ಲೋಕಲ್ ನ್ಯೂಸ್: ಬಸವರಾಜ ಹಳ್ಳಿ
ನಮ್ಮ ಸಿಂಧನೂರು, ಏಪ್ರಿಲ್ 24
ನಗರದಲ್ಲಿ ಮೇ 17, 18ರಂದು ಮೇ ಸಾಹಿತ್ಯ ಮೇಳ ನಡೆಯಲಿದ್ದು, ಇದರ ಪ್ರಯುಕ್ತ ಪದವಿ ಹಾಗೂ ಸ್ನಾತಕ ಪದವಿ ವಿದ್ಯಾರ್ಥಿಗಳಿಗೆ ಪ್ರಬಂಧ ಸ್ಪರ್ಧೆ ಏರ್ಪಡಿಸಲಾಗಿದೆ ಎಂದು ಪ್ರಬಂಧ ಸ್ಪರ್ಧೆಯ ಸಂಚಾಲಕರಾದ ಸಿದ್ದಪ್ಪ ಬಾವಿಮನಿ, ಡಾ.ಅರುಣಕುಮಾರ ಭೇರಿಗಿ, ತಿಮ್ಮಣ್ಣ ರಾಮತ್ನಾಳ, ರಮೇಶ ಹಲಗಿ, ತಾಯಪ್ಪ ತಿಡಿಗೋಳ ತಿಳಿಸಿದ್ದಾರೆ.
ಈ ಕುರಿತು ಗುರುವಾರ ಪತ್ರಿಕಾ ಪ್ರಕಟಣೆ ನೀಡಿರುವ ಅವರು, 371(ಜೆ) ಅನುಷ್ಠಾನಕ್ಕೆ ಹತ್ತು ವರ್ಷಗಳು : ಸಾಧನೆ ಮತ್ತು ಸವಾಲುಗಳು ವಿಷಯ ಕುರಿತು ಪ್ರಬಂಧ ಸ್ಪರ್ಧೆ ಆಯೋಜಿಸಲಾಗಿದೆ. ದಿನಾಂಕ: 26-04-2025 ಹೆಸರು ನೊಂದಾಯಿಸುವ ಕೊನೆಯ ದಿನವಾಗಿದ್ದು, ದಿನಾಂಕ: 28-04-2025 ರಂದು ಬೆಳಿಗ್ಗೆ 10 ಗಂಟೆಗೆ ನಗರದ ಎಲ್‌ಬಿಕೆ ಪದವಿ ಪೂರ್ವ ಹಾಗೂ ನೋಬಲ್ ಪದವಿ ಮಹಾವಿದ್ಯಾಲಯದಲ್ಲಿ ಸ್ಪರ್ಧೆ ನಡೆಯಲಿದೆ ಎಂದು ಅವರು ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗೆ 8618291780, 9986779687, 9916125380, 97411920292, 9731266979ಗೆ ಸಂಪರ್ಕಿಸಲು ಕೋರಲಾಗಿದೆ.