ಕೊಪ್ಪಳ ಲೋಕಸಭೆ ಹೊಸ ಲೆಕ್ಕಾಚಾರ: ಸಿಎಂ ಭೇಟಿ ಮಾಡಿದ ಜನಾರ್ಧನ ರೆಡ್ಡಿ !

ರಾಜಕೀಯ ವಿಶ್ಲೇಷಣೆ: ಬಸವರಾಜ ಹಳ್ಳಿನಮ್ಮ ಸಿಂಧನೂರು, ಫೆಬ್ರವರಿ 27ಲೋಕಸಭೆ ಚುನಾವಣೆಯ ಕಾವು ದಿನದಿಂದ ದಿನಕ್ಕೆ ರಂಗೇರುತ್ತಿದೆ, ಈ ನಡುವೆ ಗಂಗಾವತಿ ವಿಧಾನಸಭಾ ಕ್ಷೇತ್ರದ ಎಂಎಲ್‌ಎ ಹಾಗೂ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಸಂಸ್ಥಾಪಕ ಅಧ್ಯಕ್ಷ ಗಾಲಿ ಜನಾರ್ಧನ ರೆಡ್ಡಿ, ಸಿಎಂ ಸಿದ್ದರಾಮಯ್ಯ…

ಕೊಪ್ಪಳ ಲೋಕಸಭಾ ಕ್ಷೇತ್ರ: ಸಂಗಣ್ಣನವರಿಗೆ ಸಿಗುತ್ತಾ ಟಿಕೆಟ್ ? ಕೈ ಪಾಳಯದ ಹುದ್ದರಿ ಯಾರು ?

ರಾಜಕೀಯ ವಿಶ್ಲೇಷಣೆ: ಬಸವರಾಜ ಹಳ್ಳಿ, ಹಸಮಕಲ್‌ ನಮ್ಮ ಸಿಂಧನೂರು, ಫೆಬ್ರವರಿ 26ಕಾಂಗ್ರೆಸ್‌ನ ಭದ್ರಕೋಟೆಯಾಗಿದ್ದ ಕೊಪ್ಪಳ ಲೋಕಸಭಾ ಕ್ಷೇತ್ರಕ್ಕೆ ಲಗ್ಗೆಹಾಕಿ ಕಳೆದ 3 ಅವಧಿಯಲ್ಲಿ ಅಧಿಕಾರ ಚುಕ್ಕಾಣಿ ಹಿಡಿದು ಹ್ಯಾಟ್ರಿಕ್ ಸಾಧಿಸಿರುವ ಬಿಜೆಪಿ, ಈ ಬಾರಿ ಪುನಃ ಗೆಲ್ಲುವ ತವಕ ಹೊಂದಿದ್ದರೆ, ಕ್ಷೇತ್ರ…

ಸಿವಿಲ್ ನ್ಯಾಯಾಧೀಶರಾಗಿ ಆಯ್ಕೆಯಾದ ಶ್ರೀದೇವಿ ರಾಗಲಪರ್ವಿ

ನಮ್ಮ ಸಿಂಧನೂರು, ಫೆಬ್ರವರಿ 25ತಾಲೂಕಿನ ರಾಗಲಪರ್ವಿ ಗ್ರಾಮದ ಶ್ರೀದೇವಿ ಅವರು ಸಿವಿಲ್ ನ್ಯಾಯಾಧೀಶರ ಹುದ್ದೆಗೆ ಆಯ್ಕೆಯಾಗುವ ಮೂಲಕ ಗಮನಾರ್ಹ ಸಾಧನೆ ತೋರಿದ್ದಾರೆ. ಕಳೆದ ನವೆಂಬರ್‌ನಲ್ಲಿ ಹೈಕೋರ್ಟ್‌ ಸಿವಿಲ್ ನ್ಯಾಯಾಧೀಶರ ಹುದ್ದೆ ನೇಮಕಾತಿಗೆ ಮುಖ್ಯ ಪರೀಕ್ಷೆ ನಡೆದಿತ್ತು. ಈ ಪರೀಕ್ಷೆಯಲ್ಲಿ ಶ್ರೀದೇವಿ ಅವರು…

ಮಸ್ಕಿ: ತಳಕಂಡ ಕುಡಿವ ನೀರಿನ ಕೆರೆ : ಕೈಚೆಲ್ಲಿದ ತಾಲೂಕು ಆಡಳಿತ ?

ನಮ್ಮ ಸಿಂಧನೂರು, ಫೆಬ್ರವರಿ 24ಮಸ್ಕಿ ಪಟ್ಟಣದ ಕುಡಿವ ನೀರಿನ ಕೆರೆ ತಳಕಂಡಿದ್ದು, ಸಾರ್ವಜನಿಕರು ನೀರಿಗಾಗಿ ದಿನವೂ ಪರದಾಡುತ್ತಿದ್ದಾರೆ. ದಿನದಿಂದ ದಿನಕ್ಕೆ ಸಮಸ್ಯೆ ಬಿಗಡಾಯಿಸುತ್ತಿದ್ದು, ಗಂಭೀರವಾಗಿ ಪರಿಗಣಿಸಬೇಕಾದ ತಾಲೂಕು ಆಡಳಿತ ಹಾಗೂ ಪುರಸಭೆ ಆಡಳಿತ ನಿರ್ಲಕ್ಷ್ಯ ವಹಿಸಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ತುಂಗಭದ್ರಾ…

ಹಸಮಕಲ್:‌ ಕುಡಿವ ನೀರಿಗೆ ಆಗ್ರಹಿಸಿ ಗುಡದೂರು ಗ್ರಾ.ಪಂ.ಗೆ ಮುತ್ತಿಗೆ

ನಮ್ಮ ಸಿಂಧನೂರು, ಫೆ.24ಕಳೆದ 15 ದಿನಗಳಿಂದ ಮಸ್ಕಿ ತಾಲೂಕಿನ ಗುಡದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಸಮಕಲ್ ಗ್ರಾಮಕ್ಕೆ ಕುಡಿವ ನೀರು ಪೂರೈಕೆ ಸ್ಥಗಿತಗೊಂಡಿದ್ದರಿಂದ ಆಕ್ರೋಶಗೊಂಡ ಗ್ರಾಮಸ್ಥರು ಪಂಚಾಯಿತಿ ಕಾರ್ಯಾಲಯಕ್ಕೆ ಇತ್ತೀಚೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.ಗ್ರಾಮದಲ್ಲಿ ಸರ್ಕಾರದ ಮೂರು ಬೋರ್‌ವೆಲ್, ಒಂದು…

ಕೃಷ್ಣೆ-ತುಂಗಭದ್ರೆಯಿದ್ದರೂ ಬಾಯಾರಿದ ರಾಯಚೂರು

ನಮ್ಮ ಸಿಂಧನೂರು, ಫೆಬ್ರವರಿ 20ರಾಯಚೂರು ಜಿಲ್ಲೆಯಲ್ಲಿ ಕೃಷ್ಣಾ ಮತ್ತು ತುಂಗಭದ್ರಾ ನದಿಗಳು ಹರಿದು ಹೋಗಿದ್ದರೂ ಶುದ್ಧ ಕುಡಿವ ನೀರಿನ ಸೌಕರ್ಯ ಕನ್ನಡಿಯೊಳಗಿನ ಗಂಟಾಗಿದೆ. ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಬೇಜವಾಬ್ದಾರಿತನದಿಂದ ಕುಡಿವ ನೀರಿಗಾಗಿ ಜನರು ಅಲೆದಾಡುವುದು ಇಂದಿಗೂ ತಪ್ಪಿಲ್ಲ. ಇನ್ನೂ ಬೇಸಿಗೆಯಲ್ಲಂತೂ ಜನ-ಜಾನುವಾರುಗಳು…

ಸಿಂಧನೂರಿನ ಕುಡಿವ ನೀರಿನ ಕೆರೆ ಖಾಲಿ !

ನಮ್ಮ ಸಿಂಧನೂರು, ಫೆಬ್ರವರಿ 19ಫೆಬ್ರವರಿ ಕೊನೆ ವಾರದಲ್ಲೇ ಸಿಂಧನೂರು ನಗರದ ಕುಡಿವ ನೀರಿನ ಕೆರೆ ಸಂಪೂರ್ಣ ಖಾಲಿಯಾಗಿದ್ದು, ನೀರಿನ ಸಮಸ್ಯೆ ಉಲ್ಬಣಗೊಂಡಿದೆ. ಕಳೆದ ಬಾರಿ ತುಂಗಭದ್ರಾ ನಾಲೆಯಲ್ಲಿ ನೀರಿನ ಹರಿವಿದ್ದ ಕಾರಣ ಸಮಸ್ಯೆಯಾಗಿರಲಿಲ್ಲ, ಈ ಬಾರಿ ಬರಗಾಲ ಆವರಿಸಿದ್ದು, ಡಿಸೆಂಬರ್‌ನಲ್ಲೇ ವಿತರಣಾ…

ಸಿಂಧನೂರು: ಅರಣ್ಯ ಇಲಾಖೆ ಉದ್ಯಾನ ರೆಡಿ ಯಾವ್ಯಾಗ ?

ನಮ್ಮ ಸಿಂಧನೂರು, ಫೆಬ್ರವರಿ 19ಸಿಂಧನೂರು ನಗರ ದಿನದಿಂದ ದಿನಕ್ಕೆ ಬೆಳೆಯುತ್ತಿದೆ. ಜನವಸತಿಗೆ ತಕ್ಕಂತೆ ಉದ್ಯಾನಗಳಾಗಲೀ, ವಿಶ್ರಾಂತಿ ತಾಣಗಳಾಲೀ ಇಲ್ಲ. ನಗರಸಭೆಯ ಉದ್ಯಾನ ಜಾಗಗಳು ಅಲ್ಲಲ್ಲಿ ಒತ್ತುವರಿಯಾಗಿದ್ದು, ಕಾಂಕ್ರೀಟು ಕಾಡಿನಲ್ಲಿ ಶುದ್ಧ ಗಾಳಿಯೇ ಅಪರೂಪ ಎನ್ನುವಂತಾಗಿದೆ. ಇಂತಹ ದುಃಸ್ಥಿತಿಯಲ್ಲಿ ಅರಣ್ಯ ಇಲಾಖೆಯಾದರೂ ಸಾರ್ವಜನಿಕರ…

ಬಜೆಟ್‌ನಲ್ಲಿ ಸಿಂಧನೂರಿಗೆ ಏನಿಲ್ಲ..ಏನಿಲ್ಲ..?

ಸಿಂಧನೂರು: ನೇಣು ಬಿಗಿದ ಸ್ಥಿತಿಯಲ್ಲಿ ಹಾಸ್ಟೆಲ್ ವಿದ್ಯಾರ್ಥಿ ಶವ ಪತ್ತೆ !

ನಮ್ಮ ಸಿಂಧನೂರು, ಫೆಬ್ರವರಿ 16ನಗರದ ಬಿ.ಎಸ್.ಎನ್.ಎಲ್ ಕಚೇರಿ ಎದುರುಗಡೆ ಇರುವ ಅಂಬೇಡ್ಕರ್ ಮೆಟ್ರಿಕ್ ನಂತರದ ಹಾಸ್ಟೆಲ್‌ನ ಶೌಚಗೃಹದಲ್ಲಿ ಗುರುವಾರ ಸಂಜೆ ವಿದ್ಯಾರ್ಥಿಯೊಬ್ಬರ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದ ಗುಂಜಳ್ಳಿ…