ಲೋಕಲ್ ನ್ಯೂಸ್: ಬಸವರಾಜ ಹಳ್ಳಿನಮ್ಮ ಸಿಂಧನೂರು, ಸೆಪ್ಟೆಂಬರ್ 07ಹೆಜ್ಜೆ ಹೆಜ್ಜೆಗೂ ಗುಂಡಿಗಳು, ಮಳೆ ನೀರು ನಿಂತು ಚೆಲ್ಲಾಪಿಲ್ಲಿಯಾದ ಕಂಕರ್, ತೋಪೆದ್ದುಹೋದ ಡಾಂಬರ್, ತಡೆಗೋಡೆಯಿಲ್ಲದ ಸಂಪರ್ಕ ಸೇತುವೆ ಇದು ತಾಲೂಕಿನ ಅರಳಹಳ್ಳಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯ ಅಧ್ವಾನ ಸ್ಥಿತಿ.ದಿನವೂ ಕೆಲಸ ಕಾರ್ಯಗಳಿಗೆ…
Author: ನಮ್ಮ ಸಿಂಧನೂರು
ಸಿಂಧನೂರು: ತುಂಗಭದ್ರಾ ಜಲಾಶಯಕ್ಕೆ 34,421 ಕ್ಯೂಸೆಕ್ ಒಳಹರಿವು, ಭರ್ತಿಯಾಗುವುದು ಗ್ಯಾರಂಟಿ
ನಮ್ಮ ಸಿಂಧನೂರು, ಸೆಪ್ಟೆಂಬರ್ 07ತುಂಗಭದ್ರಾ ಜಲಾಶಯಕ್ಕೆ ದಿನಾಂಕ:07-09-2024 ಶನಿವಾರದಂದು 34,421 ಕ್ಯೂಸೆಕ್ ನೀರು ಒಳಹರಿವು ದಾಖಲಾಗಿದೆ. 34,181 ಕ್ಯೂಸೆಕ್ ನೀರು ಹೊರಬಿಡಲಾಗುತ್ತಿದೆ. ಜಲಾಶಯದಲ್ಲಿ ಸದ್ಯ 101.77 ಟಿಎಂಸಿ ನೀರು ಸಂಗ್ರಹವಿದ್ದು, ಒಳಹರಿವಿನ ಪ್ರಮಾಣದಲ್ಲಿ ಸ್ಥಿರತೆ ಇರುವುದರಿಂದ ಜಲಾಶಯ ಭರ್ತಿಯಾಗುವುದು ನಿಚ್ಚಳವಾಗಿದೆ. ಹೆಚ್ಚುವರಿ…
ಸಿಂಧನೂರು: ಸೆಪ್ಟೆಂಬರ್ 8 ರಂದು ಅಕ್ಷರ ಸಂಗಾತ ಸಾಹಿತ್ಯ ಮಾಸ ಪತ್ರಿಕೆ ಅವಲೋಕನ ಕಾರ್ಯಕ್ರಮ
ನಮ್ಮ ಸಿಂಧನೂರು, ಸೆಪ್ಟೆಂಬರ್ 06ನಗರದ ಬಸವ ಸರ್ಕಲ್ ಬಳಿಯಿರುವ ಅನಿಕೇತನ ಪದವಿ ಪೂರ್ವ ಕಾಲೇಜಿನಲ್ಲಿ ಸೆಪ್ಟೆಂಬರ್ 8 ರಂದು ಭಾನುವಾರ ಬೆಳಿಗ್ಗೆ 10 ಗಂಟೆಗೆ ಅಕ್ಷರ ಸಂಗಾತ ಸಾಹಿತ್ಯ ಮಾಸ ಪತ್ರಿಕೆಯ ಅವಲೋಕನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಸಂಘಟಕರು ತಿಳಿಸಿದ್ದಾರೆ.ಕಾರ್ಯಕ್ರಮದ ಉದ್ಘಾಟನೆಯನ್ನು…
ಮಾನ್ವಿ: ಸಾರಿಗೆ ಬಸ್, ಖಾಸಗಿ ಶಾಲಾ ವಾಹನದ ನಡುವೆ ಭೀಕರ ಅಪಘಾತ, ನಾಲ್ವರು ವಿದ್ಯಾರ್ಥಿಗಳು ಸಾವು, ಹಲವು ವಿದ್ಯಾರ್ಥಿಗಳಿಗೆ ಗಂಭೀರ ಗಾಯ
ಜಿಲ್ಲಾ ಸಂಚಾರ : ಬಸವರಾಜ ಹಳ್ಳಿನಮ್ಮ ಸಿಂಧನೂರು, ಸೆಪ್ಟೆಂಬರ್ 05ಮಾನ್ವಿ ತಾಲೂಕಿನ ಕಪಗಲ್ ಗ್ರಾಮದ ಹೊರವಲಯದ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾರಿಗೆ ಬಸ್ ಹಾಗೂ ಖಾಸಗಿ ಶಾಲಾ ವಾಹನದ ನಡುವೆ ಗುರುವಾರ ಬೆಳಿಗ್ಗೆ ನಡೆದ ಭೀಕರ ಅಪಘಾತದಲ್ಲಿ ನಾಲ್ವರು ಮಕ್ಕಳು ಸ್ಥಳದಲ್ಲೇ ಮೃತಪಟ್ಟಿದ್ದು,…
ಸಿಂಧನೂರು: ಸನ್‌ರೈಸ್ ಕಾಲೇಜಿನಲ್ಲಿ ಪತ್ರಿಕಾ ವಿತರಕರ ದಿನಾಚರಣೆ, ವಿತರಕರಿಗೆ ಆತ್ಮೀಯ ಸನ್ಮಾನ
ನಮ್ಮ ಸಿಂಧನೂರು, ಸೆಪ್ಟೆಂಬರ್ 04ನಗರದ ಸನ್ ರೈಸ್ ಗ್ರೂಪ್ ಆಫ್ ಇನ್ಸ್ಟಿಟ್ಯೂಶನ್ (ಡಿ ಫಾರ್ಮಸಿ, ನರ್ಸಿಂಗ್ ಮತ್ತು ಪ್ಯಾರಾ ಮೆಡಿಕಲ್) ಕಾಲೇಜ್‌ನಲ್ಲಿ ಪತ್ರಿಕಾ ವಿತರಕರ ದಿನಾಚರಣೆ ನಿಮಿತ್ತ ವಿವಿಧ ದಿನಪತ್ರಿಕೆಗಳ ವಿತರಕರನ್ನು ಬುಧವಾರ ಸನ್ಮಾನಿಸಿ ಗೌರವಿಸಲಾಯಿತು. ನಗರದ ಹಿರಿಯ ಪತ್ರಿಕಾ ವಿತರಕರಾದ…
ಸಿಂಧನೂರು: ಎಮ್ಮೆಲ್ಸಿ ಬಸನಗೌಡ ಬಾದರ್ಲಿ ನೇತೃತ್ವದಲ್ಲಿ ತಾಲೂಕು ವೈದ್ಯಾಧಿಕಾರಿ, ಪಿಎಚ್‌ಸಿ ವೈದ್ಯರ ಸಭೆ
ನಮ್ಮ ಸಿಂಧನೂರು, ಸೆಪ್ಟೆಂಬರ್ 04ವಿಧಾನ ಪರಿಷತ್ ಸದಸ್ಯ ಬಸನಗೌಡ ಬಾದರ್ಲಿ ಅವರ ನಗರದ ಜನಸ್ಪಂದನ ಕಾರ್ಯಾಲಯದಲ್ಲಿ ಸಾರ್ವಜನಿಕ ಆಸ್ಪತ್ರೆ ವೈದ್ಯರು, ತಾಲೂಕು ವೈದ್ಯಾಧಿಕಾರಿಗಳು ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳ ವೈದ್ಯರ ಸಭೆ ಬುಧವಾರ ನಡೆಯಿತು. ಸಭೆಯಲ್ಲಿ ಆಯಾ ಆಸ್ಪತ್ರೆಗಳ ಕುರಿತು ಮಾಹಿತಿ…
ಸಿಂಧನೂರು: ಡಿವೈಡರ್‌ಗೆ ಡಿಕ್ಕಿ ಹೊಡೆದು ಟ್ಯಾಂಕರ್ ಪಲ್ಟಿ
ನಮ್ಮ ಸಿಂಧನೂರು, ಸೆಪ್ಟೆಂಬರ್ 04ನಗರದ ರಾಯಚೂರು ಮಾರ್ಗದ ರಸ್ತೆಯಲ್ಲಿ ವಳಬಳ್ಳಾರಿ ಕ್ರಾಸ್ ಮುಂದೆ ಟ್ಯಾಂಕರ್‌ವೊಂದು ಡಿವೈಡರ್‌ಗೆ ಡಿಕ್ಕಿ ಹೊಡೆದು ಪಲ್ಟಿಯಾಗಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿಯಾಗಿಲ್ಲ. ರಾಯಚೂರಿನಿಂದ ಗಂಗಾವತಿ ಮಾರ್ಗವಾಗಿ ಸಂಚರಿಸುತ್ತಿದ್ದ ಲಾರಿ ಡಿವೈಡರ್‌ಗೆ ಡಿಕ್ಕಿ ಹೊಡೆದ ಪರಿಣಾಮ ಅಪಘಾತ ಸಂಭವಿಸಿದೆ. ಲಾರಿ…
ಸಿಂಧನೂರು: 101 ಟಿಎಂಸಿ ದಾಟಿದ ತುಂಗಭದ್ರಾ ಜಲಾಶಯದ ನೀರಿನ ಸಂಗ್ರಹ
ನಮ್ಮಸಿಂಧನೂರು, ಸೆಪ್ಟೆಂಬರ್ 04ತುಂಗಭದ್ರಾ ಜಲಾಶಯಕ್ಕೆ ದಿನಾಂಕ:04-09-2024 ಬುಧವಾರದಂದು 39,945 ಕ್ಯೂಸೆಕ್ ನೀರು ಒಳಹರಿವು ದಾಖಲಾಗಿದೆ. 15,235 ಕ್ಯೂಸೆಕ್ ನೀರು ಹೊರಬಿಡಲಾಗುತ್ತಿದೆ. ಸದ್ಯ ಜಲಾಶಯದಲ್ಲಿ 101.45 ಟಿಎಂಸಿ ನೀರು ಸಂಗ್ರಹವಿದೆ. ಕಳೆದ ವರ್ಷ ಇದೇ ದಿನ ಜಲಾಶಯದಲ್ಲಿ 73.78 ಟಿಎಂಸಿ ನೀರು ಸಂಗ್ರಹವಿದ್ದರೆ,…
ಸಿಂಧನೂರು: ಗಂಗಾವತಿ ರಸ್ತೆಗೆ ನುಗ್ಗಿದ ಚರಂಡಿ ನೀರು, ವಾಹನ ಸವಾರರ ಪರದಾಟ
ಲೋಕಲ್ ನ್ಯೂಸ್: ಬಸವರಾಜ ಹಳ್ಳಿನಮ್ಮ ಸಿಂಧನೂರು, ಸೆಪ್ಟೆಂಬರ್ 03ಮಂಗಳವಾರ ಸಂಜೆ 5 ಗಂಟೆ ಸುಮಾರು ನಗರದಲ್ಲಿ ಸುರಿದ ಮಳೆಯಿಂದಾಗಿ ಗಂಗಾವತಿ ಮಾರ್ಗದ ರಸ್ತೆಯಲ್ಲಿರುವ ಎಕ್ಸಿಸ್‌ಬ್ಯಾಂಕ್, ವಿಸ್ಟೈಲೋ ಹಾಗೂ ಕಾನಿಹಾಳ ಪೆಟ್ರೋಲ್ ಬಂಕ್ ಮುಂಬದಿಯ ಹೆದ್ದಾರಿಯಲ್ಲಿ ನೀರು ನುಗ್ಗಿ ವಾಹನ ಚಾಲಕರು ಪರದಾಡುವಂತಾಯಿತು.…
ಸಿಂಧನೂರು: ಭಗೀರಥ ಕಾಲೋನಿ ಸಂಪರ್ಕ ರಸ್ತೆ ನಡೆಯೋಕಲ್ಲ..! ನೋಡೋಕೂ ಕಷ್ಟ !!
ಲೋಕಲ್ ನ್ಯೂಸ್: ಬಸವರಾಜ ಹಳ್ಳಿನಮ್ಮ ಸಿಂಧನೂರು, ಸೆಪ್ಟೆಂಬರ್ 03ನಗರದ ವಾರ್ಡ್ ನಂ.13ರ ಭಗೀರಥ ಕಾಲೋನಿಯ ಮುಖ್ಯ ರಸ್ತೆ ಮಳೆ ನೀರಿನಿಂದಾಗಿ ಕೊಚ್ಚಿಗುಂಡಿಯಾಗಿದ್ದು, ಈ ರಸ್ತೆಯಲ್ಲಿ ಟಿಪ್ಪರ್ ಓಡಾಟದಿಂದಾಗಿ ಇನ್ನಷ್ಟು ಅಧ್ವಾನ ಸ್ಥಿತಿಗೆ ತಲುಪಿದೆ. ಕರಿಯಪ್ಪ ಲೇಔಟ್, ವಜೀರಪ್ಪ ಲೇಔಟ್‌ಗಳಿಗೆ ಸಂಪರ್ಕ ಕಲ್ಪಿಸುವ…