ಸಿಂಧನೂರು : ಸಿಪಿಐ(ಎಂಎಲ್) ರೆಡ್‌ಸ್ಟಾರ್‌ನಿಂದ ಫ್ಯಾಸಿಸ್ಟ್ ಆರ್‌ಎಸ್‌ಎಸ್ ಬಿಜೆಪಿಯನ್ನು ಸೋಲಿಸಿ, ಸಂವಿಧಾನ, ಪ್ರಜಾಪ್ರಭುತ್ವ, ಜಾತ್ಯತೀತತೆ, ಮೀಸಲಾತಿ ರಕ್ಷಿಸಿ ಆಂದೋಲನ

Spread the love

ನಮ್ಮ ಸಿಂಧನೂರು, ಎಪ್ರಿಲ್ 30
ನಗರದಲ್ಲಿ ಸಿಪಿಐ(ಎಂಎಲ್) ರೆಡ್‌ಸ್ಟಾರ್‌ನಿಂದ ಫ್ಯಾಸಿಸ್ಟ್ ಆರ್‌ಎಸ್‌ಎಸ್ ಬಿಜೆಪಿಯನ್ನು ಸೋಲಿಸಿ, ಸಂವಿಧಾನ, ಪ್ರಜಾಪ್ರಭುತ್ವ, ಜಾತ್ಯತೀತತೆ ಹಾಗೂ ಮೀಸಲಾತಿ ರಕ್ಷಿಸಿ, ಮತದಾರರ ಜಾಗೃತಿ ಸಭೆಯನ್ನು ಹಮ್ಮಿಕೊಳ್ಳಲಾಯಿತು. ಪಕ್ಷದ ಮುಖಂಡರಾದ ಎಂ.ಗAಗಾಧರ ಮಾತನಾಡಿ, ಕೊಪ್ಪಳ ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಸಿಪಿಐ(ಎಂಎಲ್) ರೆಡ್‌ಸ್ಟಾರ್ ಕರ್ನಾಟಕವು, ‘ಸಿಡಿದೇಳು ಕರ್ನಾಟಕ’ ಪ್ರಚಾರಾಂದೋಲನ ಆರಂಭಿಸಿದ್ದು, ಫ್ಯಾಸಿಸ್ಟ್ ಆರ್‌ಎಸ್‌ಎಸ್ ಬಿಜೆಪಿಯನ್ನು ಸೋಲಿಸಿ ! ಏಕೆಂದರೆ ? ಸಂವಿಧಾನ ವಿರುದ್ಧ-ಮನುಸ್ಮೃತಿ !, ಇಂಡಿಯಾದ ವಿರುದ್ಧ ಹಿಂದೂ ರಾಷ್ಟ್ರ !, ಅಂಬೇಡ್ಕರ್ ವಿರುದ್ಧ-ಸಾವರ್ಕರ್ !, ಪ್ರಜಾಪ್ರಭುತ್ವದ ವಿರುದ್ಧ ಫ್ಯಾಸಿಸಂ ! ಹಾಗೂ ಶ್ರಮಶಕ್ತಿ ವಿರುದ್ಧ-ಬಂಡವಾಳವನ್ನು ಹೇರುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಆದಿ ನಗನೂರು ಸೇರಿದಂತೆ ಪಕ್ಷದ ಕಾರ್ಯಕರ್ತರು, ಮುಖಂಡರು ಇದ್ದರು.

Namma Sindhanuru Click For Breaking & Local News

Spread the love

Leave a Reply

Your email address will not be published. Required fields are marked *