ಲೋಕಲ್ ನ್ಯೂಸ್ : ಬಸವರಾಜ ಹಳ್ಳಿ
ನಮ್ಮ ಸಿಂಧನೂರು. ಜನವರಿ 18
ನೋಬಲ್ ಪ್ರಕಾಶನದ ವತಿಯಿಂದ ನಗರದ ಕುಷ್ಟಗಿ ಮಾರ್ಗದ ರಸ್ತೆಯಲ್ಲಿರುವ ಸರಕಾರಿ ಪದವಿ ಮಹಾವಿದ್ಯಾಲಯದ ಎಜುಸ್ಯಾಟ್ ಹಾಲ್ನಲ್ಲಿ ಜ.19ರಂದು ಬೆಳಿಗ್ಗೆ 10 ಗಂಟೆಗೆ ಡಾ.ಮಲ್ಲಿಕಾರ್ಜುನ ಕಮತಗಿ ಅವರ ದ್ವಿತೀಯ ಕೃತಿ ಬೆತ್ತಲೆ ಹರಕೆ ಲೋಕಾರ್ಪಣೆ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.
ಈ ಕುರಿತು ಶನಿವಾರ ಜಂಟಿ ಹೇಳಿಕೆ ನೀಡಿರುವ ನೋಬೆಲ್ ಕಾಲೇಜು ಅಧ್ಯಕ್ಷ ಪರಶುರಾಮ ಮಲ್ಲಾಪುರ ಹಾಗೂ ಉಪನ್ಯಾಸಕ ಡಾ.ಅರುಣಕುಮಾರ ಬೇರಿಗಿ ಅವರು, ಕಾರ್ಯಕ್ರಮವನ್ನು ಶಾಸಕರಾದ ಹಂಪನಗೌಡ ಬಾದರ್ಲಿಯವರು ಉದ್ಘಾಟಿಸುವರು. ವಿಜಯಪುರದ ವಿಶ್ರಾಂತ ಪ್ರಾಧ್ಯಾಪಕ ಪ್ರೊ.ಸಿದ್ದಣ್ಣ ಪಿ.ಬೀಡಗೊಂಡ ಕೃತಿ ಲೋಕಾರ್ಪಣೆಗೊಳಿಸುವರು. ಸರಕಾರಿ ಪದವಿ ಮಹಾವಿದ್ಯಾಲಯದ ಪ್ರಾಂಶುಪಾಲ ಶಿವಯ್ಯ ಎಂ. ಗೌರವ ಉಪಸ್ಥಿತಿ ವಹಿಸುವರು. ಕಾರಟಗಿಯ ಸಿಎಂಎನ್ ಪದವಿ ಪೂರ್ವ ಕಾಲೇಜ್ನ ಉಪನ್ಯಾಸಕ ಹನುಮಂತಪ್ಪ ಚಂದಲಾಪುರ ಕೃತಿ ಪರಿಚಯ ಮಾಡಿಕೊಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಸಿಂಧನೂರಿನ ಸಹಕಾರ ಸಂಘಗಳ ಸಹಾಯಕ ನಿಬಂಧಕ ಶೇಖ್ ಹುಸೇನ್, ಸಿಂಧನೂರಿನ ಸರಕಾರಿ ಪ.ಪೂ. ಕಾಲೇಜು ಪ್ರಾಂಶುಪಾಲ ಡಾ.ಎಸ್.ಶಿವರಾಜ, ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಡಿ.ಹೆಚ್.ಕಂಬಳಿ, ತುರ್ವಿಹಾಳನ ಸರಕಾರಿ ಪದವಿ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ.ಕೆ.ಖಾದರ್ ಭಾಷಾ, ದಲಿತ ಸಾಹಿತ್ಯ ಪರಿಷತ್ತು ಅಧ್ಯಕ್ಷ ಡಾ.ಹುಸೇನಪ್ಪ ಅಮರಾಪೂರ, ಕ.ಸಾ.ಪ ಸುರಪುರ ತಾಲೂಕು ಅಧ್ಯಕ್ಷ ಶರಣಬಸಪ್ಪ ಯಾಳವಾರ, ಸಿಂಧನೂರಿನ ನಿ.ಅಂ.ಚೌ.ನೌ.ಸಂಘದ ಅಧ್ಯಕ್ಷ ಮಂಜುನಾಥ ಸೋಮಲಾಪುರ, ಹೊಳೆಪ್ಪ ಕಮತಗಿ, ಕೃತಿ ದಾನಿಗಳಾದ ಕೋಳಬಾಳನ ವಿ.ಪ್ರಾ.ಗ್ರಾ.ಕೃ.ಸ.ಸಂನ ಮುಖ್ಯ ಕಾರ್ಯನಿರ್ವಾಹಕ ಕರಿಬಸವ ಎಸ್.ಗಿರಡ್ಡಿ ಉಪಸ್ಥಿತರಿರುವರು. ಉಪನ್ಯಾಸಕ ಡಾ.ಶರೀಫ್ ಹಸಮಕಲ್ ಅವರು ಪ್ರಾಸ್ತಾವಿಕವಾಗಿ ಮಾತನಾಡುವರು ಎಂದು ಅವರು ತಿಳಿಸಿದ್ದಾರೆ.