ಸಂಯುಕ್ತ ಹೋರಾಟ ಕರ್ನಾಟಕದಿಂದ ಪಂಜಿನ ಮೆರವಣಿಗೆ

Spread the love

ನಮ್ಮ ಸಿಂಧನೂರು, ಫೆಬ್ರವರಿ 27
ದೆಹಲಿಯಲ್ಲಿ ನಡೆದಿರುವ ರೈತ ಚಳವಳಿಯ ಮೇಲೆ ಕೇಂದ್ರ ಸರ್ಕಾರದ ದಮನವನ್ನು ಖಂಡಿಸಿ, ಡಬ್ಲುö್ಯಟಿಒದಿಂದ ಭಾರತ ಹೊರಬರಬೇಕೆಂದು ಒತ್ತಾಯಿಸಿ, ಸಂಯುಕ್ತ ಕಿಸಾನ್ ಮೋರ್ಚಾ ದೇಶಾದ್ಯಂತ ನೀಡಿದ್ದ ಕರೆಯ ಭಾಗವಾಗಿ ಸಂಯುಕ್ತ ಹೋರಾಟ ಕರ್ನಾಟಕದಿಂದ ಸಿಂಧನೂರಿನಲ್ಲಿ ಸೋಮವಾರ ಬಸವ ಸರ್ಕಲ್‌ನಿಂದ ಗಾಂಧಿ ಸರ್ಕಲ್‌ವರೆಗೆ ಪಂಜಿನ ಮೆರವಣಿಗೆ ನಡೆಸಿ ಪ್ರತಿಭಟಿಸಲಾಯಿತು.

Namma Sindhanuru Click For Breaking & Local News

ಈ ಸಂದರ್ಭದಲ್ಲಿ ಮಾತನಾಡಿದ ಕರ್ನಾಟಕ ರೈತ ಸಂಘದ ರಾಜ್ಯಾಧ್ಯಕ್ಷ ಡಿ.ಎಚ್.ಪೂಜಾರ್, ಸಂಯುಕ್ತ ಕಿಸಾನ್ ಮೋರ್ಚಾ ಸೇರಿದಂತೆ 200ಕ್ಕೂ ಹೆಚ್ಚು ಸಂಘಟನೆಗಳ ನೇತೃತ್ವದಲ್ಲಿ, ಎಂಎಸ್‌ಪಿ ಜಾರಿಗೊಳಿಸುವುದು, ವಿದ್ಯುತ್ ಬಿಲ್ ವಾಪಸ್ ಪಡೆಯುವುದು ಸೇರಿದಂತೆ ಹತ್ತು ಹಲವು ಬೇಡಿಕೆ ಈಡೇರಿಕೆಗೆ ದೆಹಲಿಯ ಗಡಿಗಳಲ್ಲಿ ರೈತರು ನಡೆಸುತ್ತಿರುವ ಹೋರಾಟವನ್ನು ಹತ್ತಿಕ್ಕಲು ಕೇಂದ್ರ ಸರ್ಕಾರ ಪೊಲೀಸರನ್ನು ಛೂಬಿಟ್ಟಿದೆ. ಈಗಾಗಲೇ ಮರ‍್ನಾಲ್ಕು ರೈತರು ಪೊಲೀಸರ ದಾಳಿಗೆ ಪ್ರಾಣ ಕಳೆದುಕೊಂಡಿದ್ದಾರೆ. ಈ ಹಿಂದೆ ದೆಹಲಿಯಲ್ಲಿ ರೈತರು ಹೋರಾಟ ನಡೆಸಿದ ಸಂದರ್ಭದಲ್ಲಿ ಹಲವು ಬೇಡಿಕೆ ಈಡೇರಿಸುವ ಭರವಸೆ ನೀಡಿದ್ದ ಕೇಂದ್ರ ಸರ್ಕಾರ ಇಲ್ಲಿಯವರೆಗೂ ಏನೊಂದು ಕ್ರಮ ಕೈಗೊಳ್ಳದೇ ವಂಚಿಸಿದೆ. ಕೇಂದ್ರ ಅಂಬಾನಿ, ಆದಾನಿಗಳ ಏಜೆಂಟನಂತೆ ವರ್ತಿಸುತ್ತಿದೆ ಎಂದು ಕಿಡಿಕಾರಿದರು.

Namma Sindhanuru Click For Breaking & Local News

ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯ ಮುಖಂಡ ಮುಖಂಡ ಅಮೀನ್‌ಪಾಷಾ ದಿದ್ದಿಗಿ ಮಾತನಾಡಿ, ಬಿಜೆಪಿ ಸರ್ಕಾರ ರೈತರನ್ನು ದಿನದಿಂದ ದಿನಕ್ಕೆ ಹತ್ತಿಕ್ಕುತ್ತಿದೆ. ರೈತರ ಆದಾಯವನ್ನು ದ್ವಿಗುಣ ಮಾಡುವುದಾಗಿ ಹೇಳಿ, ಈಗ ಕೃಷಿಯನ್ನು ಕಾರ್ಪೋರೇಟೀಕರಣ ಮಾಡಲು ಹೊರಟಿದೆ. ರೈತ, ಕಾರ್ಮಿಕ ವಿರೋಧಿ ನೀತಿಗಳು ಜನರನ್ನು ಬೀದಿ ಬೀಳುವಂತೆ ಮಾಡಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಿಪಿಐ ಜಿಲ್ಲಾ ಕಾರ್ಯದರ್ಶಿ ಬಾಷುಮಿಯಾ, ಪ್ರಗತಿಪರ ಸಂಘಟನೆಗಳ ಮುಖಂಡರಾದ ಚಂದ್ರಶೇಖರ ಗೊರಬಾಳ, ಡಿ.ಎಚ್.ಕಂಬಳಿ, ಪ್ರಾಂತ ರೈತ ಸಂಘದ ಬಸವಂತರಾಯ ಗೌಡ, ಮನುಜಮತ ಬಳಗದ ಕಾರ್ಯದರ್ಶಿ ಬಸವರಾಜ ಬಾದರ್ಲಿ, ಬಿ.ಲಿಂಗಪ್ಪ, ಶಂಕರ ಗುರಿಕಾರ, ಮಂಜುನಾಥ ಗಾಂಧಿನಗರ, ಅಪ್ಪಣ್ಣ ಕಾಂಬ್ಳೆ, ಅಂಗನವಾಡಿ ಕಾರ್ಯಕರ್ತೆಯರ ಸಂಘದ ಚಂದ್ರಶೇಖರ ಕ್ಯಾತ್ನಟ್ಟಿ, ಸಬ್ಜಲಿ ಸಾಬ್, ಶಿವರಾಜ ಉಪ್ಪಲದೊಡ್ಡಿ, ಉಮೇಶ ಉದ್ಬಾಳ, ರಫಿ, ನಾಗರಾಜ ಹಸಮಕಲ್ ಸೇರಿದಂತೆ ಇನ್ನಿತರರು ಪಂಜಿನ ಮೆರವಣಿಗೆಯಲ್ಲಿ ಭಾಗವಹಿಸಿದ್ದರು.

Namma Sindhanuru Click For Breaking & Local News

Spread the love

Leave a Reply

Your email address will not be published. Required fields are marked *