ನಮ್ಮ ಸಿಂಧನೂರು, ಮಾರ್ಚ್ 12
ನಗರದ ಮಸ್ಕಿ ಮಾರ್ಗದ ರಸ್ತೆಯಲ್ಲಿರುವ ಅರಿಹಂತ್ ರೈಸ್ಮಿಲ್ ಬಳಿ ರಾಷ್ಟ್ರೀಯ ಹೆದ್ದಾರಿಯ ಸಂಪರ್ಕ ಸೇತುವೆ ತಡೆಗೋಡೆ ಕುಸಿದು ಬಿದ್ದು ಹಲವು ದಿನಗಳು ಕಳೆದರೂ ಸಂಬಂಧಿಸಿದ ಇಲಾಖೆಯವರು ಮಾತ್ರ ಇತ್ತ ಕಣ್ಣು ಹಾಯಿಸಿಲ್ಲ. ಈ ಮಾರ್ಗದಲ್ಲಿ ಅಪ್ಪಿತಪ್ಪಿ ಸ್ವಲ್ಪ ಯಾಮಾರಿದರೆ ಕಂದಕಕ್ಕೆ ವಾಹನ ಉರುಳುವುದು ಗ್ಯಾರಂಟಿ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ದಿನವೂ ಈ ಮಾರ್ಗದಲ್ಲಿ ಸಾವಿರಾರು ವಾಹನಗಳು ಸಂಚರಿಸುತ್ತವೆ, ಅಪ್ಪಿತಪ್ಪಿ ಆಯತಪ್ಪಿ ಬಿದ್ದು ಪ್ರಾಣಾಪಾಯವಾದರೆ ಯಾರು ಹೊಣೆ ? ಎಂದು ಈ ಮಾರ್ಗದಲ್ಲಿ ದಿನವೂ ಸಂಚರಿಸುವ ವಾಹನ ಸವಾರರು ಪ್ರಶ್ನಿಸುತ್ತಾರೆ. ತಡೆಗೆ ನಿರ್ಮಿಸಿ ವಾಹನ ಸವಾರರ ಸುರಕ್ಷತೆ ಕಾಪಾಡಬೇಕಾದ ಇಲಾಖೆಯವರು ಬೇಜವಾಬ್ದಾರಿ ವಹಿಸಿದ್ದು, ಇದರಿಂದಾಗಿ ಈ ಮಾರ್ಗದಲ್ಲಿ ವಾಹನ ಚಲಾಯಿಸಲು ಜೀವ ಎದುರಿಸುವಂತಾಗಿದೆ ಎಂದು ಸವಾರರು ದೂರುತ್ತಾರೆ.