ನಮ್ಮ ಸಿಂಧನೂರು/ ಸಿರವಾರ ಮಾರ್ಚ್ 24
ಸಿರವಾರ ಪಟ್ಟಣದ ಚುಕ್ಕಿ ಕಲ್ಯಾಣ ಮಂಟಪದಲ್ಲಿ ದಿನಾಂಕ: 28-03-2025ರಂದು ಬೆಳಿಗ್ಗೆ 10 ಗಂಟೆಗೆ ಮಹಾಶಕ್ತಿ ಮಹಿಳಾ ಸಬಲೀಕರಣ ಸಂಘದಿಂದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಹಮ್ಮಿಕೊಳ್ಳಲಾಗಿದೆ ಎಂದು ಸಂಸ್ಥಾಪಕ ರಾಜ್ಯಾಧ್ಯಕ್ಷೆ ವಿಜಯರಾಣಿ ಸಿರವಾರ ತಿಳಿಸಿದ್ದಾರೆ. ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಸಂವಿಧಾನ ಮತ್ತು ಸಮಾನತೆಯಲ್ಲಿ ಮಹಿಳೆ ಘೋಷವಾಕ್ಯದೊಂದಿಗೆ ಮಹಿಳಾ ವಿಚಾರ ಸಂಕಿರಣ, ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರಿಗೆ ಸನ್ಮಾನ ಸಮಾರಂಭ ಹಮ್ಮಿಕೊಳ್ಳಲಾಗಿದೆ. ಈ ಸಮಾರಂಭದ ಸಾನ್ನಿಧ್ಯವನ್ನು ಅಭಿನವ ಸೋಮನಾಥ ಶಿವಾಚಾರ್ಯ ಸ್ವಾಮೀಜಿ ಬೃಹನ್ಮಠ ನವಲಕಲ್, ಡಾ.ಪಂಚಾಕ್ಷರಿ ಶಿವಾಚಾರ್ಯ ಸ್ವಾಮೀಜಿ ಬೃಹನ್ಮಠ ನೀಲಗಲ್-ಗಣೇಕಲ್, ಫಾ.ಶಾಮ್ನಳನ್ ಇನ್ಫೆಂಟ್ ಜೀಸಸ್ ಶಾಲೆ ರಾಯಚೂರು ಹಾಗೂ ಮಂಜೂರು ಸಾಬ್ ಖಾಜಿ ಗುರುಗಳು ಸಿರವಾರ ಇವರು ವಹಿಸುವರು. ಸಮಾರಂಭದಲ್ಲಿ ಸಚಿವರು, ಶಾಸಕರು, ಚಿಂತಕರು ಇನ್ನಿತರರು ಭಾಗವಹಿಸುವರು ಎಂದು ಅವರು ವಿವರಿಸಿದ್ದಾರೆ.