ಲೋಕಲ್ ನ್ಯೂಸ್ : ಬಸವರಾಜ ಹಳ್ಳಿ
ನಮ್ಮ ಸಿಂಧನೂರು, ಫೆಬ್ರವರಿ 02
ಕಲ್ಯಾಣ ಕರ್ನಾಟಕ ಆದ್ಯತೆಯ ಪತ್ರಾಂಕಿತ ವ್ಯವಸ್ಥಾಪಕರು ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅಧಿಕಾರಿಗಳ ಹುದ್ದೆಯ ಪರೀಕ್ಷೆಗಳು ದಿನಾಂಕ: 03.03.2025 ರಂದು ನಡೆಯಲಿದ್ದು, ಸಿದ್ಧತೆಯಲ್ಲಿ ತೊಡಗಿರುವ ಸ್ಪರ್ಧಾರ್ಥಿಗಳಿಗೆ 25 ದಿನಗಳ ಕ್ರಾಸ್ಕೋರ್ಸ್ ಅನ್ನು ಉಪನ್ಯಾಸಕರ ಗೆಳೆಯರ ಬಳಗ ಸಿಂಧನೂರು ವತಿಯಿಂದ ದಿನಾಂಕ: 03.02.2025 ರಿಂದ ಸಿಂಧನೂರು ನಗರದ ಎಲ್ಬಿಕೆ ಮತ್ತು ನೋಬೆಲ್ ಪದವಿ ಮಹಾವಿದ್ಯಾಲಯದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಪ್ರಧಾನ ಸಂಚಾಲಕರಾದ ಮಹಾದೇವ ಗೋನವಾರ ಮತ್ತು ಕೃಷ್ಣ ಗಾಂಧಿನಗರ ಅವರು ತಿಳಿಸಿದ್ದಾರೆ.
ಈ ಕುರಿತು ಭಾನುವಾರ ಪತ್ರಿಕಾ ಹೇಳಿಕೆ ನೀಡಿರುವ ಅವರು, ತರಬೇತಿಯಲ್ಲಿ ನುರಿತ ತರಬೇತಿದಾರರಾದ ರಮೇಶ ಮೂಡಬಾಳ, ಚಿದಾನಂದ ಪೊಲೀಸ್ ಪಾಟೀಲ್, ಬಸವರಾಜ ದೇವಿಪುರ, ಕಬೀರ್ ಮತ್ತು ಡಾ.ನಾಗರಾಜ ಗೊಣ್ಣಿಗನೂರು ಹಾಗೂ ಹಬೀಬ್ ಅವರು ಸಾಮಾನ್ಯ ಜ್ಞಾನ ಮೊದಲ ಪತ್ರಿಕೆಯ ವಿಷಯವನ್ನು ಬೋಧಿಸಲಿದ್ದಾರೆ.
ನಿರ್ದಿಷ್ಟ ಪತ್ರಿಕೆಯನ್ನು ಡಾ.ಹುಸೇನಪ್ಪ ಅಮರಾಪುರ, ಡಾ.ಅರುಣಕುಮಾರ ಭೇರಿಗಿ, ರಾಮಣ್ಣ ಹಿರೇಭೇರಿಗಿ, ಡಾ.ನಾಗರಾಜ ಗೊಣ್ಣಿಗನೂರು, ಬಸವರಾಜ ಎಲ್.ಚಿಗರಿ, ನಬಿರಸೂಲ್ ಮೊದಲಾದವರು ಬೋಧನೆ ಮಾಡಲಿದ್ದಾರೆ. ಹೀಗಾಗಿ ಈ ಕ್ರಾಸ್ಕೋರ್ಸ್ನ ಸದುಪಯೋಗವನ್ನು ಪಡೆದುಕೊಳ್ಳುವಂತೆ ಮನವಿ ಅವರು ಮನವಿ ಮಾಡಿದ್ದಾರೆ.
ನೋಂದಣಿ ಹೇಗೆ ?
ಸ್ಪರ್ಧಾರ್ಥಿಗಳು ನೋಂದಣಿಯನ್ನು ಅಂದೇ ಸ್ಥಳದಲ್ಲಿಯೇ ಮಾಡಿಸಬಹುದು ಅಥವಾ ಈ ಕೆಳಗಿನ ಮೊಬೈಲ್ ಸಂಖ್ಯೆಗಳಿಗೆ 500 ರೂಪಾಯಿ ಫೋನ್ಪೇ ಅಥವಾ ಗೂಗಲ್ ಪೇ ಮಾಡುವ ಮೂಲಕ ನೋಂದಾಯಿಸಿಕೊಳ್ಳಬಹುದು. ಹೆಚ್ಚಿನ ಮಾಹಿತಿಗೆ 84948 49306, 98800 32998 ಸಂಪರ್ಕಿಸಲು ಅವರು ತಿಳಿಸಿದ್ದಾರೆ.