ಕೃಷ್ಣೆ-ತುಂಗಭದ್ರೆಯಿದ್ದರೂ ಬಾಯಾರಿದ ರಾಯಚೂರು

Spread the love

ನಮ್ಮ ಸಿಂಧನೂರು, ಫೆಬ್ರವರಿ 20
ರಾಯಚೂರು ಜಿಲ್ಲೆಯಲ್ಲಿ ಕೃಷ್ಣಾ ಮತ್ತು ತುಂಗಭದ್ರಾ ನದಿಗಳು ಹರಿದು ಹೋಗಿದ್ದರೂ ಶುದ್ಧ ಕುಡಿವ ನೀರಿನ ಸೌಕರ್ಯ ಕನ್ನಡಿಯೊಳಗಿನ ಗಂಟಾಗಿದೆ. ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಬೇಜವಾಬ್ದಾರಿತನದಿಂದ ಕುಡಿವ ನೀರಿಗಾಗಿ ಜನರು ಅಲೆದಾಡುವುದು ಇಂದಿಗೂ ತಪ್ಪಿಲ್ಲ. ಇನ್ನೂ ಬೇಸಿಗೆಯಲ್ಲಂತೂ ಜನ-ಜಾನುವಾರುಗಳು ನೀರಿಲ್ಲದೇ ಪರಿತಪಿಸುವ ಪರಿಸ್ಥಿತಿ ಸಾಮಾನ್ಯವಾಗಿದೆ. ಕೇವಲ ಬೇಸಿಗೆಯಲ್ಲಷ್ಟೇ ಅಲ್ಲ ವರ್ಷದ 12 ತಿಂಗಳುಗಳ ಕಾಲವೂ ರಾಯಚೂರು ಜಿಲ್ಲೆಯ ಕೆಲವು ಹಳ್ಳಿಗಳ ಜನರು ಕುಡಿವ ನೀರಿಗಾಗಿ ಸಂಕಷ್ಟ ಎದುರಿಸುತ್ತಾರೆ. ಯಾವುದೇ ಗ್ರಾಮಕ್ಕೆ ಹೋದರೂ ಅಲ್ಲಿನ ಜನರ ಮೊದಲ ಬೇಡಿಕೆಯೇ ಕುಡಿವ ನೀರಿನ ಸೌಕರ್ಯದ್ದಾಗಿರುತ್ತದೆ. ಮೂಲಭೂತ ಸಮಸ್ಯೆಯನ್ನೇ ಜಿಲ್ಲಾಡಳಿತ ಹಾಗೂ ತಾಲೂಕು ಆಡಳಿತಗಳು ಕಡೆಗಣನೆ ಮಾಡುತ್ತ ಬಂದಿವೆ.

Namma Sindhanuru Click For Breaking & Local News
ಲಿಂಗಸುಗೂರು ತಾಲೂಕಿನ ಗಡಿ ಭಾಗದಲ್ಲಿ ಕೃಷ್ಣಾ ನದಿಗೆ ನಿರ್ಮಿಸಿರುವ ತಿಂಥಿಣಿ ಬ್ರಿಡ್ಜ್‌ನ ನೋಟ ( ಸಂಗ್ರಹ ಚಿತ್ರ)

ಕಲುಷಿತ ನೀರು ಕುಡಿದು ಸಮಸ್ಯೆಗೀಡಾದ ಪ್ರಕರಣಗಳ ಕುರಿತು ಮೆಲುಕು: ಜೂನ್ 2022ರಲ್ಲಿ ರಾಯಚೂರು ನಗರಸಭೆ ವ್ಯಾಪ್ತಿಯ ಹಲವು ವಾರ್ಡ್ಗಳಲ್ಲಿ ಕಲುಷಿತ ನೀರು ಕುಡಿದು 7 ಜನರ ಸಾವು, 220ಕ್ಕೂ ಹೆಚ್ಚು ಜನರು ಆಸ್ಪತ್ರೆಗೆ ದಾಖಲು, 800ಕ್ಕೂ ಹೆಚ್ಚು ಜನರು ಹೊರರೋಗಿಗಳಾಗಿ ಆಸ್ಪತ್ರೆಯಲ್ಲಿ ಔಷಧೋಪಚಾರ, ಜುಲೈ 2022ರಲ್ಲಿ ಮಾನ್ವಿ ತಾಲೂಕಿನ ವಲ್ಕಂದಿನ್ನಿ ಮತ್ತು ಜೂಕೂರು ಗ್ರಾಮಗಳಲ್ಲಿ ಕಲುಷಿತ ನೀರು ಕುಡಿದ ಓರ್ವ ಮಹಿಳೆ ಮೃತಪಟ್ಟರೆ, 40ಕ್ಕೂ ಹೆಚ್ಚು ಗ್ರಾಮಸ್ಥರು ಅಸ್ವಸ್ಥರಾಗಿದ್ದರು. ಜೂನ್ 2023ರಲ್ಲಿ ದೇವದುರ್ಗ ತಾಲೂಕಿನ ರೇಕಲಮರಡಿ ಗ್ರಾಮದಲ್ಲಿ ಕಲುಷಿತ ನೀರು ಕುಡಿದು ಓರ್ವ ಮಗು ಸಾವು, 30ಕ್ಕೂ ಹೆಚ್ಚು ಜನರು ಅಸ್ವಸ್ಥ, ಲಿಂಗಸುಗೂರು ತಾಲೂಕಿನ ಗೊರೆಬಾಳ ಗ್ರಾಮದಲ್ಲಿ ಕಲುಷಿತ ನೀರು ಕುಡಿದು 25ಕ್ಕೂ ಹೆಚ್ಚು ಜನರು ಅನಾರೋಗ್ಯಕ್ಕೀಡಾಗಿದ್ದರು. ಹೀಗೆ ಸಾಲು ಸಾಲು ಪ್ರಕರಣಗಳು ಜನರನ್ನು ಸಾವು-ನೋವಿನ ದವಡೆಗೆ ತಳ್ಳಿವೆ. 2024ರಲ್ಲಿ ಬರಗಾಲ ಆವರಿಸಿದ್ದು, ನೀರಿಗಾಗಿ ಜನ-ಜಾನುವಾರುಗಳು ತತ್ತರಿಸಿವೆ.
ಹಾಳ್ಯಾಗ ಗುಮ್ಮಿಗಳು, ನೀರಿನ ಕೆರೆಗಳು, ದೊಡ್ಡ ದೊಡ್ಡ ಟ್ಯಾಂಕ್‌ಗಳು ನಿರ್ಮಾಣಗೊಂಡು ತುಳುಕುತ್ತಿವೆ: “ನೋಡ್ರಿ ಯಪ್ಪಾ ನಮ್ಮೂರಾಗ ಈ ಬ್ಯಾಸಿಗಾಗ ಮನಿಷೇರಿಗ್ಯ, ದನಕ ಕುಡ್ಯಾಕ ನೀರ ತರಬಕಂದ್ರ ಹೊಯ್ಕೊಳ್ಳದಷ್ಟ ಉಳದೈತಿ. ಊರಾಗ ನೀರಿಲ್ಲ ಅಂತ ಪಂಚಾಯಿತರ‍್ನ ಕೇಳಾಕ ಹೋದ್ರ, ಅವರು ಮೇಲಿನರ‍್ನ ತೋರಸ್ತಾರ, ಮೇಲಿನವರತ್ರ ಹೋದ್ರ ಅವ್ರು ಇನ್ನೊಬ್ರ ಹೆಸರೇಳ್ತಾರ. ಹಾಳ್ಯಾಗ ಮಾತ್ರ ಗುಮ್ಮಿ, ಟ್ಯಾಂಕಿ, ಕೆರೆ ತುಂಬಿ ತುಳುಕುತಾವ ನೋಡ್ರಿ” ಎಂದು ಮಸ್ಕಿ ತಾಲೂಕು ತಾಂಡಾಗಳ ಜನರು ಆರೋಪಿಸುತ್ತಾರೆ.
ಯಾವುದೇ ಹಳ್ಳಿ, ಪಟ್ಟಣಗಳಲ್ಲಿ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಓಡೋಡಿ ಬರುವ ಜಿಲ್ಲಾ ಮತ್ತು ತಾಲೂಕು ಆಡಳಿತದ ಅಧಿಕಾರಿಗಳು, ಆರೋಗ್ಯ ಇಲಾಖೆಯವರು ಆನಂತರ ಮತ್ತೆ ಪ್ರತ್ಯಕ್ಷರಾಗುವುದು ಇನ್ನೊಂದು ಪ್ರಕರಣ ನಡೆದ ನಂತರವೇ. ಸ್ವಾತಂತ್ರö್ಯ ಬಂದು ೭೫ ವರ್ಷಗಳ ನಂತರವೂ ಜಿಲ್ಲೆಯಲ್ಲಿ ಕನಿಷ್ಠ ಶುದ್ಧ ಕುಡಿವ ನೀರಿನ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಲು ಆಗಿಲ್ಲ. ಎಲ್ಲದರಲ್ಲೂ ಪರ್ಸೆಂಟೇಜ್ ಬೇಕೆನ್ನುವ ರಾಜಕಾರಣದಿಂದ ಹತ್ತಾರು ಯೋಜನೆಗಳು ಕಾಗದಕ್ಕೆ ಸೀಮಿತವಾಗಿದ್ದು, ಅನುಷ್ಠಾನಗೊಂಡ ಬೆರಳೆಣಿಕೆಯಷ್ಟು ಕಳಪೆ ಕಾಮಗಾರಿಯಿಂದ ಅಧ್ವಾನ ಸ್ಥಿತಿಗೆ ತಲುಪಿವೆ ಎಂದು ನೊಂದ ಗ್ರಾಮಸ್ಥರು ಆರೋಪಿಸುತ್ತಾರೆ.
ನೀರಿನ ಯೋಜನೆಗಳ ಹೆಸರಲ್ಲಿ ಲೂಟಿ: ಜಿಲ್ಲೆಯ ರಾಯಚೂರು, ಸಿಂಧನೂರು, ಲಿಂಗಸುಗೂರು, ದೇವದುರ್ಗ, ಮಾನ್ವಿ, ಮಸ್ಕಿ, ಸಿರವಾರ ತಾಲೂಕು ವ್ಯಾಪ್ತಿಯಲ್ಲಿ ಕುಡಿವ ನೀರಿನ ಯೋಜನೆಗಳ ಹೆಸರಿನಲ್ಲಿ ಲಕ್ಷ ಲಕ್ಷ ರೂಪಾಯಿ ಲೂಟಿ ಹೊಡೆಯಲಾಗಿದೆ. ಸಣ್ಣ ಸೇರಿದಂತೆ ಹಲವು ಬಹುಗ್ರಾಮ ಕುಡಿವ ನೀರಿನ ಯೋಜನೆಗಳು ನಿಷ್ಕಿçಯಗೊಂಡಿವೆ. ಕಳಪೆ ಕಾಮಗಾರಿ ಮತ್ತು ಬೋಗಸ್ ಬಿಲ್ ಎತ್ತುವಳಿಯಿಂದ ಹಲವು ಕಾಮಗಾರಿಗಳು ಜಾರಿಯಾಗದಿರುವುದೇ ಜನರು ಇಂದಿಗೂ ಹನಿ ನೀರಿಗೆ ಪರಿತಪಿಸುವುದಕ್ಕೆ ಕಾರಣ ಎಂದು ಸಾರ್ವಜನಿಕರು ದೂರುತ್ತಾರೆ. ಪ್ರದರ್ಶನಕ್ಕೆ ಸೀಮಿತವಾದ ಕುಡಿವ ನೀರಿನ ಘಟಕಗಳು: ಗ್ರಾಮಾಂತರ ಪ್ರದೇಶಕ್ಕೆ ನೀರು ಪೂರೈಸುವ ಉದ್ದೇಶದಿಂದ ಶುದ್ಧ ಕುಡಿವ ನೀರಿನ ಘಟಕಗಳನ್ನು ಅಲ್ಲಲ್ಲಿ ಸ್ಥಾಪಿಸಲಾಗಿದ್ದು, ಆದರೆ ಬಹುತೇಕ ಘಟಕಗಳು ಸ್ಥಗಿತಗೊಂಡಿವೆ. ಪಂಚಾಯಿತಿ ಮತ್ತು ಏಜೆನ್ಸಿಯವರ ಅಸಮರ್ಥ ನಿರ್ವಹಣೆಯಿಂದ ಜನರು ಆರ್ಸೆನಿಕ್, ಫ್ಲೋರೈಡ್ ಅಂಶವುಳ್ಳ ನೀರನ್ನು ಕುಡಿಯುತ್ತಿದ್ದಾರೆ. ಈ ಬಗ್ಗೆ ಪಂಚಾಯಿತಿಯವರಿಗೆ, ತಾಲೂಕು ಹಾಗೂ ಜಿಲ್ಲಾಡಳಿತದ ಗಮನಕ್ಕೆ ತಂದರೂ ಪ್ರಯೋಜನಕ್ಕೆ ಬಂದಿಲ್ಲ ಎಂದು ಜಿಲ್ಲೆಯ ಹಲವು ಗ್ರಾಮಸ್ಥರು ಹೇಳುತ್ತಾರೆ.

Leave a Reply

Your email address will not be published. Required fields are marked *