ಸಿಂಧನೂರು: ಎಐಸಿಸಿಟಿಯುನಿಂದ ಬೆಳಗಾವಿ ಚಲೋ, ತ್ಯಾಜ್ಯ ವಿಲೇವಾರಿ ಚಾಲಕರಿಂದ ಪೋಸ್ಟರ್‌ ಬಿಡುಗಡೆ

Spread the love

ಲೋಕಲ್‌ ನ್ಯೂಸ್‌: ಬಸವರಾಜ ಹಳ್ಳಿ
ನಮ್ಮ ಸಿಂಧನೂರು, ಡಿಸೆಂಬರ್‌ 15

ರಾಜ್ಯದ ಎಲ್ಲಾ ಘನತ್ಯಾಜ್ಯ ವಿಲೇವಾರಿ ಮಾಡುವ ವಾಹನ ಚಾಲಕರು, ಲೋಡರ್ಸ್‌ಗಳು, ಕ್ಲೀನರ್ ಕಾರ್ಮಿಕರಿಗೆ ಗುತ್ತಿಗೆ ಪದ್ಧತಿಯನ್ನು ರದ್ದುಗೊಳಿಸಿ, ಕಾರ್ಮಿಕರನ್ನು ಖಾಯಂಗೊಳಿಸಬೇಕು ಹಾಗೂ ಈ ಕಾರ್ಮಿಕರಿಗೆ ಮಾಸಿಕ ವೇತನ ರೂ.42,000 ರೂ. ನಿಗದಿಗೊಳಿಸುವುದು ಸೇರಿದಂತೆ ವಿವಿಧ ಹಕ್ಕೊತ್ತಾಯಗಳಿಗೆ ಒತ್ತಾಯಿಸಿ , ಕರ್ನಾಟಕ ಪ್ರಗತಿಪರ ತ್ಯಾಜ್ಯ ಸಾಗಿಸುವ ವಾಹನ ಚಾಲಕರ ಮತ್ತು ಸಹಾಯಕರ ಸಂಘ (ಎಐಸಿಸಿಟಿಯು ಸಂಯೋಜಿತ) ವತಿಯಿಂದ ದಿನಾಂಕ: 17-12-2025ರಂದು ಬೆಳಗಾವಿ ಸುವರ್ಣಸೌಧ ಚಲೋ ಹೋರಾಟ ಹಮ್ಮಿಕೊಳ್ಳಲಾಗಿದ್ದು, ಸೋಮವಾರ ನಗರದ ಪ್ರವಾಸಿ ಮಂದಿರದಲ್ಲಿ ಪೋಸ್ಟರ್‌ಗಳನ್ನು ಬಿಡುಗಡೆಗೊಳಿಸಲಾಯಿತು.
ಈ ಸಂದರ್ಭದಲ್ಲಿ ದುರುಗಪ್ಪ, ವೀರೇಶ, ಮೌನೇಶ ಕವಿತಾಳ, ನಾಗರಾಜ ನಾಯಕ, ನಂದಪ್ಪ, ಶರಣಬಸವ, ಅಲ್ಲಾಸಾಬ್‌, ಕರಿಯಪ್ಪ ಬೆಳಗುರ್ಕಿ ಇನ್ನಿತರರು ಇದ್ದರು.

Namma Sindhanuru Click For Breaking & Local News

Spread the love

Leave a Reply

Your email address will not be published. Required fields are marked *