ಸಿಂಧನೂರು : ಸಾಮ್ರಾಜ್ಯಶಾಹಿ ಲೂಟಿ, ಫ್ಯಾಶಿಸ್ಟ್ ದಾಳಿಯ ವಿರುದ್ಧ ಸಮರಶೀಲ ಹೋರಾಟಕ್ಕೆ ಒಗ್ಗೂಡಿ: ಆರ್.ಮಾನಸಯ್ಯ

ನಮ್ಮ ಸಿಂಧನೂರು, ಮೇ 1ಪ್ರಪಂಚ ಕಾರ್ಮಿಕ ವರ್ಗದ ಹೋರಾಟದ ಚರಿತ್ರೆಯಲ್ಲಿ ಮೇ ದಿನಾಚರಣೆಗೆ ಅತ್ಯಂತ ಮಹತ್ವದ ಪ್ರಾಮುಖ್ಯತೆ ಇದೆ.1886 ಮೇ ಒಂದರಂದು ಅಮೆರಿಕದ ಕಾರ್ಮಿಕ ವರ್ಗ ದೇಶಾದ್ಯಂತ ಹೂಡಿದ ಚಳುವಳಿಯ ಧ್ವನಿ ಜಗತ್ತಿನಾದ್ಯಂತ ಮಾರ್ದನಿಸಿದ ದಿನವಿದು. ಇದರಿಂದ ಸ್ಫೂರ್ತಿಯನ್ನು ಪಡೆದು ಸಾಮ್ರಾಜ್ಯಶಾಹಿ…

ಸಿಂಧನೂರು: ಕೊಪ್ಪಳ ಜಿಲ್ಲಾಧಿಕಾರಿ ಸಿಂಧನೂರು ತರಬೇತಿ ಕೇಂದ್ರಕ್ಕೆ ಭೇಟಿ

ನಮ್ಮ ಸಿಂಧನೂರು, ಮೇ 1ನಗರದ ಸರ್ಕಾರಿ ಪದವಿ ಮಹಾವಿದ್ಯಾಲಯದಲ್ಲಿ ಚುನಾವಣಾ ಅಧಿಕಾರಿಗಳಿಗೆ ಬುಧವಾರ ಆಯೋಜಿಸಿದ್ದ ತರಬೇತಿ ಕೇಂದ್ರಕ್ಕೆ ಕೊಪ್ಪಳ ಜಿಲ್ಲಾಧಿಕಾರಿ ನಳಿನ್‌ ಅತುಲ್‌ ಅವರು ಮಧ್ಯಾಹ್ನ ಭೇಟಿ ನೀಡಿ ಪರಿಶೀಲಿಸಿದರು. ತರಬೇತಿಯಲ್ಲಿ ಭಾಗವಹಿಸಿದ್ದ ಅಧಿಕಾರಿಗಳೊಂದಿಗೆ ಕೆಲವೊತ್ತು ಮಾತುಕತೆ ನಡೆಸಿದ ಅವರು, ಕೆಲವೊಂದು…

ಸಿಂಧನೂರು : ಬಿಜೆಪಿ ಸರ್ಕಾರದಲ್ಲಿ ಮಹಿಳೆಯರಿಗೆ ಸುರಕ್ಷತೆ ಇಲ್ಲ: ಸಾತಿ ಸುಂದರೇಶ ವಾಗ್ದಾಳಿ

ನಮ್ಮ ಸಿಂಧನೂರು, ಮೇ 1ಸರ್ಕಾರದ ಎನ್‌ಸಿಆರ್‌ಬಿ ವರದಿ ಪ್ರಕಾರವೇ ದೇಶದಲ್ಲಿ ಪ್ರತಿದಿನ 10 ಮಹಿಳೆಯರ ಮೇಲೆ ಅತ್ಯಾಚಾರ ನಡೆಯುತ್ತಿದೆ. ಹತ್ರಾಸ್, ಉನ್ನಾವೋ, ಕಥುವಾ ಅತ್ಯಾಚಾರ, ಕೊಲೆ ಘಟನೆಗಳಲ್ಲಿ ಬಿಜೆಪಿಗರೇ ಭಾಗಿಯಾಗಿದ್ದು, ಕೆಲ ಪ್ರಕರಣದ ಆರೋಪಿಗಳ ಪರವಾಗಿ ನಾಚಿಗೆಗೆಟ್ಟು ಮೆರವಣಿಗೆ ನಡೆಸಿದ್ದಾರೆ. ರಾಜ್ಯದಲ್ಲಿ…

ಸಿಂಧನೂರು : ಟಿಯುಸಿಐನಿಂದ ಕಾರ್ಮಿಕ ದಿನ ಆಚರಣೆ

ನಮ್ಮ ಸಿಂಧನೂರು, ಮೇ 1ನಗರದ ಎಪಿಎಂಸಿಯ ಶ್ರಮಿಕ ಭವನದಲ್ಲಿ ಸರ್ ಎಂ.ವಿಶ್ವೇಶ್ವರಯ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಂಘ ಹಾಗೂ ಶ್ರಮಜೀವಿ ಎಪಿಎಂಸಿ ಹಮಾಲರ ಸಂಘ (ಟಿಯುಸಿ) ವತಿಯಿಂದ ವಿಶ್ವ ಬುಧವಾರ ಕಾರ್ಮಿಕ ದಿನವನ್ನು ಆಚರಿಸಲಾಯಿತು. ಮುಖಂಡರಾದ ಚಿನ್ನಪ್ಪ ಕೊಟ್ರಕಿ…

ಸಿಂಧನೂರು : ಎಐಟಿಯುಸಿಯಿಂದ ವಿಶ್ವ ಕಾರ್ಮಿಕ ದಿನಾಚರಣೆ

ನಮ್ಮ ಸಿಂಧನೂರು, ಮೇ 1ನಗರದ ಎಪಿಎಂಸಿಯ ಎಐಟಿಯುಸಿ ಕಾರ್ಯಾಲಯದ ಆವರಣದಲ್ಲಿ ಬುಧವಾರದಂದು ವಿಶ್ವ ಕಾರ್ಮಿಕ ದಿನವನ್ನು ಆಚರಿಸಲಾಯಿತು. ಸಿಪಿಐ ರಾಜ್ಯ ಕಾರ್ಯದರ್ಶಿ ಸಾತಿ ಸುಂದರೇಶ್ ಅವರು ಪಕ್ಷದ ಧ್ವಜಾರೋಹಣ ನೆರವೇರಿಸಿದರು. ಈ ಸಂದರ್ಭದಲ್ಲಿ ಸಿಪಿಐ ಜಿಲ್ಲಾ ಕಾರ್ಯದರ್ಶಿ ಬಾಷುಮಿಯಾ, ಮುಖಂಡರಾದ ಡಿ.ಎಚ್.ಕಂಬಳಿ,…

ಸಿಂಧನೂರು : ಬೇಸಿಗೆಯಲಿ ಬಾಯಾರಿಕೆ, ಏರುತಿದೆ ಮನೆಯ ಕುಡಿಯುವ ನೀರಿನ ಬಜೆಟ್ !

(ಸ್ಪೆಷಲ್ ಸ್ಟೋರಿ: ಬಸವರಾಜ ಹಳ್ಳಿ)ನಮ್ಮ ಸಿಂಧನೂರು, ಎಪ್ರಿಲ್ 30ಕಳೆದ ಒಂದು ತಿಂಗಳಿಂದ ನಗರದ ಬಹಳಷ್ಟು ಕುಟುಂಬಗಳ ಮನೆಯ ಕುಡಿವ ನೀರಿನ ಬಜೆಟ್ ಏರುತ್ತಿದೆ. ಅವಿಭಕ್ತ ಕುಟುಂಬದಲ್ಲಂತೂ ದಿನವೂ ಒಬ್ಬರು ಕುಡಿವ ನೀರು ತರಲು ಕಾಯಂ ಆಗಿ ನೇಮಕವಾದಂತಿದೆ. ಉರಿಬಿಸಿಲಿನಿಂದಾಗಿ ಪದೇ ಪದೆ…

ಸಿಂಧನೂರು : ಬಿಜೆಪಿ ಅಭ್ಯರ್ಥಿ ಕ್ಯಾವಟರ್ ಪರ ಸಿ.ಟಿ.ರವಿ ಪ್ರಚಾರ

ನಮ್ಮ ಸಿಂಧನೂರು, ಎಪ್ರಿಲ್ 30ನಗರದಲ್ಲಿ ಬಿಜೆಪಿ ರಾಷ್ಟ್ರೀಯ ಮಾಜಿ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಅವರು ಕೊಪ್ಪಳ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ.ಬಸವರಾಜ ಕ್ಯಾವಟರ್ ಅವರ ಪರ ಪ್ರಚಾರ ಕೈಗೊಳ್ಳುವ ಹಿನ್ನೆಲೆಯಲ್ಲಿ ಪಕ್ಷದ ಕಾರ್ಯಕರ್ತರ, ಬೆಂಬಲಿಗರ ಹಾಗೂ ಅಭಿಮಾನಿಗಳ ಸಭೆ ನಡೆಸಿದರು.…

ಸಿಂಧನೂರು : ಸಿಪಿಐ(ಎಂಎಲ್) ರೆಡ್‌ಸ್ಟಾರ್‌ನಿಂದ ಫ್ಯಾಸಿಸ್ಟ್ ಆರ್‌ಎಸ್‌ಎಸ್ ಬಿಜೆಪಿಯನ್ನು ಸೋಲಿಸಿ, ಸಂವಿಧಾನ, ಪ್ರಜಾಪ್ರಭುತ್ವ, ಜಾತ್ಯತೀತತೆ, ಮೀಸಲಾತಿ ರಕ್ಷಿಸಿ ಆಂದೋಲನ

ನಮ್ಮ ಸಿಂಧನೂರು, ಎಪ್ರಿಲ್ 30ನಗರದಲ್ಲಿ ಸಿಪಿಐ(ಎಂಎಲ್) ರೆಡ್‌ಸ್ಟಾರ್‌ನಿಂದ ಫ್ಯಾಸಿಸ್ಟ್ ಆರ್‌ಎಸ್‌ಎಸ್ ಬಿಜೆಪಿಯನ್ನು ಸೋಲಿಸಿ, ಸಂವಿಧಾನ, ಪ್ರಜಾಪ್ರಭುತ್ವ, ಜಾತ್ಯತೀತತೆ ಹಾಗೂ ಮೀಸಲಾತಿ ರಕ್ಷಿಸಿ, ಮತದಾರರ ಜಾಗೃತಿ ಸಭೆಯನ್ನು ಹಮ್ಮಿಕೊಳ್ಳಲಾಯಿತು. ಪಕ್ಷದ ಮುಖಂಡರಾದ ಎಂ.ಗAಗಾಧರ ಮಾತನಾಡಿ, ಕೊಪ್ಪಳ ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಸಿಪಿಐ(ಎಂಎಲ್) ರೆಡ್‌ಸ್ಟಾರ್…

ಸಿಂಧನೂರು : ನಾಲ್ಕ ಹೆಜ್ಜೆ ನಡೇದ್ರೊಳಗ ಬಿಸಿಲಿಗೆ ಬೆವರಿ ಅಂಗಿ ತೊಯ್ಯಾಕತ್ತ್ಯಾದ್ರಿ !

(ಸ್ಪೆಷಲ್ ನ್ಯೂಸ್: ಬಸವರಾಜ ಹಳ್ಳಿ)ನಮ್ಮ ಸಿಂಧನೂರು, ಎಪ್ರಿಲ್ 30“ಎಂಥಾ ಬಿಸಿಲ್ರಿ ಇದು ! ನಾಲ್ಕು ಹೆಜ್ಜೆ ನಡೇದ್ರೊಳಗ ಮೈತುಂಬ ಬೆವ್ರು ಇಳ್ದು ಅಂಗಿ ತೋಯ್ಯಾಕತ್ತಾö್ಯದ, ಇನ್ನು ಅನಕಂಡ ಕಡೆ ಹೋಗ್ಬೇಕಂದ್ರ ತಲೆ ತಿರಿಗಿದೆಂಗ ಆಗ್ತೈತಿ. ಇಂತಾ ಬಿಸ್ಲು ಬಿದ್ರ ಏನ್ಮಾಡಬೇಕ್ರಿ. ನೆಳ್ಳು…

ಸಿಂಧನೂರು : ಪ್ರಜಾಪ್ರಭುತ್ವ ರಕ್ಷಣಾ ವೇದಿಕೆಯಿಂದ ‘ಬಿಜೆಪಿಯನ್ನು ಸೋಲಿಸಿ, ಸಂವಿಧಾನ, ಸಾಮರಸ್ಯ, ಸಾಮಾಜಿಕ ನ್ಯಾಯವನ್ನು ರಕ್ಷಿಸಿ’ ಆಂದೋಲನ

ನಮ್ಮ ಸಿಂಧನೂರು, ಎಪ್ರಿಲ್ 30ನಗರದಲ್ಲಿ ಪ್ರಜಾಪ್ರಭುತ್ವ ರಕ್ಷಣಾ ವೇದಿಕೆಯಿಂದ ಚುನಾವಣಾ ಜಾಗೃತಿಯ ಆಂದೋಲನದ ಹಿನ್ನೆಲೆಯಲ್ಲಿ ಸೋಮವಾರ ಸಂಜೆ ಟಿಪ್ಪುಸುಲ್ತಾನ್ ಕಾಲೋನಿಯಲ್ಲಿ ‘ಬಿಜೆಪಿಯನ್ನು ಸೋಲಿಸಿ, ಸಂವಿಧಾನ, ಸಾಮರಸ್ಯ ಹಾಗೂ ಸಾಮಾಜಿಕ ನ್ಯಾಯವನ್ನು ರಕ್ಷಿಸಿ’ ಪ್ರಚಾರಾಂದೋಲನ ನಡೆಸಲಾಯಿತು. ಆಂದೋಲನದಲ್ಲಿ ಮುಖಂಡರಾದ ದೇವೇಂದ್ರಗೌಡ, ಹುಸೇನ್‌ಸಾಬ್, ಶಂಕರ…