ಸ್ಪೆಷಲ್ ನ್ಯೂಸ್: ಬಸವರಾಜ ಹಳ್ಳಿನಮ್ಮ ಸಿಂಧನೂರು, ಮಾರ್ಚ್ 17ಪವಿತ್ರ ರಂಜಾನ್ ಮಾಸಾಚರಣೆ ಹಿನ್ನೆಲೆಯಲ್ಲಿ ಹೈದ್ರಾಬಾದಿ ಚಿಕನ್ ‘ಹಲೀಮ್’ಗೆ ಬೇಡಿಕೆ ಹೆಚ್ಚಿದ್ದು, ನಗರದ ಕುಷ್ಟಗಿ ರಸ್ತೆ ಮಾರ್ಗದಲ್ಲಿರುವ ಬಸವ ಸರ್ಕಲ್‌ನ ಹತ್ತಿರದ ರಾಯಲ್ ಹೋಟೆಲ್‌ನಲ್ಲಿ ತಯಾರಿಸುವ ಹಲೀಮ್ ಖರೀದಿಸಲು ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ…
Author: ನಮ್ಮ ಸಿಂಧನೂರು
ರೈಲ್ವೆ ನಿಲ್ದಾಣ ಸಂಪರ್ಕ ರಸ್ತೆ ಅಧ್ವಾನ : ಪ್ರಯಾಣಿಕರು ಎದ್ದು ಬಿದ್ದು ಸ್ಟೇಶನ್ ತಲುಪುವ ದುಃಸ್ಥಿತಿ !
ಸ್ಪೆಷಲ್ ನ್ಯೂಸ್: ಬಸವರಾಜ ಹಳ್ಳಿನಮ್ಮ ಸಿಂಧನೂರು, ಮಾರ್ಚ್ 1526 ವರ್ಷಗಳ ನಂತರ ರೈಲು ಸಂಚಾರ ಕಂಡ ಸಿಂಧನೂರು ತಾಲೂಕಿನ ಜನ ಮಾರ್ಚ್ 15ರಂದು ಹಬ್ಬದಂತೆ ಸಂಭ್ರಮಿಸಿದರು, ಬೆಳಿಗ್ಗೆಯಿಂದ ಸಂಜೆವರೆಗೆ ರೈಲ್ವೆ ನಿಲ್ದಾಣಕ್ಕೆ ಜನಸಾಗರವೇ ಹರಿದುಬಂತು. ಎರಡೂವರೆ ದಶಕಗಳ ನಂತರ ರೈಲೇನು ಬಂತು…
ಕೆ.ವಿರೂಪಾಕ್ಷಪ್ಪ ಅವರನ್ನು ಭೇಟಿ ಮಾಡಿದ ಕೊಪ್ಪಳ ಬಿಜೆಪಿ ಅಭ್ಯರ್ಥಿ
ನಮ್ಮ ಸಿಂಧನೂರು, ಮಾರ್ಚ್ 15ಬಿಜೆಪಿ ಹೈಕಮಾಂಡ್ ತಮ್ಮನ್ನು ಅಭ್ಯರ್ಥಿಯಾಗಿ ಘೋಷಿಸಿದ್ದೇ ತಡ ಡಾ.ಬಸವರಾಜ್ ಕ್ಯಾವಟರ್ ಅವರು ಕ್ಷೇತ್ರದಾದ್ಯಂತ ಓಡಾಟ ಚುರುಕುಗೊಳಿಸಿದ್ದಾರೆ. ಮಾಜಿ ಸಂಸದ ಹಾಗೂ ಬಿಜೆಪಿಯ ಹಿರಿಯ ನಾಯಕ ಸಿಂಧನೂರಿನ ಕೆ.ವಿರೂಪಾಕ್ಷಪ್ಪ ಅವರ ನಿವಾಸಕ್ಕೆ ಶುಕ್ರವಾರ ದಿಢೀರ್ ಭೇಟಿಕೊಟ್ಟು ಅವರು ಕೆಲವೊತ್ತು…
ಕೊಪ್ಪಳ ಲೋಕಸಭೆ ಕ್ಷೇತ್ರದ ವಿಧಾನಸಭೆಗಳ ವ್ಯಾಪ್ತಿಯಲ್ಲಿ ಕೈ‘ಬಲ’
ರಾಜಕೀಯ ವಿಶ್ಲೇಷಣೆ: ಬಸವರಾಜ ಹಳ್ಳಿನಮ್ಮ ಸಿಂಧನೂರು, ಮಾರ್ಚ್ 152023ರ ವಿಧಾನಸಭೆ ಚುನಾವಣೆಯಲ್ಲಿ ಗೆದ್ದು ಬೀಗಿರುವ ಕಾಂಗ್ರೆಸ್ ಹೇಗಾದರೂ ಮಾಡಿ ಈ ಬಾರಿ ಕೊಪ್ಪಳ ಲೋಕಸಭೆ ಕ್ಷೇತ್ರವನ್ನು ಕೈವಶ ಮಾಡಿಕೊಳ್ಳಲು ತಂತ್ರಗಾರಿಕೆಗೆ ಮೊರೆ ಹೋಗಿದೆ. ಬಿಜೆಪಿ ಅಭ್ಯರ್ಥಿಯನ್ನು ಘೋಷಣೆ ಮಾಡಿದ್ದೇ ತಡ, ಅಳೆದು-ತೂಗಿ…
ಸಿಂಧನೂರು ರೈಲು ಸಂಚಾರಕ್ಕೆ ಹಸಿರು ನಿಶಾನೆ : ಹುಬ್ಬಳ್ಳಿ, ಬೆಂಗಳೂರು ಪ್ರಯಾಣ ಸುಲಭ
ನಮ್ಮ ಸಿಂಧನೂರು, ಮಾರ್ಚ್ 15ಕೊಪ್ಪಳ ಸಂಸದ ಕರಡಿ ಸಂಗಣ್ಣ ಹಾಗೂ ಸಿಂಧನೂರು ಶಾಸಕ ಹಂಪನಗೌಡ ಬಾದರ್ಲಿ ಅವರು ನಗರದ ರೈಲ್ವೆ ನಿಲ್ದಾಣದಲ್ಲಿ ಎಸ್‌ಸಿಆರ್ ವ್ಯಾಪ್ತಿಗೊಳಪಡುವ ಯಶವಂತಪುರ-ಕಾರಟಗಿ ಎಕ್ಸ್‌ಪ್ರೆಸ್ ರೈಲು ಸಂಚಾರ ಸಿಂಧನೂರಿಗೆ ವಿಸ್ತರಣೆಯಾಗಿರುವುದಕ್ಕೆ ಶುಕ್ರವಾರ ಹಸಿರು ನಿಶಾನೆ ತೋರುವ ಮೂಲಕ ಚಾಲನೆ…
ಕೊಪ್ಪಳ ಲೋಕಸಭೆ ಕ್ಷೇತ್ರ: ಸಂಗಣ್ಣ ಕರಡಿಗೆ ಕೈತಪ್ಪಿದ ಟಿಕೆಟ್, ಬುಗಿಲೆದ್ದ ಅಸಮಾಧಾನ
ರಾಜಕೀಯ ವಿಶ್ಲೇಷಣೆ: ಬಸವರಾಜ ಹಳ್ಳಿನಮ್ಮ ಸಿಂಧನೂರು, ಮಾರ್ಚ್ 15ಎರಡು ಬಾರಿ ಕೊಪ್ಪಳದ ಎಂಪಿಯಾಗಿ ಮೂರನೇ ಬಾರಿಗೆ ಟಿಕೆಟ್ ಪಡೆಯುವ ವಿಶ್ವಾಸದಲ್ಲಿದ್ದ ಸಂಗಣ್ಣ ಕರಡಿ ಅವರಿಗೆ ಈ ಬಾರಿ ಟಿಕೆಟ್ ಕೈತಪ್ಪಿದ್ದು, ಬೆಂಬಲಿಗರು, ಹಿತೈಷಿಗಳು ಹಾಗೂ ಅಭಿಮಾನಿಗಳಲ್ಲಿ ಅಸಮಾಧಾನ ಬುಗಿಲೆದ್ದಿದೆ. ಕೊಪ್ಪಳ ಬಿಜೆಪಿ…
ಮಸಾರಿ ಪ್ರತಿಭೆ ಉತ್ಸವ ಗೋನವಾರ ನಿರ್ದೇಶನ: ಪ್ರಭುತ್ವದ ಹೃದಯಹೀನ ಲಾಕ್‌ಡೌನ್ ಕತೆ ಹೇಳುವ ‘ಫೋಟೋ’
ನಮ್ಮ ಸಿಂಧನೂರು, ಮಾರ್ಚ್ 14ರಾಯಚೂರು ಜಿಲ್ಲೆಯ ಸದ್ಯ ಮಸ್ಕಿ ತಾಲೂಕಿನ ಗೋನವಾರ ಗ್ರಾಮದ ಮಸಾರಿ ನೆಲದ ಯುವ ಪ್ರತಿಭೆ ಉತ್ಸವ್ ಗೋನವಾರ ಅವರ ‘ಫೋಟೋ’ ಚಲನಚಿತ್ರ ರಾಜ್ಯಾದ್ಯಂತ ದಿನಾಂಕ: 15-03-2024ರಂದು ತೆರೆ ಕಾಣುತ್ತಿದೆ. ರಂಗ ಕಲಾವಿದ, ಸೃಜನಶೀಲ ಬರಹಗಾರರಾದ ಉತ್ಸವ್ ಗೋನವಾರ…
ಕೊಪ್ಪಳ ಲೋಕಸಭಾ ಕ್ಷೇತ್ರ: ಮೂವರೊಳಗೆ ‘ಕೈ’ ಟಿಕೆಟ್ ಯಾರಿಗೆ ?
ರಾಜಕೀಯ ವಿಶ್ಲೇಷಣೆ: ಬಸವರಾಜ ಹಳ್ಳಿನಮ್ಮ ಸಿಂಧನೂರು, ಮಾರ್ಚ್ 14ಲೋಕಸಭಾ ಚುನಾವಣೆ ದಿನದಿಂದ ದಿನಕ್ಕೆ ಕಾವೇರುತ್ತಿದ್ದು, ಬಿಜೆಪಿ ಟಿಕೆಟ್ ಘೋಷಣೆಯ ನಂತರ ಕಾಂಗ್ರೆಸ್ ಅಭ್ಯರ್ಥಿ ಯಾರೆನ್ನುವುದು ಇನ್ನೂ ಸ್ಪಷ್ಟವಾಗಿಲ್ಲ. ಬಿಜೆಪಿ ಹತ್ತು ಹಲವು ಲೆಕ್ಕಾಚಾರಗಳನ್ನು ಮಾಡಿ ಕೊನೆಗೆ ಕುಷ್ಟಗಿಯ ಮಾಜಿ ಶಾಸಕ ಕೆ.ಶರಣಪ್ಪ…
ಕವಿ ಆರಿಫ್ ರಾಜಾಗೆ ಭಾರತೀಯ ಭಾಷಾ ಯುವ ಪುರಸ್ಕಾರ, ಪಿ.ಲಂಕೇಶ್ ಸಾಹಿತ್ಯ ವೇದಿಕೆ ಹರ್ಷ
ನಮ್ಮ ಸಿಂಧನೂರು, ಮಾರ್ಚ್ 12ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಅರಕೆರೆ ಗ್ರಾಮದವರಾದ ಹಾಗೂ ಸದ್ಯ ಬಾಗಲಕೋಟ ಜಿಲ್ಲೆಯ ಇಳಕಲ್‌ನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕರಾಗಿರುವ ಕವಿ ಆರಿಫ್ ರಾಜಾ ಅವರು ಕೋಲ್ಕತ್ತಾದ ಭಾರತೀಯ ಭಾಷಾ ಪರಿಷತ್‌ನ ಯುವ ಪುರಸ್ಕಾರಕ್ಕೆ…