ನಮ್ಮ ಸಿಂಧನೂರು, ಎಪ್ರಿಲ್ 27
ಸಿಪಿಐ(ಎಂಎಲ್) ರೆಡ್ಸ್ಟಾರ್ ಕರ್ನಾಟಕವು, ಕೊಪ್ಪಳ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ‘ಸಿಡಿದೇಳು ಕರ್ನಾಟಕ’ ಪ್ರಚಾರಾಂದೋಲನ ಆರಂಭಿಸಿದ್ದು, ಫ್ಯಾಸಿಸ್ಟ್ ಆರ್ಎಸ್ಎಸ್ ಬಿಜೆಪಿಯನ್ನು ಸೋಲಿಸಿ ಎಂದು ಸಾರ್ವಜನಿಕರಿಗೆ ಕರೆ ನೀಡಿದೆ. “ಫ್ಯಾಸಿಸ್ಟ್ ಆರ್ಎಸ್ಎಸ್ ಬಿಜೆಪಿಯನ್ನು ಸೋಲಿಸಿ ! ಏಕೆಂದರೆ ? ಸಂವಿಧಾನ ವಿರುದ್ಧ-ಮನುಸ್ಮೃತಿ !, ಇಂಡಿಯಾದ ವಿರುದ್ಧ ಹಿಂದೂ ರಾಷ್ಟ್ರ !, ಅಂಬೇಡ್ಕರ್ ವಿರುದ್ಧ-ಸಾವರ್ಕರ್ !, ಪ್ರಜಾಪ್ರಭುತ್ವದ ವಿರುದ್ಧ ಫ್ಯಾಸಿಸಂ !, ಶ್ರಮಶಕ್ತಿ ವಿರುದ್ಧ -ಬಂಡವಾಳ !” ಎಂಬ ಬರಹವುಳ್ಳ ಪೋಸ್ಟರ್ ಅನ್ನು ಪಕ್ಷದ ಮುಖಂಡರಾದ ಎಂ.ಗಂಗಾಧರ ಅವರು ಶನಿವಾರ ಬಿಡುಗಡೆ ಮಾಡಿದ್ದಾರೆ. ಸಂವಿಧಾನ, ಪ್ರಜಾಪ್ರಭುತ್ವ, ಜಾತ್ಯತೀತತೆ ಹಾಗೂ ಮೀಸಲಾತಿಯನ್ನು ರಕ್ಷಿಸಲು ಮತದಾರರು ಬಿಜೆಪಿಯನ್ನು ಸೋಲಿಸಬೇಕು ಎಂದು ಅವರು ಮತದಾರರಲ್ಲಿ ಮನವಿ ಮಾಡಿದ್ದಾರೆ.