಈಡೇರಿಕೆಗೆ ಸಮ್ಮೇಳನದ ಮೂಲಕ ಕೇಂದ್ರ ಮತ್ತು ರಾಜ್ಯ ಸರ್ಕಾರಗಳನ್ನು ಆಗ್ರಹಿಸಲಾಗುವುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ಕರ್ನಾಟಕ ಪ್ರಗತಿಪರ ತ್ಯಾಜ್ಯ ಸಾಗಿಸುವ ವಾಹನ ಚಾಲಕರ ಹಾಗೂ ಸಹಾಯಕರ ಸಂಘ (ಎಐಸಿಸಿಟಿಯು)ದ ತಾಲೂಕು ಅಧ್ಯಕ್ಷ ಹುಸೇನಪ್ಪ, ಕಾರ್ಯದರ್ಶಿ ದುರುಗಪ್ಪ ಹಾಗೂ ಮುಖಂಡರಾದ ವೀರೇಶ, ನಾಗರಾಜ ಬೆಳಗುರ್ಕಿ, ಕೆಂಚಪ್ಪ, ಮಹ್ಮದ್ ಅಲಿ, ದಾನಪ್ಪ, ಮರಿಸ್ವಾಮಿ, ಅಮರೇಶ ಕರಿಯಪ್ಪ, ರಮೇಶ್, ಮೌಲಪಾಷ ಇನ್ನಿತರರು ಇದ್ದರು.