ಲೋಕಲ್ ನ್ಯೂಸ್: ಬಸವರಾಜ ಹಳ್ಳಿ
ನಮ್ಮ ಸಿಂಧನೂರು, ಸೆಪ್ಟೆಂಬರ್ 06
ನಗರದ ಪಿ.ಡಬ್ಲ್ಯು.ಡಿ.ಕ್ಯಾಂಪ್ ವ್ಯಾಪ್ತಿಯಲ್ಲಿ ಹೊಸ 11ಕೆ.ವಿ. ವಿದ್ಯುತ್ ಮಾರ್ಗ ನಿರ್ಮಾಣ ಕಾರ್ಯ ನಡೆಯುತ್ತಿರುವುದರಿಂದ ಸೆ.7ರಂದು ಭಾನುವಾರ ಸಿಟಿಯ ಹಲವು ವಿದ್ಯುತ್ ಮಾರ್ಗಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಮತ್ತು ಐ.ಪಿ.ಫೀಡರ್‌ನ ವಿದ್ಯುತ್ ಸರಬರಾಜು ಸಮಯದಲ್ಲಿ ವ್ಯತ್ಯಯವಾಗಲಿದೆ ಎಂದು ಜೆಸ್ಕಾಂನ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರ (ವಿ) ಕಾರ್ಯ ಮತ್ತು ಪಾಲನಾ ಸಿಂಧನೂರು ವಿಭಾಗದ ಶ್ರೀನಿವಾಸ್ ಗೊಲ್ಲರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ಕುರಿತು ಶನಿವಾರ ಪ್ರಕಟಣೆ ನೀಡಿರುವ ಅವರು, “110ಕೆ.ವಿ. ಸಿಂಧನೂರು ಉಪ ಕೇಂದ್ರದ ವ್ಯಾಪ್ತಿಯಲ್ಲಿ ಬರುವ ಪಿ.ಡಬ್ಲ್ಯು.ಡಿ ಕ್ಯಾಂಪ್ ಏರಿಯಾದ ವಾಸವಿ ನಗರ, ಮಸ್ಕಿ ರಸ್ತೆ ಸುತ್ತಮತ್ತಲಿನ ಏರಿಯಾ, ವಿನಾಯಕ ನಗರ, ಯಲ್ಲಮ್ಮಗುಡಿ ಏರಿಯಾ, ಇಡಿ ಕ್ವಾರ್ಟರ್ಸ್, ಶಾಖಾದ್ರಿ ದರ್ಗಾ ಹಿಂಭಾಗದ ಪ್ರದೇಶದಲ್ಲಿ ಬೆಳಿಗ್ಗೆ 10 ಗಂಟೆಯಿಂದ ಸಾಯಂಕಾಲ 6 ಗಂಟೆಯವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ.
ಕೃಷಿ ಆಧಾರಿತ ವಿದ್ಯುತ್ ಮಾರ್ಗದಲ್ಲಿ ಸಮಯ ಬದಲಾವಣೆ
110 ಕೆ.ವಿ ಉಪಕೇಂದ್ರ ಸಿಂಧನೂರು ವ್ಯಾಪ್ತಿಯ, ಎಫ್ 3 ಪಗಡದಿನ್ನಿ, ಕೃಷಿ ಆಧಾರಿತ ವಿದ್ಯುತ್ ಮಾರ್ಗಗಳಿಗೆ ದಿನಾಂಕ : 07-09-2025ರಂದು ಬೆಳಿಗ್ಗೆ 3 ಗಂಟೆಯಿAದ 10ರವರೆಗೆ 3 ಫೇಸ್ ವಿದ್ಯುತ್ ಸರಬರಾಜು ಮಾಡಲಾಗುವುದು ಎಂದು ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
