ನಮ್ಮ ಬಗ್ಗೆ

Spread the love

‘ನಮ್ಮ ಸಿಂಧನೂರು’ ಸ್ಥಳೀಯ ಸುದ್ದಿ ಸಂಗತಿಗಳನ್ನು ಹಾಗೂ ಜಾಹೀರಾತುಗಳನ್ನು ಜನಸಾಮಾನ್ಯರಿಗೆ ತಲುಪಿಸುವ ಡಿಜಿಟಲ್ ತಾಣ. ರಾಯಚೂರು ಜಿಲ್ಲೆಯಲ್ಲೇ ವಿಭಿನ್ನ, ವಿಶಿಷ್ಟ ಸಾಂಸ್ಕೃತಿಕ, ಸಾಮಾಜಿಕ ಹಾಗೂ ಆರ್ಥಿಕ ನೆಲೆಗಟ್ಟಿನ ಕಾರಣಕ್ಕೆ ಸಿಂಧನೂರು ವಿಶೇಷವಾಗಿ ಗುರುತಿಸಿಕೊಂಡಿದೆ. ಈ ಹಿನ್ನೆಲೆಯಲ್ಲಿ ತಾಲೂಕಿನ ಸಮಗ್ರ ಮುಖವಾಣಿಯಂತೆ ಈ ತಾಣ ಕೆಲಸ ಮಾಡಲಿದೆ. ಸಿಂಧನೂರು ತಾಲೂಕಿನ ಹಳ್ಳಿ, ಪಟ್ಟಣಗಳು ಹಾಗೂ ನಗರ ಪ್ರದೇಶದ ದೈನಂದಿನ ಸುದ್ದಿ, ಸಾಹಿತ್ಯ-ಸಾಂಸ್ಕೃತಿಕ ಕಾರ್ಯಕ್ರಮ, ಜಾತ್ರೆ, ಸಮಾರಂಭ ಹಾಗೂ ಸಾರ್ವಜನಿಕರ ಸಮಸ್ಯೆ, ಸಂಕಷ್ಟದ ಕುರಿತ ಹತ್ತು ಹಲವು ಕಾರ್ಯಕ್ರಮಗಳನ್ನು ಬಿತ್ತರಿಸಲಿದೆ. ಸಿಂಧನೂರು ನಗರ, ತಾಲೂಕು ಸಾಂಸ್ಕೃತಿ ಹಿರಿಮೆ-ಗರಿಮೆ ಹೊಂದಿದಷ್ಟೇ ಪ್ರಮುಖವಾಗಿ ಭತ್ತದ ಕಣಜವೆಂದು ಗುರುತಿಸಿಕೊಂಡಿದ್ದು, ವಾಣಿಜ್ಯ ಕ್ಷೇತ್ರದಲ್ಲೂ ತನ್ನದೇ ಆದ ಛಾಪು ಮೂಡಿಸಿದೆ. ವ್ಯಾಪಾರ-ವ್ಯವಹಾರ ಹಾಗೂ ನವೋದ್ಯಮಿಗಳ ಬೆಳವಣಿಗೆಯ ದೃಷ್ಟಿಯಿಂದ ಸುದ್ದಿ, ಜಾಹೀರಾತುಗಳನ್ನು ಪ್ರಸಾರ ಮಾಡುವ ಮೂಲಕ ಸಂಪರ್ಕ ಕೊಂಡಿಯಾಗಿ ಕೆಲಸ ಮಾಡಲಿದೆ. ಕನ್ನಡ ಮಾಧ್ಯಮ ಜಗತ್ತು ಮುದ್ರಣದಿಂದ ದೃಶ್ಯೀಕರಣದತ್ತ ಹೊರಳಿದ್ದು, ಅದರಲ್ಲೂ ಡಿಜಿಟಲೀಕರಣ ಹೊಸ ಕ್ರಾಂತಿಯನ್ನೇ ಸೃಷ್ಟಿಸಿದೆ. ನವೀನ ತಂತ್ರಜ್ಞಾನದ ಅಂತರ್ಜಾಲ ತಾಣಗಳನ್ನು ‘ಕ್ಲಿಕ್ಕಿ’ಸಿದರೆ ಸಾಕು ಬೆರಳ ತುದಿಯಲ್ಲೇ ಹತ್ತು ಹಲವು ಮಾಹಿತಿ ದೊರೆಯಲಿದೆ. ಇದರ ಭಾಗವಾಗಿ ‘ನಮ್ಮ ಸಿಂಧನೂರು’ ಡಿಜಿಟಲ್ ತಾಣ ರೂಪುಗೊಂಡಿದ್ದು, ತಮ್ಮೆಲ್ಲರ ಸಲಹೆ, ಸಹಕಾರದೊಂದಿಗೆ ಕಾರ್ಯನಿರ್ವಹಿಸಲಿದೆ.
‘ನಮ್ಮ ಸಿಂಧನೂರು’ ಟೀಮ್


Spread the love