ಸಿಂಧನೂರು: ಟ್ರಯಲ್ ಮುಗಿಸಿದ ನಮ್ಮೂರಿನ ಚುಕುಬುಕು..

ನಮ್ಮ ಸಿಂಧನೂರು, ಫೆಬ್ರವರಿ 6ಕೊಪ್ಪಳ ಜಿಲ್ಲೆಯ ಕಾರಟಗಿ ರೈಲ್ವೆ ನಿಲ್ದಾಣದಿಂದ ಸಿಂಧನೂರು ನಗರದ ರೈಲ್ವೆ ನಿಲ್ದಾಣದವರೆಗೆ ಪರೀಕ್ಷಾರ್ಥ ರೈಲ್ವೆ ಸಂಚಾರ ಯಶಸ್ವಿಯಾಗಿದ್ದು, ಜನರ ಬಹು ದಿನದ ಕನಸು ನನಸಾಗುವುದಕ್ಕೆ ದಿನಗಣನೆ ಶುರುವಾಗಿದೆ.ಕಾರಟಗಿಯಿಂದ ಪರೀಕ್ಷಾರ್ಥ ರೈಲು ಸಂಚಾರ ಆರಂಭಿಸಲಾಗಿತ್ತು. ಅಂದಾಜು 120 ಕಿ.ಮೀ…

ಹಸಮಕಲ್: ಮಹ್ಮದ್‌ ಖಾನ್‌ಸಾಹೇಬ್‌ ದರ್ಗಾ ಉರುಸು

ನಮ್ಮ ಸಿಂಧನೂರು, ಫೆಬ್ರವರಿ 6 ಮಸ್ಕಿ ತಾಲೂಕಿನ ಹಸಮಕಲ್‌ ಗ್ರಾಮದಲ್ಲಿ ಹಜರತ್‌ ಮಹ್ಮದ್‌ ಷರೀಫ್‌ ಖಾನ್‌ ಸಾಹೇಬ್‌ ದರ್ಗಾ ಉರುಸು ಮಂಗಳವಾರ ವಿಜೃಂಭಣೆಯಿಂದ ಜರುಗಿತು. ಉರುಸು ನಿಮಿತ್ತ ಬೆಳಗ್ಗೆಯಿಂದಲೇ ನಾನಾ ಧಾರ್ಮಿಕ ವಿಧಿ-ವಿಧಾನಗಳು ಜರುಗಿದವು. ಸಂತೆಕೆಲ್ಲೂರಿನಿಂದ ಆಗಮಿಸಿದ ಗಂಧವನ್ನು ಗ್ರಾಮಸ್ಥರು ಸೇರಿದಂತೆ…

ಸಿಎಂ ಸಿದ್ದರಾಮಯ್ಯರಿಂದ ಎಂಪಿ ಕರಡಿ ಸಂಗಣ್ಣರಿಗೆ ಪತ್ರದೆಹಲಿ ಧರಣಿ ಸತ್ಯಾಗ್ರಹದಲ್ಲಿ ಪಾಲ್ಗೊಳ್ಳುವಂತೆ ವಿನಂತಿ

ನಮ್ಮ ಸಿಂಧನೂರು, ಫೆಬ್ರವರಿ 6ಕರ್ನಾಟಕಕ್ಕೆ ತೆರಿಗೆ ಪಾಲಿನ ಹಂಚಿಕೆಯಲ್ಲಿ ಕೇಂದ್ರ ಸರ್ಕಾರದಿಂದ ಅನ್ಯಾಯವಾಗುತ್ತಿದ್ದು, ಇದನ್ನು ಖಂಡಿಸಿ ದೆಹಲಿಯ ಜಂತರ್ ಮಂತರ್‌ನಲ್ಲಿ ಫೆ.7, 2024ರಂದು ಹಮ್ಮಿಕೊಂಡಿರುವ ಧರಣಿ ಸತ್ಯಾಗ್ರಹದಲ್ಲಿ ಭಾಗವಹಿಸಬೇಕೆಂದು ಕೊಪ್ಪಳ ಸಂಸದ ಸಂಗಣ್ಣ ಕರಡಿ ಅವರಿಗೆ ಸಿಎಂ ಸಿದ್ದರಾಮಯ್ಯ ಜನರ ಪರವಾಗಿ…

ಎಸ್.ಎನ್.ಕ್ಯಾಂಪ್: ಸರ್ಕಾರಿ ಶಾಲೆಯಲ್ಲಿ ‘ಹಳ್ಳಿ ಸೊಬಗು’ ಗ್ರಾಮೀಣ ಉಡುಗೆಯಲ್ಲಿ ಮಿಂಚಿದ ಮಕ್ಕಳು

ನಮ್ಮ ಸಿಂಧನೂರು, ಫೆಬ್ರವರಿ 5ವಿದ್ಯಾರ್ಥಿನಿಯರು ಸೀರೆ ತೊಟ್ಟು ಮಿಂಚಿದರೆ, ವಿದ್ಯಾರ್ಥಿಗಳು ಪಂಚೆ, ಲುಂಗಿ, ತಲೆಗೆ ರುಮಾಲು ಧರಿಸಿ ಗ್ರಾಮೀಣ ಸೊಗಡಿನಲ್ಲಿ ಗಮನ ಸೆಳೆದರು. ತಾಲೂಕಿನ ಎಸ್.ಎನ್.ಕ್ಯಾಂಪ್ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ಹಮ್ಮಿಕೊಂಡಿದ್ದ ‘ಹಳ್ಳಿ ಸೊಬಗು’ ವಿಶೇಷ ಕಾರ್ಯಕ್ರಮದಿಂದಾಗಿ ಶಾಲೆಯಲ್ಲಿ…

ಸಿಂಧನೂರು: ಬಿಜೆಪಿಯಿಂದ ಗ್ರಾಮ ಚಲೋ ಅಭಿಯಾನ

ಸಿಂಧನೂರು. ಫೆಬ್ರವರಿ 05ನಗರದ ಕನಕದಾಸ ಕಲ್ಯಾಣ ಮಂಟಪದಲ್ಲಿ ಸೋಮವಾರ ಭಾರತೀಯ ಜನತಾ ಪಾರ್ಟಿಯಿಂದ ಸಿಂಧನೂರು ವಿಧಾನಸಭಾ ಕ್ಷೇತ್ರದ ಗ್ರಾಮ ಚಲೋ ಅಭಿಯಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಮುಂಬರುವ ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಗ್ರಾಮ ಮಟ್ಟದಿಂದ ಪಕ್ಷವನ್ನು ಸಂಘಟಿಸುವ ಹಿನ್ನೆಲೆಯಲ್ಲಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ…

ಮಸ್ಕಿ: ಪೇಂಟ್, ಹಾರ್ಡ್ವೇರ್ ಅಂಗಡಿಗೆ ಬೆಂಕಿ, ಸಾಮಗ್ರಿ ಆಹುತಿ

ನಮ್ಮ ಸಿಂಧನೂರು, ಫೆಬ್ರವರಿ 02ಮಸ್ಕಿ ಪಟ್ಟಣದ ಗಚ್ಚಿನಮಠಕ್ಕೆ ಹೊಂದಿಕೊಂಡ ಕಾಂಪ್ಲೆಕ್ಸ್‌ನಲ್ಲಿರುವ ಪೇಂಟ್ ಹಾಗೂ ಹಾರ್ಡ್‌ ವೇರ್ ಅಂಗಡಿಗೆ ಬೆಂಕಿ ಆಕಸ್ಮಿಕವಾಗಿ ತಗುಲಿ ಅದರಲ್ಲಿದ್ದ ಅಪಾರ ಸಾಮಗ್ರಿಗಳು ಸುಟ್ಟು ಕರಕಲಾದ ಘಟನೆ ಗುರುವಾರ ರಾತ್ರಿ ನಡೆದಿದೆ. ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡಿದ್ದು, ನೋಡು ನೋಡುವಷ್ಟರಲ್ಲೇ…

‘ಬರ ಪರಿಹಾರದ ಹಣ ರೈತರ ಖಾತೆಗಳಿಗೆ ಜಮಾ ಮಾಡಿ’ ಕೆಆರ್‌ಎಸ್ ಪಕ್ಷದ ನಿರುಪಾದಿ.ಕೆ ಗೋಮರ್ಸಿ ಸಿಎಂಗೆ ಒತ್ತಾಯ

ನಮ್ಮ ಸಿಂಧನೂರು, ಫೆಬ್ರವರಿ 02ರಾಜ್ಯ ಸರ್ಕಾರ 161 ತಾಲೂಕುಗಳನ್ನು ಬರಗಾಲ ಪೀಡಿತ ಪ್ರದೇಶಗಳೆಂದು ಘೋಷಣೆ ಮಾಡಿ 5 ತಿಂಗಳು ಕಳೆದರೂ ಇಲ್ಲಿಯವರೆಗೂ ಪರಿಹಾರದ ಹಣ ರೈತರ ಖಾತೆಗೆ ಜಮಾ ಮಾಡದೇ ನಿರ್ಲಕ್ಷಿಸಲಾಗಿದೆ. ಈ ವಿಚಾರದಲ್ಲಿ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಆರೋಪ-ಪ್ರತ್ಯಾರೋಪ…

ಕರ್ನಾಟಕ ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ಅಧ್ಯಕ್ಷರಾಗಿ ಮಸ್ಕಿ ಶಾಸಕ ಬಸವನಗೌಡ ತುರುವಿಹಾಳ ಅಧಿಕಾರ ಸ್ವೀಕಾರ

ನಮ್ಮ ಸಿಂಧನೂರು, ಫೆಬ್ರವರಿ 02ಮಸ್ಕಿ ತಾಲೂಕಿನ ಶಾಸಕರಾದ ಆರ್.ಬಸವನಗೌಡ ತುರ್ವಿಹಾಳ ಅವರು ಬೆಂಗಳೂರಿನಲ್ಲಿ ಕರ್ನಾಟಕ ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿಯ ನೂತನ ಅಧ್ಯಕ್ಷರಾಗಿ ಶುಕ್ರವಾರ (ಫೆ.2, 2024) ಅಧಿಕಾರ ಸ್ವೀಕರಿಸಿದರು. ನೂತನ ಅಧ್ಯಕ್ಷರಿಗೆ ಸಿಂಧನೂರಿನ ಶಾಸಕ ಹಂಪನಗೌಡ ಬಾದರ್ಲಿ, ರಾಯಚೂರು…

ಕೊಲೆ ಪ್ರಯತ್ನ ಮಾಡಿದ 11 ಆರೋಪಿಗಳಿಗೆ 3 ವರ್ಷ ಕಾರಾಗೃಹ ಶಿಕ್ಷೆ ಹಾಗೂ ತಲಾ 5,800 ರೂ.ದಂಡ ವಿಧಿಸಿ ಸಿಂಧನೂರಿನ 3ನೇ ಜಿಲ್ಲಾ ಹೆಚ್ಚುವರಿ ನ್ಯಾಯಾಧೀಶರ ಆದೇಶ.

ನಮ್ಮ ಸಿಂಧನೂರು, ಫೆಬ್ರವರಿ 02ಕೊಲೆಗೆ ಪ್ರಯತ್ನ ಮಾಡಿದ 11 ಆರೋಪಿಗಳಿಗೆ 3 ವರ್ಷ ಕಾರಾಗೃಹ ಶಿಕ್ಷೆ ಹಾಗೂ ತಲಾ 5,800 ರೂಪಾಯಿ ದಂಡ ವಿಧಿಸಿ ಮಾನ್ಯ ನ್ಯಾಯಾಧೀಶರಾದ ಬಿ.ಬಿ.ಜಕಾತಿ 3ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ರಾಯಚೂರು, ಪೀಠಾಸೀನ ಸಿಂಧನೂರು…

‘ಕೇಂದ್ರ ರಾಯಚೂರಿಗೆ ಏಮ್ಸ್ ಮಂಜೂರು ಮಾಡಲಿ’ ಸಿಎಂಗೆ ರವಿ ಭೋಸರಾಜು ಮನವಿ

ನಮ್ಮ ಸಿಂಧನೂರು, ಜನವರಿ 29ಕಲ್ಯಾಣ ಕರ್ನಾಟಕ ಭಾಗದ ರಾಯಚೂರು ಜಿಲ್ಲೆಗೆ 2024-25ನೇ ಸಾಲಿನ ಕೇಂದ್ರ ಬಜೆಟ್‌ನಲ್ಲಿ ಏಮ್ಸ್ ಮಂಜೂರು ಮಾಡಲು, ಕೇಂದ್ರದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಪತ್ರ ಬರೆದು ಗಮನ ಸೆಳೆಯುವಂತೆ ಒತ್ತಾಯಿಸಿ, ಕಾಂಗ್ರೆಸ್ ಯುವ ಮುಖಂಡ ರವಿ…