ಲೋಕಲ್ ನ್ಯೂಸ್: ಬಸವರಾಜ ಹಳ್ಳಿ
ನಮ್ಮ ಸಿಂಧನೂರು, ಜುಲೈ 04
ತುಂಗಭದ್ರಾ ಜಲಾಶಯದಿಂದ ಎಡದಂಡೆ ಮುಖ್ಯ ನಾಲೆಗೆ ಜುಲೈ 2ರಂದೇ ನೀರು ಹರಿಬಿಡಲಾಗಿದ್ದು, 54ನೇ ಉಪಕಾಲುವೆಗೆ ನೀರು ತಲುಪಿದೆ. ಮಸ್ಕಿ ತಾಲೂಕಿನ ರಂಗಾಪುರ ಗ್ರಾಮದ ಪಕ್ಕದ ಮಲ್ಲಿಕಾರ್ಜುನ ಕ್ಯಾಂಪ್ ಬಳಿ ಹಾದು ಹೋಗಿರುವ 54ನೇ ಉಪ ಕಾಲುವೆಯಲ್ಲಿ ಶುಕ್ರವಾರ ನೀರಿನ ಹರಿವು ಕಂಡುಬAತು.
ಜಲಾಶಯದ 33 ಗೇಟ್‌ಗಳನ್ನು ಹೊಸದಾಗಿ ಅಳವಡಿಸುವ ಹಿನ್ನೆಲೆಯಲ್ಲಿ 27-06-2025ರಂದು ಬೆಂಗಳೂರಿನಲ್ಲಿ ನಡೆದ 124ನೇ ಐಸಿಸಿ ಸಭೆಯಲ್ಲಿ ಎಡದಂಡೆ ಮುಖ್ಯ ಕಾಲುವೆಗೆ ಜುಲೈ 2ರಿಂದ ನವೆಂಬರ್ 30, 2025ರವರೆಗೆ ನೀರು ಹರಿಸಲು ನಿರ್ಧರಿಸಿದ್ದನ್ನು ಸ್ಮರಿಸಬಹುದು. ಈ ಬಾರಿ ನೀರು ಬೇಗನೆ ಕಾಲುವೆ ಹರಿಯುತ್ತಿರುವುದರಿಂದ ಕೃಷಿ ಚಟುವಟಿಕೆಗಳು ಚುರುಕುಗೊಂಡಿದ್ದು, ಸಸಿ ನಾಟಿಗೆ ರೈತರು ಭರದ ಸಿದ್ಧತೆ ನಡೆಸುತ್ತಿದ್ದಾರೆ.
ಡ್ಯಾಂನಲ್ಲಿ ಸದ್ಯದ ನೀರಿನ ಸಂಗ್ರಹ
ಸದ್ಯ ಡ್ಯಾಂನಲ್ಲಿ ದಿನಾಂಕ: 04-07-2025 ಶುಕ್ರವಾರದಂದು 75.84 ಟಿಎಂಸಿ ನೀರು ಸಂಗ್ರಹವಿದ್ದು, 27,441 ಕ್ಯೂಸೆಕ್ ನೀರು ಒಳಹರಿವಿದೆ, 54,938 ಕ್ಯೂಸೆಕ್ ನೀರು ಹೊರಗೆ ಹರಿಬಿಡಲಾಗುತ್ತಿದೆ.