ಲೋಕಲ್ ನ್ಯೂಸ್: ಬಸವರಾಜ ಹಳ್ಳಿ
ನಮ್ಮ ಸಿಂಧನೂರು, ನವೆಂಬರ್ 3
ರಾಯಚೂರಿನಲ್ಲಿ ಇದೇ ಡಿಸೆಂಬರ್ 14 ಮತ್ತು 15 ರಂದು ಎರಡು ದಿನಗಳ ಕಾಲ 11ನೇ ಅಖಿಲ ಭಾರತ ದಲಿತ ಸಾಹಿತ್ಯ ಸಮ್ಮೇಳನವನ್ನು ಆಯೋಜಿಸಲಾಗಿದ್ದು, ಈ ಹಿನ್ನೆಲೆಯಲ್ಲಿ ಜಿಲ್ಲೆಯ ಕವಿಗಳ ಪ್ರಾತಿನಿಧಿಕ ಕವನ ಸಂಕಲನಕ್ಕೆ ಕವನಗಳನ್ನು ಆಹ್ವಾನಿಸಲಾಗಿದೆ ಎಂದು ಲಿಂಗಸೂಗೂರು ತಾಲೂಕು ದಲಿತ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಅಮರೇಶ ವೆಂಕಟಾಪೂರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಆಸಕ್ತ ಕವಿಗಳು, ಬರಹಗಾರರು ತಮ್ಮ ಒಂದು ಕವನ ಮತ್ತು ಇತ್ತೀಚಿನ ಭಾವಚಿತ್ರವನ್ನು ಈ ಕೆಳಗೆ ತಿಳಿಸಿದ ವಿಳಾಸಕ್ಕೆ ತಲುಪಿಸಬಹುದು. ತಾವು ದಲಿತ ಸಾಹಿತಿ, ಬಂಡಾಯ ಸಾಹಿತಿ, ದಲಿತ-ಬಂಡಾಯ ಸಾಹಿತ್ಯ ವಿಷಯ ವಸ್ತು ಒಳಗೊಂಡಿರುವ ಕಾವ್ಯಗಳನ್ನು ಕಳುಹಿಸಬಹುದು. ಅಲ್ಲದೇ ಬುದ್ಧ-ಬಸವ-ಅಂಬೇಡ್ಕರ ವಿಚಾರಧಾರೆಗಳ ಕುರಿತಾದ ಕವನಗಳನ್ನು ಕಳುಹಿಸಬಹುದು. ದಲಿತರ ಇಂದಿನ ಸ್ಥಿತಿಗತಿ, ಅವರು ಎದುರಿಸುತ್ತಿರುವ ಸಮಸ್ಯೆಗಳು ಮತ್ತು ಸವಾಲುಗಳನ್ನು ಕೂಡ ಹೊಂದಿರಬಹುದು. ತಾವು ಕಳುಹಿಸಿದ ಕವನಗಳನ್ನು ಪ್ರಕಟಿಸುವ ನಿರ್ಧಾರ ಅಂತಿಮವಾಗಿ ಸಂಪಾದಕ ಮಂಡಳಿಯದ್ದಾಗಿ ರುತ್ತದೆ. ತಮ್ಮ ಕವನಗಳನ್ನು ಕನ್ನಡ ನುಡಿ 4.0 ತಂತ್ರಾಂಶದಲ್ಲಿ ಮುದ್ರಿಸಿ ವಾಟ್ಸಪ್ ನಂಬರಿಗಾಗಲಿ ಅಥವಾ ಕೆಳಗಿನ ಈಮೇಲ್‌ಗಾಗಲಿ, ಕೆಳಗೆ ತಿಳಿಸಿದ ವಿಳಾಸಕ್ಕಾಗಲಿ ತಲುಪಿಸಬಹುದು. ಹೆಚ್ಚಿನ ಮಾಹಿತಿಗಾಗಿ ಸಂಪಾದಕರನ್ನು ಸಂಪರ್ಕಿಸಬಹುದು.
ಸಂಪಾದಕರು: ಡಾ.ಮಹಾಂತಗೌಡ ಪಾಟೀಲ, ಪ್ರಾಂಶುಪಾಲರು, ದೇವನಾಂಪ್ರಿಯ ಅಶೋಕ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಮಸ್ಕಿ ರಾಯಚೂರು. ಮೊಬೈಲ್-9480039671, Email-dsplingasugur@gmail.com
ಸಂಪಾದಕ ಮಂಡಳಿ
1) ಡಾ. ಮಲ್ಲಯ್ಯ ಅತ್ತನೂರು, ಸಹ ಪ್ರಾಧ್ಯಾಪಕರು, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ದೇವದುರ್ಗ, ಮೊಬೈಲ್- 9008569112
2) ಆಂಜನೇಯ ರಾಮತ್ನಾಳ, ಸಹಾಯಕ ಪ್ರಾಧ್ಯಾಪಕರು, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ತುರ್ವಿಹಾಳ, ಮೊಬೈಲ್- 9972181814
3) ನಿಂಗಪ್ಪ ತಿಡಿಗೋಳ, ಉಪನ್ಯಾಸಕರು, ಸರ್ಕಾರಿ ಪದವಿ ಪೂರ್ವ ಕಾಲೇಜು, ಮಸ್ಕಿ, ಮೊಬೈಲ್-7795544554