ಸಿಂಧನೂರು: ತಹಸೀಲ್ ಆಫೀಸ್‌ನ ಟೈಮ್ ಯಾವುದು ?: ಸಾರ್ವಜನಿಕರ ಪ್ರಶ್ನೆ

Spread the love

ನಮ್ಮ ಸಿಂಧನೂರು, ಮಾರ್ಚ್ 1
ನಗರದ ತಹಸೀಲ್ ಆಫೀಸ್‌ನ ಸಿಬ್ಬಂದಿಯವರು ಸಮಯ ಪಾಲನೆ ಮಾಡದೇ ತಡವಾಗಿ ಕರ್ತವ್ಯಕ್ಕೆ ಹಾಜರಾಗುತ್ತಿದ್ದು, ಗಂಟೆಗಟ್ಟಲೇ ಇವರ ಸಲುವಾಗಿ ಕಾಯಬೇಕಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ. ‘ತಹಸೀಲ್ ಆಫೀಸ್‌ನ ಟೈಮ್ ಯಾವುದು, ಸಿಬ್ಬಂದಿಗಳು ಸರಿಯಾದ ಸಮಯಕ್ಕೆ ಬರದೇ ನಮ್ಮ ಕೆಲಸಗಳು ಆಗುವುದು ಯಾವಾಗ ? ಎಂದು ಸಾರ್ವಜನಿಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

Namma Sindhanuru Click For Breaking & Local News

ಶುಕ್ರವಾರ ಬೆಳಿಗ್ಗೆ 10 ಗಂಟೆಗೆ ಮಿನಿ ವಿಧಾನಸೌಧಕ್ಕೆ ಸಾರ್ವಜನಿಕರೊಬ್ಬರು ಕೆಲಸದ ನಿಮಿತ್ತ ಬಂದಾಗ, ಆವಕ, ಜಾವಕ, ಸಕಾಲ, ಸಹಾಯವಾಣಿ ಕೇಂದ್ರದಲ್ಲಿ ಯಾರೂ ಇಲ್ಲದೇ ಇರುವುದು ಕಂಡುಬಂತು. ಲೆಕ್ಕಶಾಖೆಯಲ್ಲಿ ಮೂವರು ಸಿಬ್ಬಂದಿ ಹಾಜರಿದ್ದರೆ, ಎಸ್‌ಡಿಎ, ಎಫ್‌ಡಿಎ ಸಿಬ್ಬಂದಿ ಕಾಣಸಿಗಲಿಲ್ಲ. ಅಭಿಲೇಖಾಲಯದಲ್ಲಿ ಇಬ್ಬರು ಸಿಬ್ಬಂದಿ ಇದ್ದರು. ಲೆಕ್ಕಶಾಖೆ ವಿಭಾಗದಲ್ಲಿನ ಸಿಬ್ಬಂದಿಯೊಬ್ಬರನ್ನು ‘ಸರ್ ತಹಸೀಲ್ ಆಫೀಸ್‌ನ ಟೈಮಿಂಗ್ ಏನು ಎಂದು ಕೇಳಿದರೆ 10.30 ಎಂದು ಹೇಳಿದರು, ಇನ್ನೊಬ್ಬರನ್ನು ಕೇಳಿದರೆ, 10.15 ಎಂದು ಹೇಳಿದರು, ಸಹಾಯವಾಣಿ ಕೇಂದ್ರದ ಬಳಿ ಇದ್ದ ಸಿಬ್ಬಂದಿಯೊಬ್ಬರನ್ನು ಕೇಳಿದರೆ 10 ಗಂಟೆ ಎಂದು ತಿಳಿಸಿದರು. ಪುನಃ ಅವರನ್ನೇ ಕೇಳಿದರೆ, ಆಗ ತಾನೆ ಬಂದ ಕಿರಿಯ ಸಿಬ್ಬಂದಿಯೊಬ್ಬರತ್ತ ತೋರಿಸಿ ಅವರನ್ನು ಕೇಳಿ ಎಂದರು, ಆ ಸಿಬ್ಬಂದಿಯನ್ನು ಕೇಳಿದರೆ ʼಯಾಕ್ರಿ ಟೈಮ್ ತಂಗಡು ನೀವು ಏನ್ಮಾಡ್ತೀರಿ. ಬ್ಯಾರೆ ಬ್ಯಾರೆ ಕಡೆಯಿಂದ ಬರ‍್ತಾರೆ, ಸ್ವಲ್ಪ ಲೇಟಾಗುತ್ತೆ’ ಎಂದು ಪ್ರತಿಕ್ರಿಯಿಸಿದರು.

Namma Sindhanuru Click For Breaking & Local News

ನಾಲ್ಕು ಸಿಬ್ಬಂದಿಯನ್ನೂ ಕೇಳಿದರೂ ತಹಸೀಲ್ ಆಫೀಸ್‌ನ ಪಕ್ಕಾ ಟೈಮ್ ಗೊತ್ತಾಗಲಿಲ್ಲ. ಅಲ್ಲದೇ ತಹಸೀಲ್ ಆಫೀಸ್‌ನ ಯಾವ ಕಡೆಗೂ ಕಾರ್ಯಾಲಯದ ವೇಳೆಯ ನಮೂದು ಇಲ್ಲದಿರುವುದು ಕಂಡುಬಂತು. ಕೆಲಸದ ನಿಮಿತ್ಯ ಬೆಳಿಗ್ಗೆ 10 ಗಂಟೆಗೆ ಮುಂಚೆಯೇ ಬಂದಿದ್ದ ವಿವಿಧ ಗ್ರಾಮಗಳ ಸಾರ್ವಜನಿಕರು ಸಿಬ್ಬಂದಿಗಳ ಬರುವಿಕೆಗಾಗಿ ಚಾತಕ ಪಕ್ಷಿಯಂತೆ ಕಾಯುತ್ತಿದ್ದುದು ಕಂಡುಬಂತು. ಕೆಲ ಸಾರ್ವಜನಿಕರು ಕಾರ್ಯಾಲಯದ ಒಳಗೆ ಹೋಗುವುದು ಸಿಬ್ಬಂದಿ ಬರದೇ ಇರುವುದನ್ನು ನೋಡುವುದು ಪುನಃ ಮರಳಿ ಹೊರಕ್ಕೆ ವಾಪಸ್ ಆಗುತ್ತಿದ್ದರು. ಸಿಬ್ಬಂದಿ ಬರದೇ ಇರುವುದರಿಂದ ಕಾರ್ಯಾಲಯದ ಆವರಣದಲ್ಲಿ ಅತ್ತಿಂದಿತ್ತ, ಇತ್ತಿದಂತ ತಿರುಗಾಡುತ್ತಿರುವುದು ಗಮನಕ್ಕೆ ಬಂತು.
ಸಮಯ ಪಾಲನೆ ಮರೆತ ಅಧಿಕಾರಿಗಳು:
ಬರಗಾಲದ ಬೇಗೆಯಿಂದ ಕಂಗೆಟ್ಟಿರುವ ರೈತರು ಸೇರಿದಂತೆ ಜನಸಾಮಾನ್ಯರಿಗೆ ಸಕಾಲಕ್ಕೆ ಸೇವೆ ಒದಗಿಸುವ ಹಿನ್ನೆಲೆಯಲ್ಲಿ ಸರಿಯಾದ ಸಮಯಕ್ಕೆ ಕರ್ತವ್ಯಕ್ಕೆ ಹಾಜರಾಗಿ ದಕ್ಷತೆ ಮೆರೆಯಬೇಕಿದ್ದ ಅಧಿಕಾರಿಗಳು ಇಂತಹ ಸಂದರ್ಭದಲ್ಲಿ ಇನ್ನಷ್ಟು ತಡವಾಗಿ ಬರುತ್ತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ರೈತರು ಯಾವುದೇ ಕೆಲಸ ಕಾರ್ಯಗಳ ನಿಮಿತ್ತ ತಹಸೀಲ್ದಾರ್ ಕಾರ್ಯಾಲಯಕ್ಕೆ ಬಂದರೆ ಇಲ್ಲಿನ ಅಧಿಕಾರಿಗಳ ಬೇಜವಾಬ್ದಾರಿ, ಸಮಯ ಪಾಲನೆಯಲ್ಲಿನ ನಿರ್ಲಕ್ಷö್ಯದಿಂದಾಗಿ ಅಲೆದಾಡುವಂತಾಗಿದೆ. ಕೆಲ ಸಿಬ್ಬಂದಿಯವರನ್ನAತೂ ತಾಲೂಕು ಕಾರ್ಯಾಲಯದಲ್ಲಿ ಹುಡುಕಾಡಲು ದುರ್ಬೀನು ಹಿಡಿಯಬೇಕಿದೆ ಎಂದು ಸಾರ್ವಜನಿಕರೊಬ್ಬರು ದೂರಿದರು.
‘ಏನ್ ಬುಡ್ರಿ ಸರ್ ಒಳಬಳ್ಳಾರಿ, ಬಾದರ್ಲಿ, ಗಿಣಿವಾರದ ಕಡೇಲಿಂದ ಬಸ್ ಹಿಡಕಂಡು ಮುಂಜಾಲೇ ತಹಸೀಲ್ ಆಫೀಸ್‌ಗೆ ರ‍್ತೀವಿ, ಇಲ್ನೋಡಿದ್ರ ಅಧಿಕಾರಿಗುಳ ಸಿಗಂಗಿಲ್ಲ, ಕೆಲ ಅಧಿಕಾರಿಗಳನ್ನ ನೋಡ್ಬೇಕಂದ್ರ ದೇವ್ರು ಪ್ರತ್ಯಕ್ಷ ಆದಂಗ ಆಗುತ್ತ. ನಮ್ಮ ತಿಪ್ಲ ಏನಾನ ಇವ್ರಿಗೆ ಹೇಳಿದ್ರ, ಹರಕಂದು ಬಿದ್ದಂಗ ಮಾಡ್ತಾರ, ಹಿಂಗಾರ ಹೆಂಗ್ರಿ. ಇಲ್ಲೀನು ಸಮಯಕ್ಕೆ ಸರಿಯಾಗಿ ಸಿಗಂಗಿಲ್ಲ, ಫೋನ್ಯಾಗ ನೋಡಿದ್ರ ಇಲ್ಲಿಗಿ ರ‍್ರಿ ಅಂತಾರ. ನಾವು ಎಲ್ಲಿಗೆ ಹೋಗ್ಬೇಕ್ರಿ. ಇಲಿಗೆ ಸಂಕಟ, ಬೆಕ್ಕಿಗೆ ಚೆಲ್ಲಾಟ ಆದಂಗ ಆಗೈತಿ’ ನೋಡ್ರಿ ನಮ್ಮ ಕಥಿ ಎಂದು ತಾಲೂಕಿನ ಗ್ರಾಮಸ್ಥರೊಬ್ಬರು ಅಳಲು ತೋಡಿಕೊಂಡರು.


Spread the love

Leave a Reply

Your email address will not be published. Required fields are marked *