ಲೋಕಲ್ ನ್ಯೂಸ್: ಬಸವರಾಜ ಹಳ್ಳಿ
ನಮ್ಮ ಸಿಂಧನೂರು, ಜುಲೈ 04
ಯುವಕವಿ ಪ್ರಶಾಂತ್ ದಾನಪ್ಪ ಮಸ್ಕಿ ಅವರು ರಚಿಸಿದ, ಬೀದಿಸಾಲು ಪ್ರಕಾಶನದಿಂದ ಹೊರತಂದಿರುವ ‘ಅಂಬೇಡ್ಕರ ಯಾರು ಅಂಬೇಡ್ಕರ’ ಹೋರಾಟದ ಹಾಡುಗಳ ಕೃತಿ, ಜುಲೈ 13 ಭಾನುವಾರದಂದು ನಗರದ ಟೌನ್ಹಾಲ್ನಲ್ಲಿ ಬೆಳಿಗ್ಗೆ 10.30ಕ್ಕೆ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಲೋಕಾರ್ಪಣೆಗೊಳಿಸಲಾಗುವುದು ಎಂದು ಕ್ರಾಂತಿಕಾರಿ ಸಾಂಸ್ಕೃತಿಕ ವೇದಿಕೆ (ಆರ್ಸಿಎಫ್) ಪ್ರಕಟಣೆ ತಿಳಿಸಿದೆ.
ದಲಿತ ಹೋರಾಟಗಾರ, ಚಿಂತಕ ದಾನಪ್ಪ ನಿಲೋಗಲ್ ಮಸ್ಕಿ ಅವರ ಪುತ್ರರಾಗಿರುವ ಪ್ರಶಾಂತ್ ದಾನಪ್ಪ ಅವರು, ಜನಪರ, ಜೀವಪರ ಹಾಗೂ ಕ್ರಾಂತಿಕಾರಿ ಹೋರಾಟದ ಹಾಡುಗಳನ್ನು ಕಟ್ಟುವ ಮೂಲಕ ಈಗಾಗಲೇ ರಾಜ್ಯದಾದ್ಯಂತ ಗಮನ ಸೆಳೆದಿದ್ದಾರೆ. ಅವರ ಚೊಚ್ಚಲ ಕೃತಿಯ ಬಗ್ಗೆ ಯುವ ಬರಹಗಾರರಲ್ಲಿ ಕುತೂಹಲ ಇದೆ. ಈ ಕಾರ್ಯಕ್ರಮಕ್ಕೆ ಸಾಹಿತ್ಯಾಸಕ್ತರು, ಸಾಹಿತಿಗಳು, ಲೇಖಕರು, ಹೋರಾಟಗಾರರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವಂತೆ ಸಂಘಟಕರು ಮನವಿ ಮಾಡಿದ್ದಾರೆ.