ಸಿಂಧನೂರು: ಬಿಜೆಪಿ ಅಭ್ಯರ್ಥಿ ಡಾ.ಬಸವರಾಜ ಕ್ಯಾವಟರ್ ಟೆಂಪಲ್ ರನ್ !

Spread the love

ಸ್ಪೆಷಲ್‌ ನ್ಯೂಸ್‌ : ಬಸವರಾಜ ಹಳ್ಳಿ
ನಮ್ಮ ಸಿಂಧನೂರು, ಮಾರ್ಚ್ 19
ಕೊಪ್ಪಳ ಲೋಕಸಭೆಗೆ ಮೇ 7ರಂದು ಎರಡನೇ ಹಂತದಲ್ಲಿ ಮತದಾನ ನಡೆಯಲಿದ್ದು, ಈಗಾಗಲೇ ಟಿಕೆಟ್ ಘೋಷಣೆಯಾಗಿರುವ ಬೆನ್ನಲ್ಲೇ ಬಿಜೆಪಿ ಅಭ್ಯರ್ಥಿ ಡಾ.ಬಸವರಾಜ ಎಸ್.ಕ್ಯಾವಟರ್ ಅವರು ಚುನಾವಣಾ ಅಖಾಡಕ್ಕಿಳಿದಿದ್ದು, ವಿವಿಧ ಮಠಾಧೀಶರು ಹಾಗೂ ದೇವಸ್ಥಾನಗಳಿಗೆ ಭೇಟಿ ನೀಡುವ ಮೂಲಕ ಆಶೀರ್ವಾದದ ಮೊರೆ ಹೋಗಿದ್ದಾರೆ. ಮುದೇನೂರ ಗ್ರಾಮದ ಶ್ರೀ ವರದ ಉಮಾಚಂದ್ರಮೌಳೇಶ್ವರ ದೇವಸ್ಥಾನ, ಕುಷ್ಟಗಿ ತಾಲೂಕಿನ ಎಂ.ಗುಡದೂರು ಗ್ರಾಮದ ಶ್ರೀಮಠ, ಕುಷ್ಟಗಿ ತಾಲೂಕಿನ ನಿಡಶೇಸಿ ಮಠದ ಗುರು ಚನ್ನಬಸವೇಶ್ವರ ಮಠ, ಕುಷ್ಟಗಿ ತಾಲೂಕಿನ ಚಳಗೇರಿ ಮಠ, ಕುಷ್ಟಗಿ ಪಟ್ಟಣದ ಮದ್ದಾನೇಶ್ವರ ಮಠಗಳಿಗೆ ಅವರು ಕಾರ್ಯಕರ್ತರು, ಬೆಂಬಲಿಗರು ಹಾಗೂ ಹಿತೈಷಿಗಳೊಂದಿಗೆ ಭೇಟಿ ನೀಡಿದರು. ಅಲ್ಲದೇ ಕುಷ್ಟಗಿ ತಾಲೂಕಿನ ನವಲಹಳ್ಳಿಯಲ್ಲಿರುವ ಶರಣಬಸವೇಶ್ವರರ ಜಾತ್ರಾ ಮಹೋತ್ಸವದ ಹಿನ್ನೆಲೆಯಲ್ಲಿ ಡಾ.ಬಸವರಾಜ ಕ್ಯಾವಟರ್ ವಿಶೇಷ ಪೂಜೆ ಸಲ್ಲಿಸಿದರು.

Namma Sindhanuru Click For Breaking & Local News

ಒಂದೆಡೆ ಹಾಲಿ ಎಂಪಿ ಮುನಿಸು, ಇನ್ನೊಂದೆಡೆ ಬಿರುಸಿನ ಸುತ್ತಾಟ
ಹೈಕಮಾಂಡ್ ಟಿಕೆಟ್ ಘೋಷಿಸಿದ ಬೆನ್ನಲ್ಲೇ ಕಾಲಿಗೆ ಚಕ್ರಕಟ್ಟಿಕೊಂಡವರಂತೆ ಓಡಾಟ ಶುರು ಮಾಡಿರುವ ಬಿಜೆಪಿ ಅಭ್ಯರ್ಥಿ ಡಾ.ಬಸವರಾಜ.ಎಸ್ ಕ್ಯಾವಟರ್ ಅವರು, ಹಿರಿಯ ಬಿಜೆಪಿ ನಾಯಕರು, ಮುಖಂಡರು ಹಾಗೂ ಪಕ್ಷದ ಹೈಕಮಾಂಡ್‌ನ ಹಲವರನ್ನು ಭೇಟಿ ಮಾಡುವ ಮೂಲಕ ವಿಶ್ವಾಸ ಗಳಿಸಲು ಮುಂದಾಗಿರುವುದು ಈಗ ಗುಟ್ಟಾಗಿ ಉಳಿದಿಲ್ಲ. ಅಲ್ಲದೇ ಸಮುದಾಯದ ಹಿರಿಯ ನಾಯಕರು ಹಾಗೂ ಮುಖಂಡರನ್ನು ಅವರ ನಿವಾಸಕ್ಕೆ ತೆರಳಿ ಉಭಯಕುಶಲೋಪರಿ ವಿಚಾರಿಸುತ್ತಿರುವುದು ನಡೆದಿದೆ. ಮತದಾನಕ್ಕೆ ಇನ್ನು 49 ದಿನ ಬಾಕಿ ಉಳಿದಿರುವಂತೆಯೇ ಬಿಜೆಪಿ ಅಭ್ಯರ್ಥಿ ಆಕ್ಟೀವ್ ಆಗಿದ್ದು, ಕಾರ್ಯಕರ್ತರು ಸೇರಿದಂತೆ ಬೆಂಬಲಿಗರೊಂದಿಗೆ ಬೆಳಿಗ್ಗೆನಿಂದ ಸಂಜೆಯವರೆಗೂ ಕ್ಷೇತ್ರ ವ್ಯಾಪ್ತಿಯಲ್ಲಿ ಸುತ್ತಾಟ ನಡೆಸುತ್ತಿದ್ದಾರೆ. ಬಿಜೆಪಿ ಅಭ್ಯರ್ಥಿಯ ಘೋಷಣೆಯಾಗಿದೆ, ಆದರೆ ಇಲ್ಲಿಯವರೆಗೂ ಅಧಿಕೃತವಾಗಿ ಕಾಂಗ್ರೆಸ್ ಅಭ್ಯರ್ಥಿಯನ್ನು ಘೋಷಿಸದಿರುವುದು ಕುತೂಹಲ ಮೂಡಿಸಿದೆ.

Namma Sindhanuru Click For Breaking & Local News

Spread the love

Leave a Reply

Your email address will not be published. Required fields are marked *