ಲೋಕಲ್ ನ್ಯೂಸ್: ಬಸವರಾಜ ಹಳ್ಳಿ
ನಮ್ಮ ಸಿಂಧನೂರು, ಜುಲೈ 03
ನಗರದ ಕೋರ್ಟ್ ಎದುರಿಗೆ, ಹಣ್ಣಿನ ಮಾರುಕಟ್ಟೆ ಬಳಿ ಲಾರಿಯೊಂದು ಮಹಿಳೆಯ ಕಾಲಿನ ಮೇಲೆ ಹರಿದ ಘಟನೆ ಗುರುವಾರ ಮಧ್ಯಾಹ್ನ ನಡೆದಿದೆ. ಗಂಗಾವತಿ ಮಾರ್ಗದಿಂದ ಸಿಂಧನೂರು ಕಡೆಗೆ ಬರುತ್ತಿದ್ದ ಲಾರಿಯೊಂದು, ಮಹಿಳೆ ರಸ್ತೆ ದಾಟುತ್ತಿದ್ದಾಗ ಕಾಲಿನ ಮೇಲೆ ಹರಿದಿದ್ದರಿಂದ ಒಂದು ಕಾಲು ಮುಂಬದಿ ಗಿಜಿ ಗಿಜಿಯಾಗಿದೆ. ಅಪಘಾತಕ್ಕೀಡಾದ ಮಹಿಳೆ ಕ್ಷಣಕಾಲ ತೀವ್ರ ಬಳಲಿದ್ದರಿಂದ, ಸಾರ್ವಜನಿಕರ ಗುಂಪು ಜಮಾಯಿಸಿದ್ದು ಕಂಡುಬಂತು. ಮಹಿಳೆಯ ಊರು ತಿಳಿದುಬಂದಿಲ್ಲ.