ಲೋಕಲ್ ನ್ಯೂಸ್: ಬಸವರಾಜ ಹಳ್ಳಿ
ನಮ್ಮ ಸಿಂಧನೂರು, ಜುಲೈ 14
ಜೀ ಕನ್ನಡ ಟಿವಿ ವಾಹಿನಿ ಸರಿಗಮಪ ಖ್ಯಾತಿಯ ದ್ಯಾಮೇಶ್ ಕಾರಟಗಿ ಅವರು ನಗರಕ್ಕೆ ಸೋಮವಾರ ಸಂಜೆ ಭೇಟಿ ನೀಡಿದರು. ಸ್ನೇಹಿತರನ್ನು ಭೇಟಿಯಾಗಲು ಇಲ್ಲಿಗೆ ಆಗಮಿಸಿದ್ದ ಅವರನ್ನು ಕರ್ನಾಟಕ ರಕ್ಷಣಾ ವೇದಿಕೆಯ (ನಾರಾಯಣ ಗೌಡ ಬಣ) ಜಿಲ್ಲಾಧ್ಯಕ್ಷ ಡಿಶ್ ಗಂಗಣ್ಣ, ಮಸ್ಕಿ ತಾಲೂಕು ಘಟಕದ ಅಧ್ಯಕ್ಷ ದುರಗರಾಜ ವಟಗಲ್ ಸೇರಿದಂತೆ ಇನ್ನಿತರರು ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಿದರು. ಪ್ರಶಾಂತ್ ಕಾರಟಗಿ, ಹುಸೇನ್ಸಾಬ್ ಸೇರಿದಂತೆ ಇನ್ನಿತರರು ಇದ್ದರು.
