ಲೋಕಲ್ ನ್ಯೂಸ್: ಬಸವರಾಜ ಹಳ್ಳಿ
ನಮ್ಮ ಸಿಂಧನೂರು, ಜುಲೈ 24
ನಗರದ ಕರಿಯಪ್ಪ ಲೇಔಟ್‌ನ ಮಡಿಲು ನಿಲಯದಲ್ಲಿ 25-07-2025 ಶುಕ್ರವಾರ ಸಾಯಂಕಾಲ 6.30 ಗಂಟೆಗೆ ಬಸವಕೇಂದ್ರದಿಂದ ವಚನ ಶ್ರಾವಣ ಪ್ರಾರಂಭೋತ್ಸವದ ಹಿನ್ನೆಲೆಯಲ್ಲಿ ಮನೆಯಲ್ಲಿ ಮಹಾಮನೆ ಉದ್ಘಾಟನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಬಸವಕೇಂದ್ರದ ಅಧ್ಯಕ್ಷ ಕರೇಗೌಡ ಕುರಕುಂದ ತಿಳಿಸಿದ್ದಾರೆ.
ಈ ಕುರಿತು ಗುರುವಾರ ಪ್ರಕಟಣೆ ನೀಡಿರುವ ಅವರು, “ಬುದ್ಧ, ಬಸವ, ಅಂಬೇಡ್ಕರ್ ಇವರ ಬಗ್ಗೆ ಚಿಂತನೆ” ವಿಷಯ ಕುರಿತು ಉಪನ್ಯಾಸ ಏರ್ಪಡಿಸಲಾಗಿದ್ದು, ಸಾನಿಧ್ಯವನ್ನು ಯದ್ದಲದೊಡ್ಡಿಯ ಮಹಾಲಿಂಗ ಸ್ವಾಮೀಜಿ ವಹಿಸುವರು. ಬಸವ ಕೇಂದ್ರದ ಗೌರವ ಅಧ್ಯಕ್ಷ ಸಿದ್ರಾಮಪ್ಪ ಸಾಹುಕಾರ ಅಧ್ಯಕ್ಷತೆ ವಹಿಸುವರು. ನಿರುಪಾದೆಪ್ಪ ವಕೀಲರು ಸಂವಿಧಾನ ಪೀಠಿಕೆಯನ್ನು ಓದುವರು, ಬಸವಕೇಂದ್ರ ಕಾರ್ಯದರ್ಶಿ ಬಸವಲಿಂಗಪ್ಪ ಅವರು ಪ್ರಾಸ್ತಾವಿಕ ಮಾತನಾಡುವರು. ಚಿಂತಕ ಚಂದ್ರಶೇಖರ ಗೊರಬಾಳ ಅವರು ಅನುಭಾವದ ನುಡಿಗಳನ್ನಾಡುವರು. ನಾರಾಯಣಪ್ಪ ಮಾಡಸಿರವಾರ ಮತ್ತು ಸಂಗಡಿಗರು ವಚನ ಗಾಯನ ಪ್ರಸ್ತುತಪಡಿಸುವರು ಎಂದು ಅವರು ತಿಳಿಸಿದ್ದಾರೆ.